ದುನಿಯಾ ವಿಜಿ 'ಸಲಗ' ಮೇಕಿಂಗ್ ವಿಡಿಯೋ ರಿಲೀಸ್

Published : Dec 10, 2019, 05:27 PM ISTUpdated : Dec 10, 2019, 05:31 PM IST
ದುನಿಯಾ ವಿಜಿ 'ಸಲಗ' ಮೇಕಿಂಗ್ ವಿಡಿಯೋ ರಿಲೀಸ್

ಸಾರಾಂಶ

ರಿಯಲ್ 'ಸಲಗ' ಮೇಕಿಂಗ್ ಗೆ ನೋಡೋದಕ್ಕೆ ಕೌಂಟ್ ಡೌನ್ ಶುರು | 18 ಕ್ಕೆ ಸಲಗ ಮೇಕಿಂಗ್, ವಿಜಿ ಡಾಲಿ ಕಾಂಬಿನೇಷನ್ ಹೊಸ ದುನಿಯಾ ಅನಾವರಣ |   ಇದೇ 18ಕ್ಕೆ ಬಹು ನಿರೀಕ್ಷಿತ ಸಲಗ ಮೇಕಿಂಗ್ ವಿಡಿಯೋ ರಿಲೀಸ್

ದುನಿಯಾ ವಿಜಯ್ ನಟನೆಯೊಂದಿಗೆ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಿನಿಮಾ ಸಲಗ. ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಈ ಚಿತ್ರದ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ಚಿತ್ರತಂಡ  ಡೇಟ್ ಫಿಕ್ಸ್ ಮಾಡಿದೆ.

ಇದೇ ತಿಂಗಳ 18ನೇ ತಾರೀಖು ಬೆಳಿಗ್ಗೆ 10 ಗಂಟೆ ಸಲಗ ಚಿತ್ರದ ಮೇಕಿಂಗ್ ವಿಡಿಯೋನ ಗ್ರ್ಯಾಂಡ್ ಆಗಿ ಲಾಂಚ್ ಮಾಡಲಾಗುತ್ತಿದೆ. ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರಕ್ಕೆ ಟಗರು ಕೆ.ಪಿ.ಶ್ರೀಕಾಂತ್ ರ ಅದ್ಧೂರಿ ನಿರ್ಮಾಣವಿದೆ.

'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ವಿಶಿಷ್ಟ ಕಥಾಹಂದರ ರಾ ರೌಡಿಸಂ ಹಿನ್ನೆಲೆ ಇರೋ ಸಲಗ ಚಿತ್ರ ಔಟ್ ಅಂಡ್ ಔಟ್ ಮಾಸ್ ಎಂಟ್ರಟೈನರ್ ಅಂತಲೇ ಹೇಳಲಾಗ್ತಿದ್ದು, ಮೇಕಿಂಗ್ ವಿಡಿಯೋ ಮೂಲಕ ಚಿತ್ರದಲ್ಲಿನ ಒಂದಷ್ಚು ವಿಶೇಷತೆಗಳನ್ನ ಬಿಟ್ಟು ಕೊಡೋ ಧಾವಂತದಲ್ಲಿದೆ ಚಿತ್ರತಂಡ.

ಕ್ಲಾಸ್, ಮಾಸ್, ಕಾಮಿಡಿ, ಎಮೋಷನ್ ಎಲ್ಲಾ ಬಗೆಯ ಅಂಶಗಳ ಅನಾವರಣ ಆ ವಿಡಿಯೋದಲ್ಲಿರಲಿದೆಯಂತೆ. ಎಲ್ಲದಕ್ಕಿಂತ ಹೆಚ್ಚಾಗಿ ದುನಿಯಾ ವಿಜಯ್ ಅವ್ರ ಚೊಚ್ಚಲ ನಿರ್ದೇಶನವಿರೋ ಈ ಚಿತ್ರದ ಮೇಕಿಂಗ್ ವಿಶೇಷ ಕಥೆಯೊಂದನ್ನ ಹೇಳಲಿದೆಯಂತೆ. ಚರಣ್ ರಾಜ್ ಸಂಗೀತ ಸಂಯೋಜನೆ ಇರೋ ಸಲಗ ಚಿತ್ರದ ಫಸ್ಟ್ ಸೌಂಡ್ ಝಲಕ್ ಮೇಕಿಂಗ್ ವಿಡಿಯೋದಲ್ಲಿದ್ದು, ಸಲಗ ಸೌಂಡೇ ಕನ್ನಡ ಸಿನಿಪ್ರಿಯರಿಗೆ ಹೊಸ ಕಿಕ್ ಕೊಡಲಿದೆಯಂತೆ.

ಕೆಜಿಎಫ್‌ ಸಂಗೀತ ನಿರ್ದೇಶಕನ ಹೈಟೆಕ್ ಸ್ಟುಡಿಯೋ; ಫೋಟೋ ನೋಡಿ!

ಸಿಕ್ಕಾಪಟ್ಟೆ ಸ್ಪೆಷಾಲಿಟೀಸ್ ಜೊತೆಗೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರುವ ಅಂಶಗಳಿರೋ ಸಲಗ ಚಿತ್ರದ ಮೇಕಿಂಗ್ ವಿಡಿಯೋ 18ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಸಲಗ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಚಿತ್ರತಂಡ ಆಮೇಲೆ ಹಂಚಿಕೊಳ್ಳಲಿದೆಯಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?