ಒಂದ್ವೇಳೆ ಹುಡುಗಿಯಾಗಿ ಹುಟ್ಟಿದ್ರೆ... ಅವ್ರನ್ನು... ಮನದ ಆಸೆ ತೆರೆದಿಟ್ಟ ಶಿವರಾಜ್​ ಕುಮಾರ್​!

Published : Apr 18, 2025, 05:59 PM ISTUpdated : Apr 18, 2025, 08:18 PM IST
ಒಂದ್ವೇಳೆ ಹುಡುಗಿಯಾಗಿ ಹುಟ್ಟಿದ್ರೆ... ಅವ್ರನ್ನು... ಮನದ ಆಸೆ ತೆರೆದಿಟ್ಟ ಶಿವರಾಜ್​ ಕುಮಾರ್​!

ಸಾರಾಂಶ

'45' ಚಿತ್ರದ ಚೆನ್ನೈ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಕಮಲ್ ಹಾಸನ್ ಅವರ ಅಭಿಮಾನಿಯಾದ ಶಿವಣ್ಣ, ಹುಡುಗಿಯಾಗಿ ಹುಟ್ಟಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗಸ್ಟ್ ೧೫, ೨೦೨೫ ರಂದು ಬಿಡುಗಡೆಯಾಗಲಿರುವ ಈ ಪ್ಯಾನ್-ಇಂಡಿಯಾ ಚಿತ್ರದ ಕಥೆ ತಕ್ಷಣ ಇಷ್ಟವಾಯಿತು ಎಂದರು.

ಶಿವರಾಜ್ ಕುಮಾರ್, ಉಪೇಂದ್ರ ಅವರ ನಟನೆಯ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '45' ಟೀಸರ್ ನಿನ್ನೆ ಅನಾವರಣಗೊಂಡಿದೆ.  ದಕ್ಷಿಣ ಭಾರತದ ಪ್ರಸಿದ್ಧ ನಟರನ್ನೊಳಗೊಂಡಿರುವ ಈ ಚಿತ್ರ ಅದ್ದೂರಿಯಾಗಿ ಚಿತ್ರೀಕರಣಗೊಂಡಿದ್ದು, ಆಕ್ಷನ್-ಫ್ಯಾಂಟಸಿ ನಿರೂಪಣೆ, ಉತ್ತಮ ಕಥೆಯಾಗಿದೆ.  ಆಗಸ್ಟ್ 15, 2025 ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.  ಅರ್ಜುನ್ ಜನ್ಯ ನಿರ್ದೇಶಿಸಿದ ಈ ಚಿತ್ರ  ವಿಷುಯಲ್ ಎಫೆಕ್ಟ್‌ನಿಂದ ಗಮನ ಸೆಳೆಯುತ್ತಿದೆ. ಇದು ನಿರ್ದೇಶಕ ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. 
 
ಚಿತ್ರದ ತಮಿಳು ಆವೃತ್ತಿಯ ಟೀಸರ್ ಚೆನ್ನೈನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಶಿವರಾಜ್​ ಕುಮಾರ್​, ಉಪೇಂದ್ರ, ಅರ್ಜುನ್​ ಜನ್ಯ ಸೇರಿದಂತೆ ಸಿನಿಮಾ ತಂಡದ ಹಲವರು ಉಪಸ್ಥಿತರಿದ್ದರು. ಚೆನ್ನೈನಲ್ಲಿಯೇ ಹುಟ್ಟಿ ಬೆಳೆದಿರುವ ಶಿವರಾಜ್​ ಕುಮಾರ್​ ಅವರು ತಮ್ಮ ಬಾಲ್ಯದ ದಿನಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.  ಚೆನ್ನೈಗೆ ಬಂದಾಗಲೆಲ್ಲ ನನಗೆ ಬಾಲ್ಯದ ದಿನಗಳು ನೆನಪಾಗುತ್ತವೆ. ಹುಟ್ಟಿದ್ದು, ಓದಿದ್ದು ಎಲ್ಲವು ಇಲ್ಲಿಯೇ. ಮಾತ್ರವಲ್ಲದೇ  ನಟನಾಗಿ ನನಗೆ ಮೊದಲ ಅವಕಾಶ ಸಿಕ್ಕಿದ್ದು ಕೂಡ ಇದೇ ಜಾಗದಲ್ಲಿ ಎಂದು ಚೆನ್ನೈ ಅನ್ನು ಹಾಡಿ ಹೊಗಳಿದರು.  45 ಚಿತ್ರದ ಬಗ್ಗೆ ಮಾತನಾಡುತ್ತಾ,  ನಿರ್ದೇಶಕ ಅರ್ಜುನ್ ಜನ್ಯಾ ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ಅದಕ್ಕಾಗಿ ಒಪ್ಪಿಕೊಂಡೆ. ಇದು ಪ್ರೇಕ್ಷಕರಿಗೆ ಖಂಡಿತವಾಗಿಯೂ ಹೊಸ ಅನುಭವವನ್ನು ನೀಡುತ್ತದೆ ಎಂದರು.
 

ಪ್ಯಾರೀಸ್​ನಲ್ಲಿ ಶಿವಣ್ಣಗೆ ಬ್ರೈನ್​ ಸರ್ಜರಿ, ಹಾರ್ಟ್​ಗೆ ಸ್ಟೆಂಟ್​! ಶಾಕಿಂಗ್​ ವಿಷ್ಯ ರಿವೀಲ್​..

ಇದೇ ವೇಳೆ ಕುತೂಹಲದ ಮಾಹಿತಿಯೊಂದನ್ನು ಅವರು ತೆರೆದಿಟ್ಟರು. ಅದೇನೆಂದರೆ ತಮಗೆ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್​ ಎಂದರೆ ಸಿಕ್ಕಾಪಟ್ಟೆ ಇಷ್ಟ. ನಾನು ಸದಾ ಅವರಂತೆಯೇ ಆಗಲು ಬಯಸಿದ್ದೆ ಎಂದ ಶಿವಣ್ಣ, ಕಮಲ ಹಾಸನ್​ ಅವರ ರೂಪದ ಗುಣಗಾನ ಮಾಡುತ್ತಾ, ಒಂದು ವೇಳೆ ನಾನೇನಾದರೂ ಹುಡುಗಿಯಾಗಿ ಹುಟ್ಟಿದ್ದರೆ ಕಮಲ ಹಾಸನ್​ ಅವರನ್ನೇ ಮದುವೆಯಾಗುತ್ತಿದ್ದೆ. ಅವರು ಅಷ್ಟು ಸ್ಮಾರ್ಟ್​ ಆಗಿದ್ದಾರೆ ಎಂದು ಚಟಾಕಿ ಹಾರಿಸಿದರು. ಇದೇ ವೇಳೆ ತಮ್ಮ ಜೀವನದ ಹಲವು ಏಳುಬೀಳುಗಳ ಬಗ್ಗೆಯು ಅವರು ಮಾತನಾಡಿದರು. ನನ್ನ ಬದುಕು ಕೂಡ ಹಲವು ಏಳು ಬೀಳುಗಳಿಂದ ಕೂಡಿದೆ. ನಟನಾದ ನಂತರವೂ ಯಶಸ್ಸು ತಾನಾಗಿಯೇ ಬರಲಿಲ್ಲ. ಹಲವು ಬಾರಿ  ವೈಫಲ್ಯಗಳನ್ನು ಅನುಭವಿಸಿದ್ದೇನೆ. ಆದರೆ, ಅವುಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಈ ಮಟ್ಟಿಗೆ ಏರಿದೆ ಎಂದರು.
 
 ಇನ್ನು ನಿನ್ನೆ ಮುಂಬೈನಲ್ಲಿ ನಡೆದಿದ್ದ ಸಮಾರಂಭದಲ್ಲಿ, ಅರ್ಜುನ್ ಜನ್ಯಾ, 45' ಕೇವಲ ಸಿನಿಮಾವಲ್ಲ. ಇದು ಒಂದು ಭಾವನೆ, ಕನಸು ನನಸಾಗಿದೆ. ಇದು ನಮ್ಮ ಉದ್ಯಮದ ಐಕಾನ್‌ಗಳನ್ನು ಜೊತೆಯಾಗಿ ಮಾಡಿದೆ. ಪ್ರತಿಯೊಬ್ಬ ಭಾರತೀಯರನ್ನು ನೋಡುವಂತೆ ಚಿತ್ರ ಮಾಡಲಾಗಿದೆ ಎಂದಿದ್ದರು.  ಶಿವರಾಜಕುಮಾರ್ ಮಾತನಾಡಿ, ಕಥೆ ಕೇಳಿದಾಗ ತಕ್ಷಣ ನಾನು ಅದರ ಭಾಗವಾಗಬೇಕೆಂದು ಅನಿಸಿತು. '45' ಅಪರೂಪದ ಶಕ್ತಿ ಮತ್ತು ಸಿನಿಮೀಯ ದೃಷ್ಟಿಯನ್ನು ಹೊಂದಿದೆ, ಅದು ದೇಶದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ. ಇದು ಶಾಶ್ವತವಾದ ಪ್ರಭಾವ ಬೀರುವ ಶಕ್ತಿಯುತ ಕಥೆಯಾಗಿದೆ ಎಂದ್ದಿದರೆ, ಉಪೇಂದ್ರ ಅವರು, ಈ ಚಿತ್ರವು ಎಲ್ಲ ಅರ್ಥದಲ್ಲಿಯೂ ಜೀವನಕ್ಕಿಂತ ದೊಡ್ಡದಾಗಿದೆ. ಅತ್ಯಾಧುನಿಕ ದೃಶ್ಯ ವೈಭವ ಮತ್ತು ಹಿಡಿತದ ನಿರೂಪಣೆಯೊಂದಿಗೆ ಫ್ಯಾಂಟಸಿ, ಆಕ್ಷನ್ ಮತ್ತು ಭಾವನೆಗಳನ್ನು ಹೊಂದಿರುವ ಸಿನಿಮಾ ಆಗಿದೆ. ಅಂತಹ ವಿಶಿಷ್ಟವಾದ ಸಿನಿಮಾದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ ಎಂದರು.
 

ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್​ ಮಾತು

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?