ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಅದ್ಭುತ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ತುಳುನಾಡಿನ ಶ್ರೀಮಂತ ಸಂಸ್ಕೃತಿ ಕುರಿತು ಮಾತನಾಡಿದ್ದಾರೆ.
ಬೆಂಗಳೂರು(ನ.02): ಕಾಂತಾರ ಚಿತ್ರ ದೇಶ ವಿದೇಶಗಳಲ್ಲಿ ಹೊಸ ದಾಖಲೆ ಬರೆದಿದೆ. ಗಳಿಕೆಯಲ್ಲಿ ಮಾತ್ರವಲ್ಲ, ಅತ್ಯುತ್ತಮ ಚಿತ್ರವಾಗಿ, ದೇಶದ ಸಂಸ್ಕೃತಿ, ನಂಬಿಕೆಯನ್ನು ಅದ್ಭುತವಾಗಿ ತೆರೆ ಮೇಲೆ ತಂದ ಪ್ರಯತ್ನಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಆಧಾತ್ಮಿಕ ಕೇಂದ್ರಗಳಲ್ಲೂ ಕಾಂತಾರ ಚಿತ್ರ ಪ್ರದರ್ಶನ ಮಾಡಲಾಗಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಕಾಂತಾರ ಸಿನಿಮಾ ವೀಕ್ಷಿಸಿ ರಿಶಭ್ ಶೆಟ್ಟಿಯನ್ನು ಹೊಗಳಿದ್ದಾರೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅದ್ಭುತ ಚಿತ್ರ ನಿರ್ಮಿಸಿದ ನಟ ನಿರ್ದೇಶಕ ರಿಶಬ್ ಶೆಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ ತುಳುವನಾಡು ಹಾಗೂ ಕರಾವಳಿಯ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಂಬಿಸುತ್ತಿದೆ. ರಿಶಭ್ ಶೆಟ್ಟಿ ಈ ಅದ್ಭುತ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ನಿರ್ಮಾಲಾ ಸೀತಾರಾಮನ್, ತಮ್ಮ ಆಪ್ತರು, ಸ್ವಯಂ ಸೇವಕರು ಸೇರಿದಂತೆ ಕೆಲ ಮಾರ್ಗದರ್ಶಕರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.
Invest Karnataka 2022: ಚಿಕ್ಕ ಬಜೆಟ್, ದೊಡ್ಡ ಆದಾಯ, 'ಕಾಂತಾರ' ಚಿತ್ರವೇ ಉದಾಹರಣೆ: ಪೀಯುಷ್ ಗೋಯೆಲ್
ನಿರ್ಮಲಾ ಸೀತಾರಾಮನ್ ಟ್ವೀಟ್ ಬೆನ್ನಲ್ಲೇ ರಿಷಬ್ ಶೆಟ್ಟಿ ಹಣಕಾಸು ಸಚಿವರಿಗೆ ಧನ್ಯವಾದ ಹೇಳಿದ್ದಾರೆ. ಕಾಂತಾರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದುವರೆಗೆ ಚಿತ್ರಮಂದಿರದತ್ತ ಮುಖಮಾಡದ ಹಲವರು ಕಾಂತಾರ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Thank you mam 🙏😊 https://t.co/F82OYHaLvQ
— Rishab Shetty (@shetty_rishab)
300 ಕೋಟಿ ರು. ಕ್ಲಬ್ ಸೇರಿದ ಕಾಂತಾರ
ಕಾಂತಾರ 300 ಕೋಟಿ ಕ್ಲಬ್ ಸೇರಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್‌ಸೀಸ್ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ ರು.150 ಕೋಟಿಯಾದರೆ ತೆಲುಗಿನಿಂದ ಬಂದದ್ದು .50 ಕೋಟಿ. ಹಿಂದಿ ಅವತರಣಿಕೆಯ ಗಳಿಕೆ 42.95 ಕೋಟಿ. ತಮಿಳುನಾಡಿನ ಮಂದಿ ಮಳೆಯ ನಡುವೆಯೇ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಕೇರಳದಲ್ಲೂ ಚಿತ್ರ ಜಯಭೇರಿ ಬಾರಿಸಿದೆ.ತೆಲುಗು ಭಾಷೆಯೊಂದರಲ್ಲೇ ಚಿತ್ರ 50 ಕೋಟಿ ರು. ಸಂಗ್ರಹಿಸಿ ದಾಖಲೆ ಬರೆದಿದೆ. ತೆಲುಗಿಗೆ ಡಬ್ ಆಗಿ ಈ ಮೊತ್ತ ಸಂಗ್ರಹಿಸುತ್ತಿರುವ 6ನೇ ಸಿನಿಮಾ, ಕನ್ನಡದ 2ನೇ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ.
ಬಾಹುಬಲಿ 2 ಅನ್ನೂ ಮೀರಿದ ಕಾಂತಾರ, 5ನೇ ವಾರಾಂತ್ಯದಲ್ಲಿ ರೆಕಾರ್ಡ್ ಗಳಿಕೆ!
ರವಿಶಂಕರ ಗುರೂಜಿ ಆಶ್ರಮದಲ್ಲಿ ಕಾಂತಾರ ಪ್ರದರ್ಶನ
ಬೆಂಗಳೂರಿನ ರವಿಶಂಕರ ಗುರೂಜಿ ಆಶ್ರಮದಲ್ಲಿ ರಿಷಬ್ ಶೆಟ್ಟಿನಿರ್ದೇಶನ, ನಟನೆಯ ‘ಕಾಂತಾರ’ ಚಿತ್ರದ ಪ್ರದರ್ಶನ ನಡೆದಿದೆ. ಈ ಬಗ್ಗೆ ಮಾತನಾಡಿದ ರವಿಶಂಕರ ಗುರೂಜಿ, ‘ರಿಷಬ್ ಶೆಟ್ಟಿನಟನೆ ಬಹಳ ಚೆನ್ನಾಗಿದೆ. ದಂತಕತೆಯ ಜೊತೆಗೆ ಮನರಂಜನೆಯನ್ನೂ ನೀಡಿದ್ದಾರೆ. ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ’ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿಹಾಗೂ ಹೊಂಬಾಳೆ ಫಿಲಂಸ್, ಆಶ್ರಮದಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡಿರುವುದಕ್ಕೆ ಧನ್ಯತೆ ಇದೆ ಎಂದು ತಿಳಿಸಿದ್ದಾರೆ.
ಇಶಾ ಫೌಂಡೇಶನ್‌ನಲ್ಲಿ ಕಾಂತಾರ
ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಕಾಂತಾರ’ ಸ್ಪೆಷಲ್ ಪ್ರದರ್ಶನ ಆಯೋಜಿಸಲಾಗಿತ್ತು. ಇದರಲ್ಲಿ 3000ಕ್ಕೂ ಅಧಿಕ ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನು ಇಶಾ ಫೌಂಡೇಶನ್ ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪ್ರಕಟಿಸಿದ್ದು, ಹೊಂಬಾಳೆ ಫಿಲಂಸ್ ಹರ್ಷ ವ್ಯಕ್ತಪಡಿಸಿದೆ.