Filmfare South 2022; ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ ಶೆಟ್ಟಿ, ಪುನೀತ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

Published : Oct 10, 2022, 12:06 PM IST
Filmfare South 2022; ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ ಶೆಟ್ಟಿ, ಪುನೀತ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಸಾರಾಂಶ

67ನೇ ಸಾಲಿನ ಫಿಲ್ಮ್​ಫೇರ್​ ಸಮಾರಂಭ ಬೆಂಗಳೂರಿನ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಭಾನುವಾರ (ಅಕ್ಟೋಬರ್ 9) ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ಸೈಮಾ ಅವಾರ್ಡ್ ಸೌತ್ ಸಮಾರಂಭದ ಬೆನ್ನಲ್ಲೇ ಫಿಲ್ಮ್‌ಫೇರ್ ಅವಾರ್ಡ್ ಸೌತ್ ಸಮಾರಂಭ ಕೂಡ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. 67ನೇ ಸಾಲಿನ ಫಿಲ್ಮ್​ಫೇರ್​ ಸಮಾರಂಭ ಬೆಂಗಳೂರಿನ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಭಾನುವಾರ (ಅಕ್ಟೋಬರ್ 9) ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಕನ್ನಡದಲ್ಲಿ ನಟ ಧನಂಜಯ್, ನಟಿ ಯಜ್ಞಾ ಶೆಟ್ಟಿ, ತಮಿಳಿನಲ್ಲಿ ನಟ ಸೂರ್ಯ, ನಟಿ ಲಿಜೋಮೋಲ್ ಜೋಸ್ ಮತ್ತು ತೆಲುಗಿನಲ್ಲಿ ನಟ ಅಲ್ಲುಅರ್ಜುನ್ ಮತ್ತು ಸಾಯಿ ಪಲ್ಲವಿ ಹಾಗೂ ಮಲಯಾಳಂನಲ್ಲಿ ಬಿಜು ಮೆನನ್ ಮತ್ತು ನಟಿ ನಿಮಿಶಾ ಅವರಿಗೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಗರಿ ಸಿಕ್ಕಿದೆ. ಇನ್ನು ಜೀವಮಾನ ಸಾಧನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಅವರಿಗೆ ನೀಡಲಾಗಿದೆ. 

ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಧನಂಜಯ್ ಪಾಲಾಗಿದೆ. ಬಡವ ರಾಸ್ಕಲ್ ಸಿನಿಮಾದ ಉತ್ತಮ ಅಭಿನಯಕ್ಕೆ ಧನಂಜಯ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿ ಯಜ್ಞಾ ಶೆಟ್ಟಿ ಪಡೆದಿದ್ದಾರೆ. ಆಕ್ಟ್​ 1978 ಸಿನಿಮಾದ ಉತ್ತಮ ನಟನೆಗೆ ಈ ಪ್ರಶಸ್ತಿ ದೊರೆತಿದೆ. ಇನ್ನು ರಾಜ್​ ಬಿ. ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ನೀಡಲಾಗಿದೆ.  

ವೇದಿಕೆ ಮೇಲೆ ಐ ಲವ್‌ ಯೂ ಅಂದ ಗಾಯಕಿ, ರಣ್ವೀರ್ ರಿಯಾಕ್ಷನ್ ಒಮ್ಮೆ ನೋಡಿ!

ಫಿಲ್ಮ್‌ಫೇರ್ ಪ್ರಶಸ್ತಿ ಪಡೆಯುವುದು ಅನೇಕ ನಟ-ನಟಿಯರ ಕನಸು. ಅದರಲ್ಲೂ ಬೆಂಗಳೂರಿನಲ್ಲೇ ಫಿಲ್ಮ್‌ಫೇರ್ ಸಮಾರಂಭ ನಡೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಪ್ರತಿವರ್ಷ ಅವಾರ್ಡ್ ಸಾಮಾರಂಭಗಳಿಗೆ ಬೇರೆ ರಾಜ್ಯಗಳಿಗೆ ಹೋಗಬೇಕಿತ್ತು. ಆದರೆ ಈ ವರ್ಷ ಸೈಮಾ ಮತ್ತು ಫಿಲ್ಮ್‌ಫೇರ್ ಅವಾರ್ಡ್ ಸಮಾರಂಭ ಬೆಂಗಳೂರಿನಲ್ಲೇ ನಡೆದಿದ್ದು ವಿಶೇಷ.  

ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ಗರಂ; ನಾಮನಿರ್ದೇಶನ ಹಿಂಪಡೆದ ಕಮಿಟಿ

ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಕನ್ನಡಿಗರ ಪಟ್ಟಿ:

ಅತ್ಯುತ್ತಮ ನಟ: ಧನಂಜಯ್​ (ಬಡವ ರಾಸ್ಕಲ್​)

ಅತ್ಯುತ್ತಮ ನಟಿ: ಯಜ್ಞಾ ಶೆಟ್ಟಿ (ಆಕ್ಟ್​ 1978)

ಅತ್ಯುತ್ತಮ ಸಿನಿಮಾ: ಆಕ್ಟ್​ 1978 (ನಿರ್ದೇಶನ ಮಂಸೋರೆ)

ಅತ್ಯುತ್ತಮ ನಿರ್ದೇಶಕ: ರಾಜ್​ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

ಅತ್ಯುತ್ತಮ ಪೋಷಕ ನಟ: ಬಿ. ಸುರೇಶ (ಆಕ್ಟ್​ 1978)

ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್​ ಪ್ರಪಂಚ)

ಅತ್ಯುತ್ತಮ ಸಂಗೀತ ನಿರ್ದೇಶನ: ವಾಸುಕಿ ವೈಭವ್​ (ಬಡವ ರಾಸ್ಕಲ್​)

ಅತ್ಯುತ್ತಮ ಸಾಹಿತ್ಯ: ಜಯಂತ ಕಾಯ್ಕಿಣಿ (ಆಕ್ಟ್​ 1978)

ಅತ್ಯುತ್ತಮ ಗಾಯಕ: ರಘು ದೀಕ್ಷಿತ್​ (ನಿನ್ನ ಸನಿಹಕೆ)

ಅತ್ಯುತ್ತಮ ಗಾಯಕಿ: ಅನುರಾಧಾ ಭಟ್​ (ಬಿಚ್ಚುಗತ್ತಿ)

ಅತ್ಯುತ್ತಮ ಛಾಯಾಗ್ರಾಹಣ: ಶ್ರೀಶಾ ಕುದುವಳ್ಳಿ (ಬಡವ ರಾಸ್ಕಲ್​)

ಅತ್ಯುತ್ತಮ ನೃತ್ಯ ನಿರ್ದೇಶಕ: ಜಾನಿ ಮಾಸ್ಟರ್​ (ಫೀಲ್​ ದ ಪವರ್​- ಯುವರತ್ನ)

ಜೀವಮಾನ ಸಾಧನೆ ಪ್ರಶಸ್ತಿ: ಪುನೀತ್​ ರಾಜ್​ಕುಮಾರ್​

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಮಿಲನಾ ನಾಗರಾಜ್​, ಅಮೃತಾ ಅಯ್ಯಂಗಾರ್​

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಡಾರ್ಲಿಂಗ್​ ಕೃಷ್ಣ (ಲವ್​ ಮಾಕ್ಟೇಲ್​)
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!