'ಅವನೇ ಶ್ರೀಮನ್ನಾರಾಯಣ' ನೋಡಿದವರಿಗೆ ಸಿಗಲಿದೆ ಎರಡೂವರೆ ಲಕ್ಷ ರೂ ಕ್ಯಾಶ್!

Published : Dec 10, 2019, 03:38 PM IST
'ಅವನೇ ಶ್ರೀಮನ್ನಾರಾಯಣ' ನೋಡಿದವರಿಗೆ ಸಿಗಲಿದೆ ಎರಡೂವರೆ ಲಕ್ಷ ರೂ ಕ್ಯಾಶ್!

ಸಾರಾಂಶ

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅಭಿಮಾನಿಗಳಿಗಾಗಿ ರಕ್ಷಿತ್ ಶೆಟ್ಟಿ ಮತ್ತು ಟೀಂ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ನೀವೂ ಭಾಗವಹಿಸಿ. ಕ್ಯಾಶ್ ಪ್ರೈಸ್ ಗೆಲ್ಲಿ. 

ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಬಹು ನಿರೀಕ್ಷಿತ  'ಅವನೇ ಶ್ರೀಮನ್ನಾರಾಯಣ' ಚಿತ್ರ ಇದೇ ತಿಂಗಳ 27 ಕ್ಕೆ ರಿಲೀಸ್ ಆಗಲಿದೆ.  

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಈಗಾಗಲೇ ಟ್ರೇಲರ್ ಹಾಗೂ ಟೀಸರ್ ಗಮನ ಸೆಳೆದಿದೆ.  ಪ್ರಮೋಶನ್ ಕೆಲಸವೂ ಭರ್ಜರಿಯಾಗಿಯೇ ಇದೆ.  ಪ್ರಮೋಶನ್‌ಗೆ ಗಿಮಿಕ್‌ಗಾಗಿ 'ಅವನೇ ಶ್ರೀಮನ್ನಾರಾಯಣ' ತಂಡ ಒಂದು ಸ್ಪರ್ಧೆ ಏರ್ಪಡಿಸಿದೆ.  ಈಗೀಗ ಪ್ರಮೋಶನ್ ಗಿಮಿಕ್ ಆಗಿ ವೀಕ್ಷಕರಿಗೆ ಸ್ಪರ್ಧೆ ಏರ್ಪಡಿಸಿ ಅವರು ಹೆಚ್ಚೆಚ್ಚು ಭಾಗವಹಿಸುವಂತೆ ಮಾಡುವುದು. ಅದರಂತೆ ರಕ್ಷಿತ್ ಮತ್ತು ತಂಡ ಅದೇ ಕೆಲಸಕ್ಕೆ ಮುಂದಾಗಿದೆ.

 

ಚಿತ್ರದ ಟ್ರೇಲರ್‌ನಲ್ಲಿ ಬರುವ 5 ಸಂಖ್ಯೆಗಳನ್ನು ಜೋಡಿಸಿ ಒಂದು ಸರಿಯಾದ ಸಂಖ್ಯೆ ಮಾಡಬೇಕು. ಸರಿಯಾಗಿ ಮಾಡಿದ ಲಕ್ಕಿ ವಿನ್ನರ್‌ಗೆ ಕ್ಯಾಶ್ ಪ್ರೈಸ್ ಸಿಗಲಿದೆ. 

ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಸಿನಿಮಾ ಎಂದರೆ ಸಾಕು ಅಲ್ಲಿ ಏನಾದರೂ ಓಮದು ಸ್ಪೆಷಲ್ ಇದ್ದೇ ಇರುತ್ತದೆ. ಸಹಜವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್