
ಬೆಂಗಳೂರು(ಜು. 12) "ಗಡಿಯಾರ" ಚಿತ್ರದ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಪ್ರಬಿಕ್ ಮೊಗವೀರ್ ಈಗ ಹೊಸ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.
ಕೊರೊನಾ ಅತಿಯಾದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದರೂ "ಗಡಿಯಾರ" ಚಿತ್ರ ವಿಭಿನ್ನ ಕಂದಾಹಂದರದ ಮೂಲಕ ಗುರುತಿಸಿಕೊಂಡಿತ್ತು. "ಹೊಸದಿಗಂತ" ಸಿನಿಮಾ ಮನುಷ್ಯನ ಮಿದುಳಿನ ಮೇಲೆ ಹೆಣೆಯಲಾದ ಸಿನಿಮಾ.
ಅಡುಗೆ ಮಾಡುತ್ತಿರುವ ಐಶಾನಿ ಶೆಟ್ಟಿ..ಕೋರಿ ರೊಟ್ಟಿ
"ಸಂಥಿಂಗ್ ಅನೇಬಲ್ ಟು ಎಕ್ಸ್‌ಪ್ಲೇನ್’ ಎನ್ನುವ ವಾಕ್ಯ ಹೊಂದಿರುವ "ಪೋಸ್ಟರ್’ ಅನ್ನು ಕೂಡ ಸಿನಿಮಾ ತಂಡ ಬಿಡುಗಡೆ ಮಾಡಿದೆ. ಕಥೆ, ಚಿತ್ರಕಥೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಪ್ರಬಿಕ್ ಮೊಗವೀರ್ ಅವರದ್ದು.
ಗಡಿಯಾರಕ್ಕಿಂತ ಈ ಸಿನಿಮಾ ವಿಭಿನ್ನವಾಗಿ ಇರಲಿದೆ. ಸಾಮಾಜಿಕ ಸಂದೇಶ ಇರುವ ಮನರಂಜನೆ ಚಿತ್ರ ಇದಾಗಲಿದೆ. ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಮುಂದಿಡುವುದು ಕಥೆಯ ಮುಖ್ಯ ಉದ್ದೇಶ. ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಇದು ಕೂಡ ಬಹು ತಾರಾಗಣದ ಸಿನಿಮಾ. ನಟ. ನಟಿಯರ ಆಯ್ಕೆ ನಡೆಯುತ್ತಿದೆ" ಎಂದು ನಿರ್ದೇಶಕ ಪ್ರಬಿಕ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.