ಕನ್ನಡ ರಾಜ್ಯೋತ್ಸವಕ್ಕಿಲ್ಲ ಅಪ್ಪು ನಟನೆಯ 'ಗಂಧದ ಗುಡಿ'

Published : Jul 07, 2022, 12:48 PM IST
ಕನ್ನಡ ರಾಜ್ಯೋತ್ಸವಕ್ಕಿಲ್ಲ ಅಪ್ಪು ನಟನೆಯ 'ಗಂಧದ ಗುಡಿ'

ಸಾರಾಂಶ

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೀತಿಯ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪುನೀತ್ ಗಂಧದ ಗುಡಿ ಇನ್ನೇು ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಕನ್ನಡ ರಾಜ್ಯೋತ್ಸವಕ್ಕಿಲ್ಲ ಅಪ್ಪು ನಟನೆಯ ಗಂಧದ ಗುಡಿ

ಚಿತ್ರದ ಬಿಡುಗಡೆ ಇನ್ನೂ ತಡವಾಗಬಹುದು ಎಂದ ನಿರ್ದೇಶಕರು

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಾಕ್ಷ್ಯಚಿತ್ರ ‘ಗಂಧದ ಗುಡಿ’ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೀತಿಯ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪುನೀತ್ ಗಂಧದ ಗುಡಿ ಇನ್ನೇು ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಭಿಮಾನಿಗಳು ಕುತೂಹಲಿದ ಕಾಯುತ್ತಿದ್ದರು. ಆದರೀಗ ಅಪ್ಪು ಅಭಿಮಾನಿಗಳಿಗೆ ಬೇಸರ ಸುದ್ದಿ ಹೌರಬಿದ್ದಿದೆ. ಕರ್ನಾಕಟ ರತ್ನ ಪುನೀತ್ ಗುಂಧದ ಗುಡಿ ಚಿತ್ರ ಕನ್ನಡ ರಾಜೋತ್ಯವಕ್ಕೆ ಬರಲ್ಲ ಎಂದು ನಿರ್ದೇಶಕ ಅಮೋಘವರ್ಷ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಅಮೋಘವರ್ಷ ಚಿತ್ರದ ಬಿಡುಗಡೆ ಇನ್ನೂ ತಡವಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಪಿಆರ್‌ಕೆ ಬ್ಯಾನರ್‌ನಿಂದ ನಿರ್ಮಾಣವಾಗುತ್ತಿರುವ ಈ ಚಿತ್ರ ನವೆಂಬರ್‌ನಲ್ಲಿ, ಕನ್ನಡ ರಾಜ್ಯೋತ್ಸವದ ವೇಳೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ರಕ್ಷಿತ್‌ ಶೆಟ್ಟಿ ಈ ಸುದ್ದಿಯನ್ನು ರೀಟ್ವೀಟ್‌ ಮಾಡಿ, ‘ಹೆಚ್ಚು ಸಮಯ ಕಾಯೋದು ಕಷ್ಟ’ ಎಂದಿದ್ದರು. ಇದು ನವೆಂಬರ್ ‌ನಲ್ಲಿ ರಿಲೀಸ್ ಆಗಲಿದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಹೀಗಾಗಿ ಹೆಚ್ಚಿನವರು ‘ಗಂಧದ ಗುಡಿ’ ನವೆಂಬರ್‌ನಲ್ಲೇ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದರು. ಆದರೆ ಇದೀಗ ಈ ನಿರೀಕ್ಷೆ ಹುಸಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಅಮೋಘವರ್ಷ ಗಂಧದ ಗುಡಿ ‘ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕಿ ಅಶ್ವಿನಿ ಅವರ ಜೊತೆಗೆ ಚರ್ಚಿಸುತ್ತೇನೆ. ಆದಷ್ಟುಬೇಗ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದು ಅಮೋಘವರ್ಷ ಹೇಳಿದ್ದಾರೆ. ಅಂದ್ಮೇಲೆ ಕನ್ನಡರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುವುದು ಅನುಮಾನವಾಗಿದೆ. 

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಅಪ್ಪು ನೋಡಿ ಫ್ಯಾನ್ಸ್ ಫಿದಾ

ಗಂಧದ ಗುಡಿ ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. 'ವೈಲ್ಡ್​ ಕರ್ನಾಟಕ' ಡಾಕ್ಯುಮೆಂಟರಿ (Wild Karnataka Documentary) ಮಾಡಿದ್ದ ಅಮೋಘವರ್ಷ ಜತೆ ಸೇರಿ ಪುನೀತ್​ ಕರುನಾಡ (Karnataka) ಬಗ್ಗೆ ಡಾಕ್ಯುಮೆಂಟರಿ ಸಿದ್ಧಪಡಿಸಿದ್ದರು.

ಅಪ್ಪು ಅಂತ ಹೇಳಿ ದೂರ ತಳ್ಳಬೇಡಿ: ಭಾವುಕರಾದ ಶಿವಣ್ಣ

ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿದೆ. ಇದಕ್ಕೆ 'ಗಂಧದ ಗುಡಿ' ಎಂದು ಹೆಸರಿಡಲಾಗಿದೆ. ಮುಖ್ಯವಾಗಿ ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಸಾಕ್ಷ್ಯಚಿತ್ರ ಪುನೀತ್ ಅವರ ಕನಸಿನ ಸಾಕ್ಷ್ಯಚಿತ್ರವಾಗಿತ್ತು. ಇದನ್ನು ನೋಡುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಮಾಡುವ ಕನಸು ಕಂಡಿದ್ದರು. ಆದರೆ ಈ ಸಾಕ್ಷ್ಯಚಿತ್ರದ ಕೆಲಸ ಇನ್ನಷ್ಟು ಬಾಕಿ ಇರುವ ಕಾರಣ ಮತ್ತಷ್ಟು ತಡವಾಗುತ್ತಿದೆ. ಶೀಘ್ರದಲ್ಲೇ ಗಂಧದ ಗುಡಿ ರಿಲೀಸ್ ಆಗಲಿದೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar