ಹುಣಸೂರು ದ್ವಾರಕೀಶ್ ಚುನಾವಣಾ ನಂಟು

Published : Apr 17, 2024, 10:31 AM IST
ಹುಣಸೂರು ದ್ವಾರಕೀಶ್ ಚುನಾವಣಾ ನಂಟು

ಸಾರಾಂಶ

ವಿಜಯ ಸಂಕೇಶ್ವರ್‌ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್‌ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.

ಅಂಶಿ ಪ್ರಸನ್ನಕುಮಾರ್‌

ಮೈಸೂರು(ಏ.17):  ದ್ವಾರಕೀಶ್ ಮೈಸೂರು ಜಿಲ್ಲೆಯ ಹುಣಸೂರಿನವರು. 2004 ರಲ್ಲಿ ಕನ್ನಡನಾಡು ಪಕ್ಷದಿಂದ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಜಯ ಸಂಕೇಶ್ವರ್‌ ಅವರು 2004 ರಲ್ಲಿ ಕನ್ನಡನಾಡು ಪಕ್ಷ ಕಟ್ಟಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಂತೆ ಮೈಸೂರು, ಚಾಮರಾಜನಗರ ಭಾಗದಲ್ಲಿ ಹಲವಾರು ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಹುಣಸೂರಿನಿಂದ ದ್ವಾರಕೀಶ್‌ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿದ್ದರು.

1,36,054 ಸ್ವೀಕೃತ ಮತಗಳ ಪೈಕಿ 60,258 ಮತಗಳನ್ನು ಪಡೆದ ಜೆಡಿಎಸ್ಸಿನ ಜಿ.ಟಿ. ದೇವೇಗೌಡರು ಜಯ ಗಳಿಸಿದರು. ಕಾಂಗ್ರೆಸ್ಸಿನ ಎಸ್‌. ಚಿಕ್ಕಮಾದು- 46,126, ಬಿಜೆಪಿಯ ಬಿ.ಎಸ್. ಮರಿಲಿಂಗಯ್ಯ- 19,967, ಪಕ್ಷೇತರರಾದ ಹೊಸೂರು ಕುಮಾರ್- 4,272, ಕನ್ನಡನಾಡು ಪಕ್ಷದ ಬಿ.ಎಸ್‌. ದ್ವಾರಕೀಶ್‌- 2,265, ಜನತಾಪಕ್ಷದ ಪಿ. ಮಹದೇವ- 1,876, ಅರಸು ಸಂಯುಕ್ತ ಪಕ್ಷದ ವಿ. ಪಾಪಣ್ಣ- 651 (ಕಣದಿಂದ ನಿವೃತ್ತರಾಗಿದ್ದರು), ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜೇಗೌಡ- 639 ಮತ ಗಳಿಸಿದ್ದರು.

ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ಗೆದ್ದು ಬೀಗಿದ ಪ್ರಚಂಡ ಕುಳ್ಳ

ದ್ವಾರಕೀಶ್‌ ಅವರು ಐದನೇ ಸ್ಥಾನಕ್ಕೆ ಹೋಗಿ, ಠೇವಣಿ ನಷ್ಟವಾಗಿದ್ದರಿಂದ ಮತ್ತೆಂದು ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!