ಫಲಿಸದ ಚಿಕಿತ್ಸೆ; ಹಿರಿಯ ನಟ ಲೋಹಿತಾಶ್ವ ವಿಧಿವಶ

Published : Nov 08, 2022, 05:46 PM ISTUpdated : Nov 08, 2022, 05:53 PM IST
ಫಲಿಸದ ಚಿಕಿತ್ಸೆ; ಹಿರಿಯ ನಟ ಲೋಹಿತಾಶ್ವ  ವಿಧಿವಶ

ಸಾರಾಂಶ

ಸ್ಯಾಂಡಲ್ ವುಡ್‌ನ ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಸುಮಾರು ಒಂದು ತಿಂಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಲೋಹಿತಾಶ್ವ ಇಂದು (ನವೆಂಬರ್ 8) ಮಧ್ಯಾಹ್ನ ವೇಳೆಗೆ ಇಹಲೋಕ ತ್ಯಜಿಸಿದರು. 

ಸ್ಯಾಂಡಲ್ ವುಡ್‌ನ ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಸುಮಾರು ಒಂದು ತಿಂಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಲೋಹಿತಾಶ್ವ ಇಂದು (ನವೆಂಬರ್ 8) ಮಧ್ಯಾಹ್ನ ವೇಳೆಗೆ ಇಹಲೋಕ ತ್ಯಜಿಸಿದರು. ಹೃದಯಾಘಾತದಿಂದ ಲೋಹಿತಾಶ್ವ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 80 ವರ್ಷದ ನಟ ಇಂದು ಕೊನೆಯುಸಿರೆಳೆದರು. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಲೋಹಿತಾಶ್ವ ಅವರಿಗೆ ಅಕ್ಟೋಬರ್ 9 ಹೃದಯಾಘಾತವಾಗಿತ್ತು ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು. ಹಿರಿಯನಟನ ಅಗಲಿಕೆಗೆ ಅನೇಕ ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. 

ನಟ ಲೋಹಿತಾಶ್ವ ಸುಮಾರು 500 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕಕಾರ, ರಂಗನಾಟಕ ಮತ್ತು ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇನ್ನು ಇಂಗ್ಲಿಷ್ ಪ್ರಾಧ್ಯಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಚಿತ್ರದ ಮೂಲಕ ಲೋಹಿತಾಶ್ವ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಲೋಹಿತಾಶ್ವ ಅವರ ಮೊದಲ ಕಮರ್ಷಿಯಲ್‌ ಸಿನಿಮಾ ಗೀತಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರಂತ ದಿಗ್ಗಜ ನಟರ ಜೊತೆ ಲೋಹಿತಾಶ್ವ ನಟಿಸಿದ್ದಾರೆ. ಹಿರಿಯ ನಿರ್ದೇಶ ಬಿ ಸೋಮಶೇಖರ್ ಅವರ ಬಹುತೇಕ ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದರು. ಪರಶುರಾಮ, ಸಮಯದ ಗೊಂಬೆ ಸಿನಿಮಾಗಳಲ್ಲಿ ಅಣ್ಣಾವ್ರ ಜೊತೆ ಕಾಣಿಸಿಕೊಂಡಿದ್ದಾರೆ. ಹಾಗೂ ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ. 

ನಟ ಲೋಹಿತಾಶ್ವ 1971ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಒಬ್ಬ ಮಗ ಶರತ್ ಲೋಹಿತಾಶ್ವ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾರಂಗದಿಂದ ದೂರ ಇದ್ದರು. 2018ರ ಬಳಿಕ ಲೋಹಿತಾಶ್ವ ಮತ್ತೆ ಬಣ್ಣ ಹಚ್ಚಿಲ್ಲ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು