ಫ್ಯಾನ್ಸ್‌ಗಳೇ ನನ್ನ ಶಕ್ತಿ & ಸಾಮರ್ಥ್ಯ ಎಂದ್ಬಿಟ್ರು ವಿಜಯ್ ದೇವರಕೊಂಡ; ಜ್ಞಾನೋದಯ ಆಗಿದ್ಹೇಗೆ?

Published : Apr 14, 2024, 06:40 PM ISTUpdated : Apr 14, 2024, 06:44 PM IST
ಫ್ಯಾನ್ಸ್‌ಗಳೇ ನನ್ನ ಶಕ್ತಿ & ಸಾಮರ್ಥ್ಯ ಎಂದ್ಬಿಟ್ರು ವಿಜಯ್ ದೇವರಕೊಂಡ; ಜ್ಞಾನೋದಯ ಆಗಿದ್ಹೇಗೆ?

ಸಾರಾಂಶ

ಗೀತ ಗೋವಿಂದಂ ಮೊದಲು ತೆರೆಗೆ ಬಂದಿದ್ದ ಅರ್ಜುನ್ ರೆಡ್ಡಿ ಸೂಪರ್ ಹಿಟ್ ಆಗುವ ಮೂಲಕ ನಟ ವಿಜಯ್ ದೇವರಕೊಂಡ ತೆಲುಗಿನಲ್ಲಿ ತಮ್ಮ ಸ್ಟಾರ್ ಜರ್ನಿ ಶುರುಮಾಡಿದ್ದರು. ಅದಕ್ಕೂ ಮೊದಲು ನಟರಾಗಲು,  ಅದಕ್ಕಾಗಿ ಚಿಕ್ಕಪುಟ್ಟ ಅವಕಾಶ ಪಡೆಯಲು..

ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ಅವರು ಸಂದರ್ಶನವೊಂದರಲ್ಲಿ 'ಅಭಿಮಾನಿಗಳೇ ನನ್ನ ಶಕ್ತಿ' ಎಂದಿದ್ದಾರೆ. ಅದಕ್ಕೂ ಮೊದಲು ಮಾತನಾಡಿರುವ ನಟ ವಿಜಯ್ ದೇವರಕೊಂಡ 'ನಾನು ಮೊದಲು ನನ್ನೊಳಗೆ ಸ್ಟ್ರಾಂಗ್ ಆಗಬೇಕಿದೆ. ಏಕೆಂದರೆ,ನಾನು ಬೇರೆಯವರೊಂದಿಗೆ ಕನೆಕ್ಟ್ ಆಗುವ ಮೊದಲು ನನ್ನಲ್ಲಿ ನಾನು ಶಕ್ತಿ ತುಂಬಿಸಿಕೊಳ್ಳುವುದು ತುಂಬಾ ಮುಖ್ಯ ಎಂಬುವುದನ್ನು ನಾನು ಈಗ ಅರಿತುಕೊಂಡಿದ್ದೇನೆ. ನಾನು ಸ್ಟ್ರಾಂಗ್ ಆದ ಬಳಿಕ, ನಾನು ಇನ್ನೂ ಎರಡು ರೀತಿಯಲ್ಲಿ ಕ್ರೀಯಾಶೀಲವಾಗಿರಬೇಕು. 

ಅದಕ್ಕೆ ಎರಡು ಕಾರಣಗಳಿವೆ. ಒಂದು, ನನ್ನನ್ನು ಬೆಳೆಸಿರುವ, ನನ್ನನ್ನು ಇಷ್ಟಪಡುವ ಅಭಿಮಾನಿಗಳ ಜೊತೆ ನಾನು ಕನೆಕ್ಟ್ ಆಗುವ ಮೂಲಕ ಅವರು ಯಾವತ್ತೂ ಖುಷಿಯಾಗಿರುವಂತೆ ನೋಡಿಕೊಳ್ಳುವುದು. ಇನ್ನೊಂದು, ನನಗೆ ಅಭಿಮಾನಿಗಳನ್ನು ಬಿಟ್ಟರೆ ನನ್ನ ಜೀವನವನ್ನು ಚೆನ್ನಾಗಿ ನಡೆಸಲು ಬೇರೆ ಯಾವುದೇ ಸೋರ್ಸ್ ಇಲ್ಲ. ಅಂದರೆ, ನನ್ನ ಅಭಿಮಾನಿಗಳೇ ನನ್ನ ಸಿನಿಮಾ ಗೆಲ್ಲಲು ಕಾರಣಕರ್ತರು ಮತ್ತು ಅವರಿಲ್ಲದೇ ನನ್ನ ಸಿನಿಮಾ ಬಿಸಿನೆಸ್ ಆಗದು.

ಪುಟ್ಟಣ್ಣ-ವಿಷ್ಣುವರ್ಧನ್ ಜೋಡಿ ಸೂಪರ್ ಹಿಟ್ ಚಿತ್ರಕ್ಕೆ 'ನಾಗರಹಾವು' ಹೆಸರಿಡಲು ಕಾರಣವೇನು?

ಫ್ಯಾನ್ಸ್ ಜತೆ ನಾನು ನಿರಂತರವಾಗಿ ಕಮ್ಯುನಿಕೇಟ್ ಆಗಿರುವ ಮೂಲಕ ನಾನು ನನ್ನನ್ನು ನಂಬಿ ಹಣ ಹೂಡುವ ನಿರ್ಮಾಪಕರಿಗೆ ಬಿಸಿನೆಸ್ ಆಗುವಂತೆ ನೋಡಿಕೊಳ್ಳಬೇಕು. ಜತೆಗೆ, ಒಮ್ಮೆ ನಾನು ಈ ಆದಾಯದ  ಮೂಲದಿಂದ ದೂರವಾಗಿಬಿಟ್ಟರೆ ನನಗೆ ಉಳಿದ ಎಲ್ಲಾ ದಾರಿಗಳೂ ಕಟ್ ಆಗಿಬಿಡುತ್ತವೆ. ಅಂತಹ ಸಮಯದಲ್ಲಿ ನಾನು ನನ್ನ ಫ್ಯಾನ್ಸ್ ಜತೆ ಡೈರೆಕ್ಟ್ ಆಗಿ ಕನೆಕ್ಟ್ ಆಗಿ ನನ್ನ ಜೀವನಕ್ಕೊಂದು ದಾರಿ ಮಾಡಿಕೊಳ್ಳಬಹುದು' ಎಂದಿದ್ದಾರೆ.

ನಟನಟಿಯರೆಲ್ಲ ಶ್ರೀಮಂತರಲ್ಲ, ಸ್ಟಾರ್‌ಗಳ ಬಗ್ಗೆ ನನಗೆ ಗೊತ್ತಿಲ್ಲ; ಹೀಗ್ ಹೇಳ್ಬಿಟ್ರು ರಂಜನಿ ರಾಘವನ್!

ನಟ ವಿಜಯ್ ದೇವರಕೊಂಡ ಅವರು ಸಿನಿಮಾರಂಗದಲ್ಲಿ ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ 'ಗೀತ ಗೋವಿಂದಂ Geetha Govindham'ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ನಟ ವಿಜಯ್ ದೇವರಕೊಂಡ ತೆಲುಗಿನಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೆ ಲಗ್ಗೆ ಇಟ್ಟರು. 

ಧನಂಜಯ್ ಮುಂದಿಟ್ಟು 'ಕೋಟಿ'ಗೆ ಕೈ ಹಾಕಿದ ಪರಮ್, ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಗೀತ ಗೋವಿಂದಂ ಮೊದಲು ತೆರೆಗೆ ಬಂದಿದ್ದ ಅರ್ಜುನ್ ರೆಡ್ಡಿ ಸೂಪರ್ ಹಿಟ್ ಆಗುವ ಮೂಲಕ ನಟ ವಿಜಯ್ ದೇವರಕೊಂಡ ತೆಲುಗಿನಲ್ಲಿ ತಮ್ಮ ಸ್ಟಾರ್ ಜರ್ನಿ ಶುರುಮಾಡಿದ್ದರು. ಅದಕ್ಕೂ ಮೊದಲು ನಟರಾಗಲು,  ಅದಕ್ಕಾಗಿ ಚಿಕ್ಕಪುಟ್ಟ ಅವಕಾಶ ಪಡೆಯಲು ಕೂಡ ವಿಜಯ್ ದೇವರಕೊಂಡ ಬಹಳಷ್ಟು ಪರದಾಟ ಅನುಭವಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?