Puneeth Rajkumar: ಅಪ್ಪು ಹೆಸರಿನಲ್ಲಿ ಫ್ಯಾನ್ಸ್‌ ಕ್ರಿಕೆಟ್‌ ಪಂದ್ಯಾವಳಿ

Published : Apr 06, 2022, 10:01 AM IST
Puneeth Rajkumar: ಅಪ್ಪು ಹೆಸರಿನಲ್ಲಿ ಫ್ಯಾನ್ಸ್‌ ಕ್ರಿಕೆಟ್‌ ಪಂದ್ಯಾವಳಿ

ಸಾರಾಂಶ

ವರನಟ ಡಾ. ರಾಜ್‌ಕುಮಾರ್ ಹೇಳಿದಂತೆ ಅಭಿಮಾನಿಗಳೇ ದೇವರು ಎನ್ನುವ ಹಾಗೇ ಅಭಿಮಾನಿಗಳನ್ನು ಒಗ್ಗೂಡಿಸಿಕೊಂಡು ನಮ್ಮ ಟಾಕೀಸ್ ಭರತ್ ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಆಯೋಜಿಸುತ್ತಿದ್ದಾರೆ. 

ವರನಟ ಡಾ. ರಾಜ್‌ಕುಮಾರ್ (Dr Rajkumar) ಹೇಳಿದಂತೆ ಅಭಿಮಾನಿಗಳೇ ದೇವರು ಎನ್ನುವ ಹಾಗೇ ಅಭಿಮಾನಿಗಳನ್ನು (Fans) ಒಗ್ಗೂಡಿಸಿಕೊಂಡು ನಮ್ಮ ಟಾಕೀಸ್ ಭರತ್, ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನೆನಪಿನಲ್ಲಿ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ (Fans Cricket League) ಆಯೋಜಿಸುತ್ತಿದ್ದಾರೆ. ಈಗಾಗಲೇ ಭರತ್ (Bharat) ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನ ಏಳು ಬಾರಿ ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈಗ 08ನೇ ಬಾರಿ ಕೂಡ ಅಷ್ಟೇ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು, ಈ ಬಾರಿ ಪಂದ್ಯಾವಳಿಗಳನ್ನು ನಮ್ಮ ನೆಚ್ಚಿನ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಡಿಯಲ್ಲಿ ನಡೆಯಲಿದೆ. 

ಬೆಂಗಳೂರಿನ ವಿಜಯನಗರದಲ್ಲಿರುವ ಬಿ.ಜಿ.ಎಸ್ ಮೈದಾನದಲ್ಲಿ 9 ಹಾಗೂ 10 ರಂದು 2ದಿನಗಳ ಕಾಲ ಲೀಗ್ ಹಾಗೂ ಸೆಮಿಫೈನಲ್ ಮತ್ತು ಮ್ಯಾಚ್ ಗಳನ್ನು ನಡೆಸಲಿದೆ. ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಅದರಲ್ಲಿ 4 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಿ , ಒಟ್ಟು 16 ಲೀಗ್ ಮ್ಯಾಚ್ ಗಳು ನಡೆಯಲಿವೆ. ಬಹಳ ಅಚ್ಚುಕಟ್ಟಾಗಿ ಪೂರ್ವ ತಯಾರಿಯೊಂದಿಗೆ ಸಿದ್ಧ ಮಾಡಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳಿಗೆ ಕೊಟ್ಟಿರುವ ಸ್ಟಾರ್ ಕ್ಯಾಂಪೇನರ್ ಕಲಾವಿದರ ಜೆರ್ಸಿ ಹಾಗೂ ಪ್ರತಿ ಒಂದು ವ್ಯವಸ್ಥೆ ಪ್ರೊಫೆಷನ್ ಆರ್ಗನೈಸರ್ ರೀತಿಯಲ್ಲಿ ಗಮನ ಸೆಳೆಯುವಂತಿದೆ.

ಈಗಾಗಲೇ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಗೆ ಹಲವಾರು ತಾರೆಯರು ಬೆಂಬಲ ವ್ಯಕ್ತಪಡಿಸಿದ್ದು ಜೊತೆಗೆ ಸೋಷಿಯಲ್ ಮೀಡಿಯಾ ಸರಕಾರವು ಈ ಪಂದ್ಯಾವಳಿ ಸಿಕ್ಕಿದೆ. ಸೆಲೆಬ್ರಿಟಿ ಕ್ರಿಕೆಟ್ ಮ್ಯಾಚ್ನಂತೆ ಸಾಗುತ್ತಿರುವ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟಕ್ಕೆ ಸಾಗಿ ಎಲ್ಲರ ಗಮನ ಸೆಳೆಯುವಂಥ ಆಗಲಿ. ಈ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಚಿತ್ರೋದ್ಯಮದ ತಾರೆಯರು ಹಾಗೂ ತಂತ್ರಜ್ಞರು ಕೂಡ ಆಗಮಿಸಲಿದ್ದಾರಂತೆ.

ಅಪ್ಪು ಆಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ ಪುನೀತ್‌ ರಾಜ್ ಕುಮಾರ್!

ಅಪ್ಪು ಸ್ಮರಣಾರ್ಥ ಡಾ.ರಾಜ್ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘದ ವತಿಯಿಂದ ಐದನೇ ವರ್ಷದ ಡಾ.ರಾಜ್ ಕ್ರಿಕೆಟ್ ಕಪ್ ಟೂರ್ನಿ ಮೇ ತಿಂಗಳ 13,14 ಹಾಗೂ 15ರಂದು ನಡೆಯಲಿದೆ ಎಂದು ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷರಾದ ರಾಜೇಶ್ ಬ್ರಹ್ಮಾವರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಿಕೆಟ್ ಪಂದ್ಯವಳಿಯಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ಶಾಸಕರು, ಪತ್ರಕರ್ತರು, ಕಾರ್ಮಿಕರು ಹಾಗೂ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದವರು ಭಾಗವಹಿಸುತ್ತಿದ್ದಾರೆ, ಜೊತೆಗೆ ಒಬ್ಬ ಕಾಮನ್ ಮ್ಯಾನ್ ಕೂಡ ಇರುತ್ತಾರೆ ಎಂದೂ ಹೇಳಿದರು.

ಬಿಜಿಎಸ್ ಗ್ರೌಂಡ್ ನಲ್ಲಿ ನಡೆಯಲಿರುವ ಮೂರು ದಿನಗಳ ಕಾಲ ನಡೆಯಲಿರುವ ಡಾ.ರಾಜ್ ಕ್ರಿಕೆಟ್ ಕಪ್ ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿ ದುಬೈನ ಶಾರ್ಜಾದಲ್ಲಿ ಜೂನ್ ಮೊದಲವಾರ ನಡೆಯಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಮಾತನಾಡಿ ಇಡೀ ಚಿತ್ರೋದ್ಯಮ ಒಟ್ಟಾಗಿ ಸೇರಿ ಮಾಡುವ ಕಾರ್ಯಕ್ರಮವಿದು. ಇದಕ್ಕೆ ಚೇಂಬರ್ ಬೆಂಬಲ ಇದೆ ಎಂದರು. ಮಾಜಿ ಅಧ್ಯಕ್ಷ ಸಾ. ರಾ.ಗೋವಿಂದು ಮಾತನಾಡಿ, ಬಹಳ ವರ್ಷಗಳ ನಂತರ ರಾಜ್ ಕಪ್ ನಡೆಯುತ್ತಿದೆ. ಇಂಡಸ್ಟ್ರಿಯಲ್ಲಿ ಸೌಹಾರ್ದಯುತ ವಾತಾವರಣ ಕ್ರಿಯೇಟ್ ಮಾಡುವ ಕೆಲಸವೂ ಈ ಮೂಲಕ ನಡೆಯುತ್ತಿದೆ. 

ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ವೈರಲ್ ಆದ ಪ್ರಶ್ನೆಪತ್ರಿಕೆ

ಇಂಡಸ್ಟ್ರಿ ವತಿಯಿಂದ ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಈಗ ರಾಜ್ ಜೊತೆ ಪುನೀತ್ ಹೆಸರೂ ಸಹ ಸೇರ್ಪಡೆಯಾಗಿದೆ ಎಂದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ವರ್ಷದಿಂದ ಇದರಬಗ್ಗೆ ಚರ್ಚೆ ನಡೆಯುತ್ತಿದೆ. ಅಪ್ಪು ಅವರು ತಂಡದ ನೇತೃತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಅವರ ಸ್ಮರಣಾರ್ಥ ನಡೆಸಬೇಕಾಗಿದೆ. 2011ರಲ್ಲಿ ನಿರ್ಮಾಪಕರ ಸಂಘ ಕಪ್ ಗೆದ್ದಿತ್ತು ಎಂದು ಹೇಳಿದರು. ನಿರ್ಮಾಪಕ ಕೆ.ಮಂಜು, ಎನ್.ಎಂ.ಸುರೇಶ್, ನಾಗಣ್ಣ, ಗಣೇಶ್, ಫೈವ್ ಸ್ಟಾರ್ ಗಣೇಶ್ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದು ಮಾನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?