
ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಯ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಇದಕ್ಕೆ ಸ್ವತಃ ಸಂಜನಾ ಆನಂದ್ ಅವರು ಸ್ಪಷ್ಟನೆ ನೀಡಿದ್ದಾರೆ.
ನಿವೇದಿತಾ ಗೌಡರಿಂದ ದೂರ ಆಗಿರುವ ಚಂದನ್ ಶೆಟ್ಟಿ, ಸದ್ಯ ಸಿನೆಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಆದರೆ ಚಂದನ್ ಎರಡನೇ ಮದುವೆ ಆಗುತ್ತಿದ್ದಾರೆಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದ್ದು, ಕನ್ನಡ ನಟಿ ಸಂಜನಾ ಆನಂದ್ ಅವರು ಚಂದನ್ ಬಾಳಿಗೆ ಬೆಳಕಾಗಿ ಬರಲಿದ್ದಾರೆಂದು ಸುದ್ದಿ ಹಬ್ಬಿತ್ತು. ಈ ಸುದ್ದಿಯನ್ನು ಅನೇಕ ಮಂದಿ ನಿಜ ಎಂದುಕೊಂಡಿದ್ದರು ಕೂಡ.
ಬಿಗ್‌ಬಾಸ್ ಮನೆ ಮೃಗಾಲಯವಾದ್ರೆ, ಯಾರು ಯಾವ ಪ್ರಾಣಿ, ಧನ್‌ರಾಜ್ ಉತ್ತರಕ್ಕೆ ಕಿಚ್ಚ ನಕ್ಕು ನಕ್ಕು ಸುಸ್ತು!
ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ಸಂಜನಾ ಆನಂದ್, ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು, ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿ ಇಷ್ಟರಮಟ್ಟಿಗೆ ಹಬ್ಬಲು ಕಾರಣ ಏನು ಎಂದು ನೋಡುತ್ತಾ ಹೋದರೆ,ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನಾಗಿದ್ದು, ಸಂಜನಾ ಆನಂದ್ ಕೂಡ ಇದೇ ಚಿತ್ರದಲ್ಲಿ ನಟಿಸಿದ್ದಾರೆ. ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಚಂದನ್ ಮತ್ತು ಸಂಜನಾ ಆನಂದ್ ಅವರ ಈ ಹಾಡು ಒಂದು ವರ್ಷದ ಹಿಂದೆಯೇ ಯೂಟ್ಯೂಬ್‌ನಲ್ಲಿ ಬಿಡುಗಡೆಯೂ ಆಗಿದೆ. ಈ ಹಾಡಿನಲ್ಲಿ ಇವರ ಕೆಮೆಸ್ಟ್ರೀಯನ್ನೂ ನೋಡಿರುವ ಕೆಲವರು ಈಗ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಹಬ್ಬಿಸಿದ್ದಾರೆ ಎಂಬ ಅನುಮಾನ ಸ್ಯಾಂಡಲ್‌ವುಡ್ ಅಂಗಳದಲ್ಲಿದೆ.
ಬಚ್ಚನ್ ಕುಟುಂಬಕ್ಕೆ ಐಶ್ವರ್ಯಾ ರೈ ದುರಾದೃಷ್ಟವಂತರೇ? ಸೊಸೆಯ ಜಾತಕದ ಬಗ್ಗೆ ಅಮಿತಾಬ್ ಪ್ರತಿಕ್ರಿಯೆ
ಚಂದನ್ ಶೆಟ್ಟಿ ಸದ್ಯಕ್ಕೆ ಬ್ಯಾಚುಲರ್ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ, ಹಾಡು, ಅಭಿನಯ ಎಂದು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ದುಬೈ ಪ್ರವಾಸ ಕೂಡ ಹೋಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.