ಸಲಗ ದಾಖಲೆ ಮುರಿಯಲಿದೆಯಾ ಭೀಮ: ಸಾವಿರ ಆನೆಗಳ ಶಕ್ತಿ ಭೀಮ ಎಂದ ದುನಿಯಾ ವಿಜಯ್!

By Govindaraj SFirst Published Jul 26, 2024, 12:19 PM IST
Highlights

ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೇ , ಡೋಂಟ್ ವರಿ ಚಿನ್ನಮ್ಮಾ,ಬೂಮ್ ಬೂಮ್ ಸೇರಿದಂತೆ ಒಂದಕ್ಕಿಂತ ಒಂದು ಚಂದ.. ಸಿನಿಮಾದ ಹಾಡುಗಳ ಹಿಂದಿನ ಶಕ್ತಿಯನ್ನ ದು. ವಿಜಯ್ ಪತ್ರಕರ್ತರಿಗೆ ಪರಿಚಯಿಸಿದ್ದು ಹೀಗೆ.

ಸ್ಯಾಂಡಲ್‌ವುಡ್ ಮತ್ತೊಂದು ಬಿಗ್ ಹಿಟ್ ಗಾಗಿ ಎದುರು ನೋಡುತ್ತಿದೆ. ಅದು ದುನಿಯಾ ವಿಜಯ್ ನಟಿಸಿ ನಿರ್ದೆಸಿರೋ ಭೀಮ ಸಿನಿಮಾನೆ ಆಗಬಹುದು. ದು.ವಿಜಯ್ ನಿರ್ದೇಶಿಸಿದ ಮೊದಲ ಸಿನಿಮಾ ಸಲಗ  ಬಿಗ್ ಹಿಟ್ ಆಗಿದೆ. ಈಗ ಭೀಮ ಅವರ ಎರಡನೇ ನಿರ್ದೇಶನದ ಸಿನಿಮಾ ಡ್ರಗ್ಸ್ ಮಾಫಿಯಾ ಕುರಿತಾದ ಚಿತ್ರ.. ಇವತ್ತಿನ ಯಂಗ್ ಜನರೇಷನ್ ಡ್ರಗ್ ಅಡಿಕ್ಷನ್ನಿಂದ ಹೇಗೆ ಹಾಳಾಗುತ್ತಿದ್ದಾರೆ ಎನ್ನುವ ಸೀರಿಯಸ್ ಇಶ್ಯೂವನ್ನೆ ಸಿನಿಮಾದಲ್ಲಿ ಫೋಕಸ್ ಮಾಡಿದ್ದಾರಂತೆ. ಭೀಮ ಸಿನಿಮಾ ಆಗಸ್ಟ್ 9 ಕ್ಕೆ ರಿಲೀಸ್ ಆಗುತ್ತಿದ್ದು ಚಿತ್ರದ ಪ್ರೀ ರಿಲೀಸ್ ಪ್ರೆಸ್ಮೀಟ್ ನಿನ್ನೆ ನಡೆಸಲಾಯಿತು. ಬ್ಲ್ಯಾಕ್ ಅಂಡ್ ಬ್ಯ್ಲಾಕ್ ಡ್ರೆಸ್ನಲ್ಲಿ ಕರಿಚಿರತೆ ವಿಜಯ್ ಎಂಟ್ರಿ ಕೊಟ್ಟರು. 

ಭೀಮ ಸಿನಿಮಾದ ಜೀವಾಳ ಕತೆಯಾದರೆ ಸಿನಿಮಾದ ನರನಾಡಿ ಚಿತ್ರದ ಸಂಗೀತವಾಗಿದೆ. ಚರಣ್ ರಾಜ್ ಸಂಗೀತದ ಭೀಮ ಸಿನಿಮಾ ಹಾಡುಗಳು ಭರ್ಜರಿ ಹಿಟ್ಟಾಗಿವೆ.. ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೇ , ಡೋಂಟ್ ವರಿ ಚಿನ್ನಮ್ಮಾ,ಬೂಮ್ ಬೂಮ್ ಸೇರಿದಂತೆ ಒಂದಕ್ಕಿಂತ ಒಂದು ಚಂದ.. ಸಿನಿಮಾದ ಹಾಡುಗಳ ಹಿಂದಿನ ಶಕ್ತಿಯನ್ನ ದು. ವಿಜಯ್ ಪತ್ರಕರ್ತರಿಗೆ ಪರಿಚಯಿಸಿದ್ದು ಹೀಗೆ. ಭೀಮ ಸಿನಿಮಾದ ಹಾಡುಗಳ ಯಶಸ್ಸಿನಲ್ಲಿ ಇನ್ನೂ ಪಾಳುದಾರರಿದ್ದಾರೆ. ಅದರಲ್ಲಿ ಮುಖ್ಯವಾಗಿಈ ಸಿನಿಮಾದ ಸಾಹಿತ್ಯ ಬರೆದವರಲ್ಲಿ ಅರಸು ಅಂತಾರೆ ಹಾಗೆಯೇ ಗಾಯಕ  ನವೀನ್ ಸಜ್ಜೂ ಕೂಡ ಮುಖ್ಯವಾದವರು ಎಂದ ದುನಿಯಾ ವಿಜಯ್ ಈ ಸಿನಿಮಾದ ಪ್ಯಾಥೋ ಸಾಂಗ್ 4 ಲೈನ್ ಹಾಡಿಸಿಯೇ ಬಿಟ್ಟರು. 

Latest Videos

ಎಂದಿನಂತೆ ದು.ವಿಜಯ್ ಮತ್ತೊಂದು ಪ್ಯಾಥೋ ಸಾಂಗ್ ಪಕ್ಕಾ ಹಿಟ್ಟಾಗುತ್ತೆ ಅಂತ ಇಲ್ಲಿಯೇ ಸೂಚನೆ ಸಿಕ್ಕಿಬಿಟ್ಟಿತ್ತು. ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ್ , ‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್ ಬೂಮ್ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂಗಳೂರಿನ ಬಗ್ಗೆ ಹೇಳುವಂತಿದೆ. ಶೀಘ್ರದಲ್ಲೇ ಈ ಹಾಡು ರಿಲೀಸ್ ಆಗಲಿದೆ. ಭೀಮ ಡ್ರಗ್ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದು. 

ಭೀಮ ಸಿನಿಮಾ ಯಾಕೆ ನೋಡಬೇಕು..?: ದುನಿಯಾ ವಿಜಯ್ ಏನ್‌ ಹೇಳ್ತಾರೆ!

‘ಈಗಿನ ಕಾಲದಲ್ಲಿ ಡ್ರಗ್ ಎನ್ನುವುದು ಇಡೀ ಸಮಾಜವನ್ನು ವ್ಯಾಪಿಸಿರುವ ರೀತಿ ಭಯ ಹುಟ್ಟಿಸುತ್ತದೆ  ಅದನ್ನು ನೇರವಾಗಿ ತೆರೆ ಮೇಲೆ ತಂದಿದ್ದೇನೆ, ಸಾವಿರ ಆನೆಗಳ ಶಕ್ತಿ ಭೀಮ ಅಂತಿದ್ದಾರೆ ವಿಜಯ್.‘ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರೂ ಅದ್ಭುತವಾಗಿ ನಟಿಸಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ನಯನಾ ಸೂಡ, ರಾಘು ಶಿವಮೊಗ್ಗ, ಗೋಪಾಲಕೃಷ್ಣ ದೇಶಪಾಂಡೆ, ಪ್ರಿಯಾ ಶಠಮರ್ಷಣ್ ಸೇರಿದಂತೆ ಅನೇಕರು ತೆರೆ ಹಂಚಿಕೊಂಡಿದ್ದಾರೆ. ನಾಯಕಿಯಾಗಿ ಅಶ್ವಿನಿ ಅಂಬರೀಶ್ ಅಭಿನಯಿಸಿದ್ದಾರೆ. ವಿಶೇಷ ಎಂದರೆ ಇವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರು. ರಂಗಭೂಮಿ ಕಲಾವಿದರು ಇಲ್ಲದಿದ್ದರೆ ಸಿನಿಮಾವನ್ನು ಬೆಳಗಿಸಲು ಸಾಧ್ಯವಿಲ್ಲ. ಇವರ ಜತೆಗೆ 150 ಹೊಸ ಕಲಾವಿದರು ಈ ಚಿತ್ರದಲ್ಲಿನಟಿಸಿದ್ದಾರೆ’ ಎಂದಿದ್ದಾರೆ ವಿಜಯ್. ಸಿನಿಮಾಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 9ಕ್ಕೆ ತೆರೆ ಕಾಣುತ್ತಿದೆ.

click me!