ದರ್ಶನ್ ಸಲುವಾಗಿ ವಾರಕ್ಕೆ ಎರಡು ಭಾರಿ ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿರೋ ವಿಜಯಲಕ್ಷ್ಮಿ ನಿಜವಾಗ್ಲು ಟೆನ್ಷನ್ನಲ್ಲಿದ್ದಾರಾ.? ಹೀಗೊಂದು ಡೌಟ್ ವಿಜಯಲಕ್ಷ್ಮಿ ದರ್ಶನ್ ಫಾಲೋವರ್ಸ್ಗೆ ಕಾಡುತ್ತಿದೆ. ಅದಕ್ಕೆ ಕಾರಣ ಈ ಫೋಟೋಗಳು.. ದರ್ಶನ್ ಜೈಲಲ್ಲಿ ಟೆನ್ಷನ್ನಲ್ಲಿದ್ರೆ ಈಗ ಕಡೆ ವಿಜಯಲಕ್ಷ್ಮಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಣ್ಣ ದರ್ಶನ್ ಗೆ ಬಳ್ಳಾರಿ ಜೈಲಲ್ಲಿ ನರಕ ದರ್ಶನ ಆಗುತ್ತದೆ. ಬಳ್ಳಾರಿ ಜೈಲು ಮುಂಭಾಗ ದಾಸನ ಫ್ಯಾನ್ಸ್ಗೆ ಟೂರಿಸ್ಟ್ ಸ್ಪಾಟ್ ಆಗಿದೆ. ಗಂಡನನ್ನ ಬಿಡಿಸಿ ಹೊರ ತರೋ ದುಸ್ಸಾಹಸದಲ್ಲಿ ಪತ್ನಿ ವಿಜಯಲಕ್ಷ್ಮಿಯ ಶತ ಪ್ರಯತ್ನ ನಡೀತಿವೆ. ಈ ಜೈಲು ಹೋರಾಟ ಮಧ್ಯೆಯೂ ವಿಜಯಲಕ್ಷ್ಮಿ ಮತ್ತೊಂದು ಮುಖ ಸೋಷಿಯಲ್ ಮೀಡಿಯಾದಲ್ಲಿ ರಿವಿಲ್ ಆಗಿದೆ. ಆದೇನು ಅಂತ ನೋಡಿದ್ರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪಾರ್ಟಿ ಪ್ರಸಂಗ!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅಂದರ್ ಆಗಿರೋ ದರ್ಶನ್ ಗ್ಯಾಂಗ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಗೆ ಆಗಿದೆ. ದರ್ಶನ್ಗೆ ಇಷ್ಟು ವರ್ಷ ಶಿಕ್ಷೆ ಅಷ್ಟು ವರ್ಷ ಶಿಕ್ಷೆ ಆಗುತ್ತೆ ಅಂತ ಸುದ್ದಿ ಆಗುತ್ತಿದೆ. ಇದನ್ನ ನೋಡಿ ಫ್ಯಾನ್ಸ್ ನೋವಲ್ಲಿ ಬೆಯುತ್ತಿದ್ದಾರೆ. ಹೇಗಾದ್ರು ಮಾಡಿ ದರ್ಶನ್ ಜೈಲಿಂದ ಬಂದೇ ಬರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್ಗೆ ಈಗ ಅದು ಕಷ್ಟ ಅಂತ ಗೊತ್ತಾಗುತ್ತಿದೆ. ದರ್ಶನ್ಗೆ ಜೈಲು ಶೀಕ್ಷೆ ಫಿಕ್ಸ್ ಅನ್ನೋ ಟೆಕ್ಷನ್ ಎಲ್ಲರದ್ದು.
ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!
ದರ್ಶನ್ ಸಲುವಾಗಿ ವಾರಕ್ಕೆ ಎರಡು ಭಾರಿ ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿರೋ ವಿಜಯಲಕ್ಷ್ಮಿ ನಿಜವಾಗ್ಲು ಟೆನ್ಷನ್ನಲ್ಲಿದ್ದಾರಾ.? ಹೀಗೊಂದು ಡೌಟ್ ವಿಜಯಲಕ್ಷ್ಮಿ ದರ್ಶನ್ ಫಾಲೋವರ್ಸ್ಗೆ ಕಾಡುತ್ತಿದೆ. ಅದಕ್ಕೆ ಕಾರಣ ಈ ಫೋಟೋಗಳು.. ದರ್ಶನ್ ಜೈಲಲ್ಲಿ ಟೆನ್ಷನ್ನಲ್ಲಿದ್ರೆ ಈಗ ಕಡೆ ವಿಜಯಲಕ್ಷ್ಮಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತೆ ಬರ್ತ್‌ಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ಗೋಸ್ಕರ ಅವರ ಕುಟುಂಬ ಕೂಡ ಒಟದ್ದಾಡುತ್ತಿದೆ. ಅದರಲ್ಲು ಪತ್ನಿ ವಿಜಯಲಕ್ಷ್ಮಿ ಬಗ್ಗೆಯಂತು ಎಲ್ಲರಿಗೂ ಕನಿಕರ. ಆಕೆ ಟೆಂಪಲ್ ರನ್ ಮಾಡೋ ಒಂದೊಂದು ಫೋಟೋ ಬಿಟ್ಟಾಗಲೂ ಸಿಂಪತಿ ತೋರಿಸಿದವರೇ ಹೆಚ್ಚು. ಆದ್ರೆ ಅಸಲಿ ಕಥೆ ಬೇರೆನೇ ಇದೇ ಅಂತಿದೆ ಈ ಫೋಟೋಗಳು. ಯಾಕಂದ್ರೆ ದರ್ಶನ್ ಜೈಲಲ್ಲಿರೋ ಟೆನ್ಷನ್ ಮಧ್ಯೆಯೂ ವಿಜಯಲಕ್ಷ್ಮಿ ಸ್ನೇಹಿತೆ ಶೃತಿ ರಮೇಶ್ ಕುಮಾರ್ರ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!
ವಿಜಯಲಕ್ಷ್ಮಿ ಸ್ನೇಹಿತೆ ಶೃತಿ ರಮೇಶ್ ಕುಮಾರ್ ಬರ್ತ್ಡೇ ಪಾರ್ಟಿಯ ಈ ಫೋಟೋಗಳು ಮತ್ತೊಂದು ಕಥೆ ಹೇಳುತ್ತಿವೆ. ವಿಜಯಲಕ್ಷ್ಮಿ ಜೊತೆ ಸಿಎಂ ಸಿದ್ಧರಾಮಯ್ಯರ ಸೊಸೆ ದಿವಂಗತ ರಾಕೇಶ್ ಪತ್ನಿ ಸ್ಮಿತಾ ರಾಕೇಶ್ ಕೂಡ ಕಾಣಿಸಿಕೊಂಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದ ಇನ್ಸ್ಟಾಗ್ರಾಂನಲ್ಲಿ ಎರಡೆರಡು ಅಕೌಂಟ್ ಗಳನ್ನ ಮೆಂಟೇನ್ ಮಾಡುತ್ತಿದ್ದಾರೆ. ಒಂದು ಅಕೌಂಟ್ನಲ್ಲಿ ಟೆಂಪಲ್ ರನ್ ಫೋಟೋ, ಮತ್ತೊಂದು ಅಕೌಂಟ್ನಲ್ಲಿ ಸ್ನೇಹಿತೆ ಹುಟ್ಟುಹಬ್ಬದ ಪಾರ್ಟಿ!
ವಿಜಯಲಕ್ಷ್ಮಿ ದರ್ಶನ್ ಒಂದು ಅಕೌಂಟ್ನಲ್ಲಿ ಟೆಂಪಲ್ ರನ್ ಫೊಟೋ ಹಂಚಿಕೊಂಡಿದ್ದರೆ ಮತ್ತೊಂದರಲ್ಲಿ ಪಾರ್ಟಿ ಫೋಟೋ ಹಂಚಿಕೊಂಡಿದ್ದಾರೆ. ಅವರ ಪರ್ಸನಲ್ ಅಕೌಂಟ್ ಪಾರ್ಟಿಯ ಕತೆ ಹೇಳುತ್ತಿವೆ. ಹಾಗಾಗಿ ವಿಜಯಲಕ್ಷ್ಮಿಯ ನಿಜ ಸ್ವರೂಪ ಏನು ಅಂತ ಅಭಿಮಾನಿಗಳನ್ನ ಕಾಡೋಕೆ ಶುರುವಾಗಿದೆ. ಅಲ್ಲಿ ದೇವಸ್ಥಾನ ಸುತ್ತುತ್ತಿರೋದು ನಿಜಾನಾ.? ಇಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿರೋದು ನಿಜಾನಾ ಅಂತ ಕಾಡುತ್ತಿದೆ. ಜಾಮೀನಿಗಾಗಿ ದರ್ಶನ್ ವಿಲ ವಿಲ ಅಂತ ಒತ್ತಾಡುತ್ತಿದ್ರೆ, ಈ ಕಡೆ ವಿಜಯಲಕ್ಷ್ಮಿಗೆ ಈ ಪಾರ್ಟಿ ಬೇಕಿತ್ತಾ ಅಂತ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?
ಕಾಮಾಕ್ಯ ದೇವಿ ದೇಗುಲದಲ್ಲಿ ವಿಜಯಲಕ್ಷ್ಮಿ: ದರ್ಶನ್ ಸಲುವಾಗಿ ಶಕ್ತಿ ದೇವತೆಗಳ ಮೊರೆ ಹೋಗಿರೋ ವಿಜಯಲಕ್ಷ್ಮಿ ಟೆಂಪಲ್ ರನ್ ಮುಂದುವರೆದಿದೆ. ಭಾರತದ ಅತ್ಯಂತ ಪುರಾತನ ಶಕ್ತಿಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ದೇವಾಲಯಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ದೇವಾಲಯ ಭಾರತೀಯ ಚಿತ್ರರಂಗದ ಹಲವು ತಾರೆಯರು ಮತ್ತು ರಾಜಕಾರಣಿಗಳ ನೆಚ್ಚಿನ ದೇವಾಲಯವಾಗಿದೆ.