ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?

Published : Mar 15, 2024, 07:37 PM ISTUpdated : Mar 15, 2024, 07:56 PM IST
ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?

ಸಾರಾಂಶ

ಸಿನಿಪ್ರೇಕ್ಷಕರಂತೂ ಬೇಬಿ ಶ್ಯಾಮಿಲಿಯನ್ನು ನೋಡಲೆಂದೇ ಸಿನಿಮಾಗೆ ಬರುತ್ತಿದ್ದರು. ಆಕೆಗೆ ಅದೆಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿತ್ತು ಎಂದರೆ, ಯಾವ ಸ್ಟಾರ್ ನಟರಿಗೂ ಕಮ್ಮಿಯಿರಲಿಲ್ಲ.

ಕನ್ನಡವೂ ಸೇರಿದಂತೆ, ತಮಿಳು ಹಾಗೂ ತೆಲುಗು ಚಿತ್ರರಂಗಗಳನ್ನು ಬಾಲನಟಿಯಾಗಿ ಅಕ್ಷರಶಃ ಆಳಿದ್ದರು ಬೇಬಿ ಶ್ಯಾಮಿಲಿ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹುಚ್ಚು ಹಿಡಿಸಿದ್ದರು ನಟಿ ಬೇಬಿ ಶ್ಯಾಮಿಲಿ. ಸಿನಿಪ್ರೇಕ್ಷಕರಂತೂ ಬೇಬಿ ಶ್ಯಾಮಿಲಿಯನ್ನು (Baby Shamili) ನೋಡಲೆಂದೇ ಸಿನಿಮಾಗೆ ಬರುತ್ತಿದ್ದರು. ಆಕೆಗೆ ಅದೆಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿತ್ತು ಎಂದರೆ, ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ ಎನ್ನುವಷ್ಟು. ಬೇಬಿ ಶ್ಯಾಮಿಲಿ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಮೂರು-ಆರು ತಿಂಗಳು ಕಾಯಬೇಕಿತ್ತು. 

ಬೇಬಿ ಶ್ಯಾಮಿಲಿ ಹಾಗೇ ಚಿಕ್ಕವಳಾಗಿಯೇ ಎಂದೆಂದೂ ಇರಲು ಸಾಧ್ಯವೇ? ಸಹಜವಾಗಿ ದೊಡ್ಡವಳಾದಳು. ಸ್ಟಡೀಸ್ ಎಂದು ಸಿನಿಮಾರಂಗದಿಂದ ಸ್ವಲ್ಪ ಕಾಲ ಬ್ರೇಕ್ ತೆಗೆದುಕೊಂಡು ಹದಿಹರೆಯಕ್ಕೆ ಕಾಲಿಟ್ಟ ಬಳಿಕ ಮತ್ತೆ ಸಿನಿಮಾರಂಗಕ್ಕೆ ಕಾಲಿಟ್ಟರು ನಟಿ ಶ್ಯಾಮಿಲಿ. 'ಓಯೆ (Oye)' ತೆಲುಗು ಸಿನಿಮಾ ಮೂಲಕ ಸಿನಿಮಾರಂಗದ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ (ಬೇಬಿ) ಶ್ಯಾಮಿಲಿಗೆ ಶಾಕ್ ಕಾದಿತ್ತು. ಮೊಟ್ಟಮೊದಲ ಚಿತ್ರ 'ಓಯೆ' ಭಾರೀ ಸೋಲು ಕಂಡಿತು. ಬಳಿಕ ನಟಿಸಿದ ಸಿನಿಮಾಗಳೂ ಕೂಡ ಸಕ್ಸಸ್ ಕಾಣುವುದು ಹಾಗಿರಲಿ, ದಯನೀಯ ಸೋಲು ಕಂಡಿತ್ತು. 

ಪ್ರಶ್ನೆ ಕೇಳಿದ ಪುಟ್ಟ ಬಾಲಕಿಗೆ ನಟ ರಣ್‌ಬೀರ್ ಕಪೂರ್ ಕೊಟ್ಟ ಉತ್ತರ ಕೇಳಿ ಶಾಕ್ ಆಗ್ಬೇಡಿ!

ನಟಿ ಶ್ಯಾಮಿಲಿ ನಟಿಸಿದ ನಾಲ್ಕೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಾಣುವ ಮೂಲಕ ಆಕೆಯ ಡಿಮ್ಯಾಂಡ್ ಅರ್ಧಕ್ಕೆ ಕುಸಿದಿತ್ತು. ಅಷ್ಟು ಸಾಲದು ಎಂಬಂತೆ ಸೆಟ್‌ನಲ್ಲಿ ನಟಿ ಶ್ಯಾಮಿಲಿ ತುಂಬಾ ಅಟಿಟ್ಯೂಡ್ ತೋರಿಸುತ್ತಾರೆ ಎಂಬ ಗಂಭೀರ ಆರೋಪ ಅವರ ಮೇಲಿತ್ತು. ಶೂಟಿಂಗ್ ಸ್ಪಾಟ್‌ಗೆ ಸರಿಯಾದ ಟೈಮ್‌ಗೆ ಬರುತ್ತಿರಲಿಲ್ಲ, ಹೇಳಿದ್ದು ಮಾಡುತ್ತಿರಲಿಲ್ಲ ಎಂಬ ದೂರು ನಟಿಸಿದ ಅಷ್ಟೂ ಸಿನಿಮಾ ತಂಡಗಳಿಂದ ಪ್ರಚಾರ ಪಡೆಯಿತು. ನಟಿಯ ವಿರುದ್ಧ ಬಂದ ಆರೋಪಗಳು ಅದೆಷ್ಟು ಬಲವಾಗಿದ್ದವು ಎಂದರೆ ಸಿನಿಮಾ ಆಫರ್ ಬರುವುದೇ ನಿಂತುಹೋಯಿತು. 

ಇಂದು ನಾರ್ತ್‌-ಸೌತ್ ಸಿನಿಮಾ ಭೇದಭಾವವಿಲ್ಲ, ಭಾರತದ ಸಿನಿಮಾ ಎನ್ನಲಾಗುತ್ತಿದೆ; ಅಲ್ಲು ಅರ್ಜುನ್

ಶ್ಯಾಮಿಲಿಗೆ ದಿಕ್ಕು ತೋಚದಂತಾಯಿತು. ಸ್ಥಿತಿ ಅದೆಷ್ಟು ಚಿಂತಾಜನಕವಾಯ್ತು ಎಂದರೆ ನಟಿ ಶ್ಯಾಮಿಲಿ ತೀವ್ರ ಡಿಫ್ರೆಶನ್‌ಗೆ ಜಾರಿಬಿಟ್ಟರು. ಮುಗಿದೇಹೋಯ್ತು, ಆಕೆಯನ್ನು ಸಿನಿಮಾರಂಗ ಸಂಪೂರ್ಣವಾಗಿ ಮರೆತುಬಿಟ್ಟಿತು. ಖ್ಯಾತ ಬಾಲನಟಿ, ಅಂದಿನ ಕಾಲದ ಸ್ಟಾರ್ ಬಾಲನಟಿ ಅಕ್ಷರಶಃ ಮತ್ತೆ ಮೇಲೆದ್ದು ನಿಲ್ಲಲಾಗದಷ್ಟು ಕೆಳಕ್ಕೆ ಬಿದ್ದುಬಿಟ್ಟರು. ಬಾಲನಟಿಯಾಗಿದ್ದಾಗ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದ ಬೇಬಿ ಶ್ಯಾಮಿಲಿ, ದೊಡ್ಡವರಾದ ಬಳಿಕ 5 ಸಿನಿಮಾಗಳಲ್ಲಿ ಕೂಡ ನಟಿಸಲಾಗಲಿಲ್ಲ. ವಿಧಿಯ ಲಿಖಿತವೋ ಅಥವಾ ಮಾಡಿದ ಕರ್ಮವೋ ಎಂದು ಸಿನಿರಂಗ ಮತ್ತು ಸಿನಿಪ್ರೇಕ್ಷಕರು ಮಾತನಾಡಿಕೊಂಡರು ಅಷ್ಟೇ. 

ಪ್ರಭಾಸ್‌ಗೆ 'ಡಾರ್ಲಿಂಗ್' ಅಂತ ಕರೆಯೋ ಸೀಕ್ರೆಟ್ ಬಿಚ್ಚಿಟ್ರು ಮಲಯಾಳಂ ನಟ ಪೃಥ್ವಿರಾಜ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್