ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಲಿರೋ 'ಮುಂಗಾರು ಮಳೆ' ಪ್ರೀತಮ್.. 'ಬೃಂದಾವಿಹಾರಿ' ದರ್ಶನಕ್ಕೆ ಸಜ್ಜಾಗುತ್ತಿರೋ 'ಗಂಡು ಮೆಟ್ಟಿದ ನಾಡು'..!

Published : Oct 10, 2026, 09:55 AM IST
Golden Star Ganesh

ಸಾರಾಂಶ

‘ಬೃಂದಾವಿಹಾರಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೇವಲ ಚಿತ್ರದ ಪ್ರಚಾರ ಕಾರ್ಯಕ್ರಮವಾಗಿ ಉಳಿಯದೆ, ಅಭಿಮಾನಿಗಳಿಗೆ ಹಾಡು, ನೃತ್ಯ ಮತ್ತು ಹಾಸ್ಯದ ಮನರಂಜನೆಯನ್ನು ಒದಗಿಸುವ ವೇದಿಕೆಯಾಗುವ ನಿರೀಕ್ಷೆಯಿದೆ. ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಿತ್ರತಂಡ ಸಿನಿಪ್ರಿಯರಲ್ಲಿ ಮನವಿ ಮಾಡಿದೆ. ಅಕ್ಟೋಬರ್ 16ರಂದು ತೆರೆಗೆ ಬರಲಿದೆ ಗಣೇಶ್ ಅಭಿನಯದ ‘ಬೃಂದಾವಿಹಾರಿ’..

ಗಣೇಶ್ ‘ಬೃಂದಾವಿಹಾರಿ’ ಪ್ರೀ-ರಿಲೀಸ್ ಇವೆಂಟ್‌, ಗೆ ಕ್ಷಣಗಣನೆ! ಒಂದೇ ವೇದಿಕೆಯಲ್ಲಿ ತಾರೆಯರ ಸಂಗಮ, ಡ್ಯಾನ್ಸ್‌, ಕಾಮಿಡಿ ಧಮಾಕಾ! Golden Star Ganesh’s film ‘Brindavihari’ pre-release event in Hubballi. 

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬೃಂದಾವಿಹಾರಿ’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅದ್ಧೂರಿ ಕಾರ್ಯಕ್ರಮದ ಮೂಲಕ ಅಭಿಮಾನಿಗಳನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಗಣೇಶ್ ಅಭಿಮಾನಿಗಳಿಗೆ ಈ ಕಾರ್ಯಕ್ರಮ ಮತ್ತೊಂದು ಹಬ್ಬವಾಗುವ ನಿರೀಕ್ಷೆಯಿದೆ.

ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ. ಅಕ್ಟೋಬರ್ 16ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ನಡೆಯಲಿರುವ ಈ ಕಾರ್ಯಕ್ರಮದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ಐದು ಹಾಡುಗಳು ಈಗಾಗಲೇ ಹಿಟ್, ಮತ್ತೊಂದು ಹಾಡಿನ ಬಿಡುಗಡೆ!

‘ಬೃಂದಾವಿಹಾರಿ’ ಚಿತ್ರದ ಸಂಗೀತ ಈಗಾಗಲೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಿನಿಮಾದ ಐದು ಹಾಡುಗಳು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರಿಂದ ಗಮನ ಸೆಳೆದಿವೆ. ಇದೀಗ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಚಿತ್ರದ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಹೊಸ ಹಾಡಿನ ಸೊಬಗನ್ನು ಸವಿಯುವ ಅವಕಾಶವೂ ಅಭಿಮಾನಿಗಳಿಗೆ ಸಿಗಲಿದೆ.

ಈ ಚಿತ್ರಕ್ಕೆ ಶ್ರೀನಿವಾಸ ರಾಜು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಣೇಶ್‌ಗೆ ನಾಯಕಿಯಾಗಿ ದೇವಿಕಾ ಭಟ್ ಕಾಣಿಸಿಕೊಂಡಿದ್ದು, ಮಾಳವಿಕಾ ಶರ್ಮಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟ ರಂಗಾಯಣ ರಘು, ಹಾಸ್ಯನಟ ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ, ಮನರಂಜನೆ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ಸಿದ್ಧವಾಗುತ್ತಿದೆ.

ದೇಶಾದ್ಯಂತ ಸುಮಾರು 1,300 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಕನ್ನಡದ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೆಯುತ್ತಿದೆ.

ಗಣೇಶ್, ದೇವಿಕಾ ಭಟ್ ಡ್ಯಾನ್ಸ್‌; ಕಾಮಿಡಿ ಕಿಲಾಡಿಗಳಿಂದ ನಗೆಯ ಹಬ್ಬ!

ಪ್ರೀ-ರಿಲೀಸ್ ಇವೆಂಟ್‌ನ ಪ್ರಮುಖ ಆಕರ್ಷಣೆಗಳಲ್ಲಿ ಗಣೇಶ್ ಮತ್ತು ದೇವಿಕಾ ಭಟ್ ಅವರ ನೃತ್ಯ ಪ್ರದರ್ಶನವೂ ಒಂದು. ‘ಬೃಂದಾವಿಹಾರಿ’ ಚಿತ್ರದ ಹಾಡಿಗೆ ಈ ಜೋಡಿ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದು, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಲಿದೆ. ಬಿಗ್‌ಬಾಸ್ ಖ್ಯಾತಿಯ ಕಿಶನ್ ಹಾಗೂ ಅವರ ತಂಡದಿಂದಲೂ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ.

ಇಷ್ಟೇ ಅಲ್ಲದೆ, ಹಾಸ್ಯದ ಹೊನಲನ್ನೇ ಹರಿಸಲು ‘ಕಾಮಿಡಿ ಕಿಲಾಡಿಗಳು’ ತಂಡದ ಕಲಾವಿದರು ಸಜ್ಜಾಗಿದ್ದಾರೆ. ಜಗ್ಗಪ್ಪ, ಮಂಜು ಪಾವಗಡ, ಗಿಲ್ಲಿ ನಟ ಸೇರಿದಂತೆ ಹಲವು ಹಾಸ್ಯ ಕಲಾವಿದರು ವಿಶೇಷ ಕಾಮಿಡಿ ಸ್ಕಿಟ್‌ಗಳ ಮೂಲಕ ಪ್ರೇಕ್ಷಕರನ್ನು ನಗಿಸಲಿದ್ದಾರೆ. ಹೀಗಾಗಿ ಸಿನಿಮಾ ಹಾಡು, ಡ್ಯಾನ್ಸ್ ಮತ್ತು ಕಾಮಿಡಿ ಸೇರಿದಂತೆ ಮನರಂಜನೆಯ ಹಲವು ಬಗೆಯ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಮೂಡಿಬರಲಿವೆ.

ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ನಾಯಕ ನಟ ಗಣೇಶ್, ನಾಯಕಿ ದೇವಿಕಾ ಭಟ್, ನಿರ್ದೇಶಕ ಶ್ರೀನಿವಾಸ ರಾಜು, ನಿರ್ಮಾಪಕ ಸಮೃದ್ಧಿ ಮಂಜುನಾಥ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗವಹಿಸಲಿದ್ದಾರೆ. ಹಿರಿಯ ನಟ ರಂಗಾಯಣ ರಘು, ಸಾಧು ಕೋಕಿಲ, ಗಿಲ್ಲಿ ನಟ, ಜಗ್ಗಪ್ಪ, ಮಂಜು ಪಾವಗಡ ಹಾಗೂ ಕುರಿ ಪ್ರತಾಪ್ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ವೀರೇಂದ್ರ ಪಪ್ಪಿ, ರಾಜು ಗೌಡ ಮತ್ತು ನಟ ಡಾರ್ಲಿಂಗ್ ಕೃಷ್ಣ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಒಟ್ಟಿನಲ್ಲಿ, ‘ಬೃಂದಾವಿಹಾರಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೇವಲ ಚಿತ್ರದ ಪ್ರಚಾರ ಕಾರ್ಯಕ್ರಮವಾಗಿ ಉಳಿಯದೆ, ಅಭಿಮಾನಿಗಳಿಗೆ ಹಾಡು, ನೃತ್ಯ ಮತ್ತು ಹಾಸ್ಯದ ಮನರಂಜನೆಯನ್ನು ಒದಗಿಸುವ ವೇದಿಕೆಯಾಗುವ ನಿರೀಕ್ಷೆಯಿದೆ. ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಿತ್ರತಂಡ ಸಿನಿಪ್ರಿಯರಲ್ಲಿ ಮನವಿ ಮಾಡಿದೆ. ಅಕ್ಟೋಬರ್ 16ರಂದು ತೆರೆಗೆ ಬರಲಿರುವ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್‌ ಬರೋವರೆಗೂ ಸಿನಿಮಾ ನಿರ್ದೇಶನ ಮಾಡಲ್ಲ: ತರುಣ್‌ ಸುಧೀರ್‌ ಪ್ರತಿಜ್ಞೆ- ಅವರು ಹೇಳಿದ್ದೇನು
ತೆರೆಯ ಮೇಲೆ ಮ್ಯಾಜಿಕ್ ಸೃಷ್ಟಿಸಿದ ತಂತ್ರಜ್ಞರು: 'ಪ್ರೇಮದ ಊರಲಿ' ಗೆಲುವಿನ ಹಿಂದಿನ ಹೀರೋಗಳು ಇವರೇ!