'ದರ್ಶನ್ ಅರೆಸ್ಟ್ ಆಗಿ ಪೋಲೀಸ್ ಜೀಪ್‌ನಲ್ಲಿ ಬಂದಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಿದ್ದು ಹಾಗೂ ಈಗ ಜೈಲಿನಲ್ಲಿ ನ್ಯಾಯಾಂಗ್ ಬಂಧನದಲ್ಲಿ ಇರುವುದು ಎಲ್ಲವೂ ಸಿನಿಮಾ ಶೂಟಿಂಗ್‌ನಂತೆ ಅನ್ನಿಸುತ್ತಿದೆ. ..
ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು (Actor Darshan) ಪಾಲಾಗಿದ್ದು ಗೊತ್ತೇ ಇದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆ ಕೇಸಿನ ಆರೋಪಪ ಹೊತ್ತು ನ್ಯಾಯಾಂಗ ಬಂಧನದಲ್ಲಿ ನಟ ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಹಾಗೂ ಉಳಿದ 15 ಆರೋಪಿಗಳು ಇದ್ದಾರೆ. ಈ ಸಮಯದಲ್ಲಿ, ಸ್ಯಾಂಡಲ್‌ವುಡ್ ನಿರ್ಮಾಪಕ ಹಾಗೂ ನಟ ದರ್ಶನ್ ಸ್ನೇಹಿತ ಅಣಜಿ ನಾಗರಾಜ್ (Anaji Nagaraj) ಈ ಬಗ್ಗೆ ಮಾತನಾಡಿದ್ದಾರೆ.
'ದರ್ಶನ್ ಅರೆಸ್ಟ್ ಆಗಿ ಪೋಲೀಸ್ ಜೀಪ್‌ನಲ್ಲಿ ಬಂದಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಿದ್ದು ಹಾಗೂ ಈಗ ಜೈಲಿನಲ್ಲಿ ನ್ಯಾಯಾಂಗ್ ಬಂಧನದಲ್ಲಿ ಇರುವುದು ಎಲ್ಲವೂ ಸಿನಿಮಾ ಶೂಟಿಂಗ್‌ನಂತೆ ಅನ್ನಿಸುತ್ತಿದೆ. ಇದು ನಿಜ ಎಂಬುದನ್ನು ತಿಳಿದು ತುಂಬಾ ದುಃಖವಾಗುತ್ತಿದೆ ಎಂದಿದ್ದಾರೆ. ಹಾಗಿದ್ದರೆ ಅಣಜಿ ನಾಗರಾಜ್ ಏನೇನೆಲ್ಲಾ ಹೇಳಿದ್ದಾರೆ ಎಂಬುದನ್ನು ನೋಡಿ..
undefined
ಬರ್ಲಿನ್-ಲಾಸ್ ಎಂಜಲೀಸ್‌ಗೆ ಪ್ರಿಯಾಂಕಾ ಚೋಪ್ರಾ ಒಂದೇ ದಿನದಲ್ಲಿ ಹೋಗಿ ಬಂದಿದ್ದು ಹೇಗೆ?
'ದರ್ಶನ್ ಜೈಲು ವಾಸದ ಬಗ್ಗೆ ನೋವು ತೋಡಿಕೊಂಡರು ಸ್ನೇಹಿತ ಅಣಜಿ ನಾಗರಾಜ್. ತುಂಬಾ ನೊವಾಗಿದೆ ದರ್ಶನ್ ಜೈಲಿಗೆ ಹೋಗೋ ದೃಶ್ಯ ನೋಡಬಾರದಿತ್ತು. 2011 ರಲ್ಲಿ ಫ್ಯಾಮಿಲಿ ಮ್ಯಾಟರ್ ಆಗಿತ್ತು, ನಾವೆಲ್ಲಾ ಮುಂದೆ ನಿಂತು ಬಗೆ ಹರಿಸಿದ್ವಿ. ಆದರೆ ಈಗ ಕೊಲೆ ಕೇಸ್, ನಾವು ಏನೂ ಮಾಡೊಕೆ ಆಗುತ್ತಿಲ್ಲ. ಒಳ್ಳೆ ಸ್ನೇಹಿತರು ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ದರ್ಶನ್ ಜೊತೆಗಿನ ಸ್ನೇಹ ಇತ್ತೀಚೆಗೆ ನಾನು ಕಡಿಮೆ ಮಾಡಿಕೊಂಡಿದ್ದೆ.
ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ!
ದರ್ಶನ್ ಜೊತೆ ಯಾರು ಇರುತ್ತಾರೆ ಅನ್ನೋದು ಮುಖ್ಯ. ನಮ್ಮ ಜತೆ ಇದ್ದಾಗ ಹೆಚ್ಚು ಕುಡಿಯುತ್ತಿರಲಿಲ್ಲ. ಜೊತೆಗಿರೋ ಸ್ನೇಹಿತರಿಂದಲೇ ದರ್ಶನ್ ಬದಲಾಗಿದ್ದಾರೆ. ದರ್ಶನ್ ಜೊತೆ ಈಗಿರೋ ಸ್ನೇಹಿತರು ಸರಿ ಇಲ್ಲ, ನಮ್ಮ ಜೊತೆ ಮಾತ್ರ ಆಗಿನ ದರ್ಶನ್ ಈಗಿನ ದರ್ಶನ್ ಒಂದೇ ತರ ಇದ್ದಾನೆ. ಈ ಘಟನೆ ಹೇಗೆ ಆಯ್ತು ಅಂತ ಅರ್ಥ ಆಗುತ್ತಿಲ್ಲ. ಈ ಮಟ್ಟಕ್ಕೆ ದರ್ಶನ್ ಹೋಗುತ್ತಾರೆ ಅಂತ ಅಂದುಕೊಂಡಿರಲಿಲ್ಲ.
ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!
ಪವಿತ್ರಾ ಗೌಡರಿಂದಲೇ ದರ್ಶನ್ ಗೆ ಈ ಸ್ಥಿತಿ ಬಂತು. ಹೆಣ್ಣಿನಿಂದಲೇ ಈ ಸಮಸ್ಯೆ ಆಯ್ತು. ಯಾವ ಹೆಣ್ಣಿನ ಸಹವಾಸ ಮಾಡೋದಿದ್ರು ನೋಡಿಕೊಂಡು ಮಾಡಬೇಕು. ನಾನು ದರ್ಶನ್ ರಿಂದ ಹೊರ ಬಂದ ಆ ನಂತರ ದರ್ಶನ್ ಜೀವನಕ್ಕೆ ಪವಿತ್ರಾ ಗೌಡ ಎಂಟ್ರಿ ಆಯ್ತು. ಸಮಸ್ಯೆಗಳಾದಾಗ ದರ್ಶನ್ ಗೆ ತುಂಬಾ ಸರಿ ಬುದ್ದಿ ಹೇಳಿದ್ವಿ. ಅವೆಲ್ಲಾ ಚಿಕ್ಕ ಸಮಸ್ಯೆಗಳು. ಆದರೆ ಈಗ ದೊಡ್ಡ ಸಮಸ್ಯೆ ಮಾಡಿಕೊಂಡಿದ್ದಾರೆ.
ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?
ಸಿನಿಮಾ ರಂಗದಲ್ಲಿ ಕಿತ್ತಾಡಿಕೋಳ್ಳೋಧೂ ಕಾಮಲ್. ಗಲಾಟೆ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಆಗುತ್ತೆ. ದರ್ಶನ್ ನ ಜೈಲಿಗೆ ಕರೆದುಕೊಂಡು ಹೋಗೋ ದೃಶ್ಯ ನೋಡಿ ನೋವಾಯ್ತು. ಯಾವ್ದೋ ಸಿನಮಾ ಶೂಟಿಂಗ್ ತರ ಅನ್ನಿಸ್ತು. ದರ್ಶನ್ ವಿಷಯದಲ್ಲಿ ಕುಡಿತ ಒಳ್ಳೆಯದಲ್ಲ. ಈಗಿರೋ ದರ್ಶನ್ ಸ್ನೇಹಿತರು ಅದನ್ನ ಕಂಟ್ರೋಲ್ ಮಾಡಬೇಕಿತ್ತು. ದರ್ಶನ್ ಮೆಚ್ಚಿಸೋಕೆ ಹೋಗಿ ಈಗಿರೋ ಸ್ನೇಹಿತರೆ ಅವರನ್ನೇ ಹಾಳು ಮಾಡಿದ್ದಾರೆ.
ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್
ಯಾವುದೇ ಸ್ಟಾರ್ ಡಮ್ ದುಡ್ಡು ಇದ್ರೂ ಕಾನೂನಿನ ಮುಂದೆ ಯಾರು ಇಲ್ಲ. ಅವನು ನನ್ನ ಸ್ನೇಹಿತ ಅವನನ್ನ ನೋಡೋಕೆ ಜೈಲಿಗೆ ಹೋಗಿ ಬರುತ್ತೇನೆ. ಪವಿತ್ರಾ ಗೌಡನ ಸಮಸ್ಯೆಯಿಂದಾನೆ ಹೀಗೆ ಆಗಿದೆ' ಎಂದಿದ್ದಾರೆ ದರ್ಶನ್ ಅವರ ಹಿಂದಿನ ಒಂದು ಕಾಲದ ಸ್ನೇಹಿತ ಅಣಜಿ ನಾಗರಾಜ್. ಒಟ್ಟಿನಲ್ಲಿ, ಈಗ ಕನ್ನಡ ಚಿತ್ರರಂಗ ಹಾಗೂ ದರ್ಶನ್ ಒಡನಾಡಿಗಳು ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದ್ದಾರೆ.
ನಂಗೆ 86 ವರ್ಷಕ್ಕೆ ಕಂಟಕವಿದೆ, ಒಮ್ಮೆ ಹೋದರೆ ದುಃಖಿಸಬೇಡ, ಮತ್ತೆ ಬರುವೆ ಅಂದಿದ್ರು; ನಟ ಜಗ್ಗೇಶ್