ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನೆಮಾದ ಮೊದಲ ಶೆಡ್ಯೂಲ್ ಮುಗಿದಿದ್ದು, ಎರಡನೇ ಶೆಡ್ಯೂಲ್ ಮುಂಬೈನಲ್ಲಿ 45 ದಿನಗಳ ಕಾಲ ನಡೆಯಲಿದೆ. ಕಿಯಾರಾ ಅಡ್ವಾಣಿ ಈ ಶೆಡ್ಯೂಲ್‌ನಲ್ಲಿ ಯಶ್ ಜೊತೆಗೆ ಭಾಗಿಯಾಗಲಿದ್ದಾರೆ.
ನಟ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನೆಮಾದ ಮೊದಲ ಶೆಡ್ಯೂಲ್ ಮುಗಿದಿದೆ. ಭಾರತೀಯ ಚಿತ್ರರಂಗದ ಹಲವು ಹೆಸರಾಂತ ನಟರು ಈ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಿರೀಕ್ಷೆಗೆ ತಕ್ಕಂತೆಯೇ ಯಶ್ ಟಾಕ್ಸಿಕ್ ನ ಗುಟ್ಟಾಗಿ, ಅಚ್ಚುಕಟ್ಟಾಗಿ ರೆಡಿ ಮಾಡ್ತಾ ಇದ್ದಾರೆ. ಇದೀಗ ಎರಡನೇ ಶೆಡ್ಯೂಲ್ ಶೂಟಿಂಗ್ ಗೆ ರಾಕಿಂಗ್ ಸ್ಟಾರ್ ರೆಡಿಯಾಗಿದ್ದು, ಈ ತಿಂಗಳ ಅಂತ್ಯದಿಂದ 45 ದಿನಗಳ ಶೂಟಿಂಗ್ ನಡೆಯಲಿದ್ದು, ಸದ್ಯದಲ್ಲೇ ಮುಂಬೈಗೆ ಹಾರಲಿದ್ದಾರಂತೆ.
ನಿರ್ದೇಶಕಿ ಗೀತು ಮೋಹನ್ ದಾಸ್ 45 ದಿನಗಳ ಶೂಟಿಂಗ್ ಶೆಡ್ಯೂಲ್ ರೆಡಿ ಮಾಡಿದ್ದು, ಯಶ್ ಮುಂಬೈನಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಟಾಕ್ಸಿಕ್ ತಂಡವನ್ನು ಸೇರಲಿದ್ದಾರೆಂದು ತಿಳಿದುಬಂದಿದೆ.
undefined
ಬಿಗ್‌ಬಾಸ್ ಮನೆ ಮೃಗಾಲಯವಾದ್ರೆ, ಯಾರು ಯಾವ ಪ್ರಾಣಿ, ಧನ್‌ರಾಜ್ ಉತ್ತರಕ್ಕೆ ಕಿಚ್ಚ ನಕ್ಕು ನಕ್ಕು ಸುಸ್ತು!
ಕಳೆದ ತಿಂಗಳು, ಯಶ್ ಬೆಂಗಳೂರಿನ ಹೊರವಲಯದಲ್ಲಿ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್‌ನ ಮೊದಲ ಶೆಡ್ಯೂಲ್ ಅನ್ನು ಚಿತ್ರೀಕರಣ ಮಾಡಿ ಮುಗಿಸಿದ್ದರು. ಕರ್ನಾಟಕದಲ್ಲಿ ಚಿತ್ರೀಕರಣದ ವೇಳಾಪಟ್ಟಿ ಮುಗಿದಿದ್ದು, ಈಗ ಟೀಂ ಮುಂಬೈಗೆ ಹಾರಲಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರು ದೀಪಾವಳಿಯ ನಂತರ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ಮೊದಲ ವೇಳಾಪಟ್ಟಿಯ ಶೂಟಿಂಗ್ ಆಕ್ಷನ್ ಸೀಕ್ವೆನ್ಸ್‌ಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತಂತೆ. ಅದಕ್ಕಾಗಿ ಬೆಂಗಳೂರಿನಲ್ಲಿ ಸೆಟ್ ಹಾಕಲಾಗಿತ್ತು. ಇದೀಗ ಎರಡನೇ ಸೀಕ್ವೆನ್ಸ್ ಮುಂಬೈನಲ್ಲಿ ನಡೆಲಿದ್ದು ರೂಮ್ಯಾಂಟಿಕ್ ಸೀನ್ ಗಳ ಶೂಟಿಂಗ್ ನಡೆಯಲಿದೆ ಎಂದು ತಿಳಿದುಬಂದಿದೆ. ಯಶ್ ಮತ್ತು ಕಿಯಾರಾ ನಡುವಿನ ಹೆಚ್ಚಿನ ರೋಮ್ಯಾಂಟಿಕ್ ದೃಶ್ಯಗಳನ್ನು ಚಿತ್ರಿಸಲು ಗೀತು ಬಯಸಿದ್ದು, ಮುಂಬೈನ ಉಪನಗರದಲ್ಲಿರುವ ಸ್ಟುಡಿಯೋದಲ್ಲಿ ಸೆಟ್‌ಗಳನ್ನು ನಿರ್ಮಿಸಿದೆ. ಕೆಲವು ಹೊರಾಂಗಣ ದೃಶ್ಯಗಳು ಕೂಡ ಇರುವುದರಿಂದ ಮಳೆಯ ಸನ್ನಿವೇಶ ನೋಡಿಕೊಂಡು ದೀಪಾವಳಿಯ ಮೊದಲು ಅಥವಾ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.
ಬಿಗ್‌ಬಾಸ್ ಖ್ಯಾತಿಯ ನಟಿ ಶುಭಾಶ್ರೀ ಕಾರು ಅಪಘಾತ, ಇಬ್ಬರಿಗೆ ಗಾಯ
ಕರ್ನಾಟಕದಿಂದ ಗೋವಾ ಮತ್ತು ಮುಂಬೈಗೆ ಪ್ರಯಾಣಿಸುವ ಕಥೆಯೊಂದಿಗೆ ಡ್ರಗ್ ಮಾಫಿಯಾದ ಹಿನ್ನೆಲೆಯಳ್ಳ ಕಥೆಯೆಂದು ಹೇಳಲಾಗುತ್ತಿದೆ. ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಸಿನೆಮಾವಾಗಿ ಟಾಕ್ಸಿಕ್ ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗ ಬಹಳಷ್ಟು ಭರವಸೆ ಇಟ್ಟುಕೊಂಡಿದೆ.
ಕಿಯಾರಾ ಅಡ್ವಾಣಿ ಯಶ್ ಗೆ ಜೋಡಿಯಾಗಿ ನಟಿಸಿದ್ದರೆ, ನಯನತಾರಾ, ಸಹೋದರಿ ಪಾತ್ರದಲ್ಲಿದ್ದಾರೆ. ಹುಮಾ ಖುರೇಷಿ ವಿಲನ್ ಪಾತ್ರದಲ್ಲಿದ್ದಾರೆ. ಪ್ಯಾನ್-ಇಂಡಿಯಾ ಸಿನೆಮಾದಲ್ಲಿ ಶ್ರುತಿ ಹಾಸನ್ ಮತ್ತು ತಾರಾ ಸುತಾರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಇದು ಯಶ್ ವೃತ್ತಿ ಜೀವನದ ಅತ್ಯಂತ ದುಬಾರಿ ಸಿನೆಮಾವಾಗಿದೆ.