ರಾಬರ್ಟ್ ಚಿತ್ರದಲ್ಲಿ 'ಕುಚ್ಚಿಕು ಕುಚ್ಚಿಕು' ರೀಮೆಕ್ ಹಾಡಿಗೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಲಿಟಲ್ ಟೈಗರ್ ವಿನೋದ್ ಪ್ರಭಾಕರ್.
ನಾದ ಬ್ರಹ್ಮ ಹಂಸಲೇಖ ಸಂಯೋಜನೆಯಲ್ಲಿ ಮೂಡಿ ಬಂದಂತಹ 'ಕುಚ್ಚಿಕು ಕುಚ್ಚಿಕು' ಹಾಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿತ್ತು. ಈಗ ಅದೇ ಹಾಡನ್ನು ರಿಮೇಕ್ ಮಾಡಿ 'ರಾಬರ್ಟ್' ಚಿತ್ರದಲ್ಲಿ ಅಳವಡಿಸಬೇಕು ಎಂಬುದು ನಿರ್ದೇಶಕ ತರುಣ್ ಸುದೀರ್ ನಿರ್ಧರಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಖುಷ್ ಖಬರ್!
ಎಸ್.ಪಿ.ಬಾಲಸುಬ್ರಮಣ್ಯಂ ಕಂಠದಲ್ಲಿ ಹಿಟ್ ಆದ ಈ ಹಾಡಿನ ರಿಮೇಕ್ ವರ್ಷನ್‌ಗೆ ಯಾರು ಧ್ವನಿ ನೀಡುತ್ತಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ದರ್ಶನ್ ಜೊತೆ ಜೋಡಿಯಾಗಿ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
'ಒಡೆಯ' ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ದರ್ಶನ್
ವಿಷ್ಣುವರ್ಧನ್- ಅಂಬರೀಶ್ ಕಮಾಲ್ ಮಾಡಿರುವ ಹಾಡನ್ನು ಯಾರು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಆದರೆ ವಿಭಿನ್ನ ರೀತಿಯಲ್ಲಿ ತೋರಿಸಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. 'ಒಡೆಯ' ಪ್ರಮೋಶನ್‌ನಲ್ಲಿ ಬ್ಯುಸಿ ಇರುವ ದರ್ಶನ್ 'ರಾಬರ್ಟ್' ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣಕ್ಕೆ ವಾರಣಾಸಿಗೆ ತೆರಳಲಿದ್ದಾರೆ.