ಅ.4ರಂದು ತೆರೆಗೆ ಬರಲು ಸಜ್ಜಾಗಿರುವ ‘ಗೋಪಿಲೋಲ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಮತ್ತು ಎಸ್ ನರಸಿಂಹ ಮೂರ್ತಿ ನಿರ್ದೇಶನ, ನಿರ್ಮಾಣದ ‘ಕಂಟೈನರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಅ.4ರಂದು ತೆರೆಗೆ ಬರಲು ಸಜ್ಜಾಗಿರುವ ‘ಗೋಪಿಲೋಲ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಎಸ್ ಆರ್ ಸನತ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಮಂಜುನಾಥ್ ಅರಸ್ ನಾಯಕ, ನಿಮಿಷ ನಾಯಕಿಯಾಗಿ ನಟಿಸಿದ್ದಾರೆ. ನಿರ್ದೇಶಕ ಆರ್ ರವೀಂದ್ರ, ‘ಇದು ನೈಸರ್ಗಿಕ ಕೃಷಿಯ ಕತೆಯನ್ನು ಹೇಳುವ ಸಿನಿಮಾ’ ಎಂದರು. ನಿರ್ಮಾಪಕ ಎಸ್ ಆರ್ ಸನತ್ ಕುಮಾರ್, ‘ನಿರ್ಮಾಣದ ಜತೆಗೆ ಚಿತ್ರಕ್ಕೆ ಕತೆ ಕೂಡ ಬರೆದಿದ್ದೇನೆ. ನಮ್ಮದು ಕೃಷಿ ಕುಟುಂಬ. ಹೀಗಾಗಿ ಕತೆ ಬರೆಯುವುದಕ್ಕೆ ಸುಲಭ ಆಯಿತು’ ಎಂದರು. ಮಂಜುನಾಥ್ ಅರಸ್, ‘ಚಿತ್ರಕ್ಕೆ ಸಹ ನಿರ್ಮಾಪಕನಾಗುವ ಜತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಇದು ನನ್ನ ಮೊದಲ ನಟನೆಯ ಸಿನಿಮಾ. ಕೃಷಿ ಜತೆಗೆ ಪ್ರೇಮ ಕತೆಯನ್ನು ಹೇಳುವ ಸಿನಿಮಾ ಇದು’ ಎಂದರು.
ಕಂಟೈನರ್ ಸಿನಿಮಾ ಟ್ರೇಲರ್ ಬಿಡುಗಡೆ: ಎಸ್ ನರಸಿಂಹ ಮೂರ್ತಿ ನಿರ್ದೇಶನ, ನಿರ್ಮಾಣದ ‘ಕಂಟೈನರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಕುರಿತು ನಿರ್ದೇಶಕ ನರಸಿಂಹ ಮೂರ್ತಿ, ‘ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಬೃಹದಾಕಾರದ ಯಂತ್ರವನ್ನು ಸ್ಪೇನ್‌ಗೆ ಸಾಗಿಸುವಾಗ ಕಾರ್ಮಿಕನೊಬ್ಬ ಆ ಯಂತ್ರದೊಳಗೆ ಬಂಧಿಯಾಗುತ್ತಾನೆ. ಆತನ ಸ್ಥಿತಿ ಏನಾಯ್ತು ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ. ದತ್ತಾತ್ರೇಯ ಪೂಜಾರಿ ಚಿತ್ರದ ನಾಯಕ. ಪುಣ್ಯಗೌಡ ನಾಯಕಿ. ಮಂಜುನಾಥ್ ಜಿ, ರಂಗನಾಥ್, ಮಂಜು.ಬಿ.ಕೆ, ಉದಯಕುಮಾರ್ ನಟಿಸಿದ್ದಾರೆ.
undefined
ಹೊಸತರ ಚಿತ್ರದ ಫಸ್ಟ್ ಲುಕ್ ಬಿಡುಗಡೆ: ಅಫ್ಜಲ್ ನಿರ್ದೇಶನದ ‘ಹೊಸತರ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ಕುರಿತು ಅಫ್ಜಲ್, ‘ಈ ಚಿತ್ರದ ಕತೆ ಆರ್‌ಜಿವಿ ಎಂಬ ಪಾತ್ರದ ಸುತ್ತ ಸಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಅಂಶಗಳನ್ನು ಒಳಗೊಂಡ ಸಿನಿಮಾ ಇದು. ಕತೆ ಹಾಗೂ ಚಿತ್ರಕಥೆ ಸ್ವಲ್ಪ ವಿಭಿನ್ನವಾಗಿರುವುದರಿಂದ ಚಿತ್ರಕ್ಕೆ ‘ಹೊಸತರ’ ಎಂದು ಹೆಸರಿಡಲಾಗಿದೆ. ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು. ಗುಲ್ಬರ್ಗಾ ಮೂಲದ ಶ್ರೀವಿಜಯ್ ಚಿತ್ರದ ನಿರ್ಮಾಪಕರು. ರಾಜೀವ್ ಗನೇಸನ್ ಕ್ಯಾಮೆರಾ, ರಾಜು ಎಮ್ಮಿಗಾನೂರು ಸಂಗೀತ ಇದೆ. ಬ್ರಹ್ಮ, ಖುಷಿ ಕೊಠಾರಿ, ನವ್ಯಾ, ರಣವೀರ್, ನಾಗರಾಜ ಗುಬ್ಬಚ್ಚಿ, ಸೆವೆನ್ ರಾಜ್, ಸ್ವರ್ಣಚಂದ್ರ ತಾರಾಬಳಗದಲ್ಲಿದ್ದಾರೆ.
Prajwal Devaraj: ಕಂಡು ಕೇಳರಿಯದ ಬ್ರಹ್ಮರಾಕ್ಷಸನ ಕಥೆ ಹೇಳ್ತೀನಿ: ನಿರ್ದೇಶಕ ಲೋಹಿತ್
ರಾವಣ ರಾಜ್ಯದಲ್ಲಿ ನವದಂಪತಿಗಳು ಫಸ್ಟ್ ಲುಕ್ ಬಿಡುಗಡೆ: ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಕ ಶಂಕರ್ ಗುರು ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ ಈ ಸಿನಿಮಾದ ನಾಯಕ ನಾಯಕಿ. ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್ ನಿರ್ಮಾಪಕರು. ಗುರುಪ್ರಸಾದ್, ಸುನೀಲ್ ಕುಮಾರ್ ದೇಸಾಯಿ ಗರಡಿಯಲ್ಲಿ ಪಳಗಿರುವ ರಂಗ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಡಾರ್ಕ್ ಸೋಷಿಯಲ್ ಡ್ರಾಮಾ ಕಥಾಹಂದರ ಚಿತ್ರದ್ದು.