ಬ್ಯೂಟಿ ಟ್ರೀಟ್ಮೆಂಟ್ ಪ್ರಶ್ನೆಗೆ ಕೋಪಗೊಂಡ್ರಾ ರಮ್ಯಾ? ಮತ್ತೆ ನಟಿಸೋ ಗುಟ್ಟು ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಕ್ವೀನ್!

Published : Feb 13, 2025, 12:56 PM ISTUpdated : Feb 13, 2025, 03:37 PM IST
ಬ್ಯೂಟಿ ಟ್ರೀಟ್ಮೆಂಟ್ ಪ್ರಶ್ನೆಗೆ ಕೋಪಗೊಂಡ್ರಾ ರಮ್ಯಾ? ಮತ್ತೆ ನಟಿಸೋ ಗುಟ್ಟು ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಕ್ವೀನ್!

ಸಾರಾಂಶ

ದಶಕದ ಬಳಿಕ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಮ್ಯಾ, ಅಭಿಮಾನಿಗಳ ಪ್ರೀತಿಗೆ ಭಾವುಕರಾದರು. ವಿಭಿನ್ನ ಪಾತ್ರ ಸಿಕ್ಕರೆ ನಟಿಸುವ ಇಂಗಿತ ವ್ಯಕ್ತಪಡಿಸಿದರೂ, ಸದ್ಯಕ್ಕೆ ಸಿನಿಮಾ ಯೋಜನೆ ಇಲ್ಲ ಎಂದರು. ಒಳ್ಳೆಯ ಕಥೆ ಸಿಕ್ಕರೆ ಸ್ವತಃ ನಿರ್ಮಿಸಿ ನಟಿಸುವ ಆಸೆ ವ್ಯಕ್ತಪಡಿಸಿದರು. ರೂಪಾಂತರದ ವದಂತಿಗಳನ್ನು ಅಲ್ಲಗಳೆದರು.

ನಟಿ ರಮ್ಯಾ (Ramya) ಸಿನಿಮಾ ಈವೆಂಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.. 'ಬಹಳ ದಿನಗಳ ಮೇಲೆ ಸಿನಿಮಾ ಈವೆಂಟ್‌ ಒಂದರಲ್ಲಿ ಕಾಣಿಸಿಕೊಳ್ತಾ ಇದ್ದೀರಾ? ಹೇಗನ್ನಿಸ್ತಿದೆ..?' ಎಂದು ನಟಿ ರಮ್ಯಾರನ್ನು ಕೇಳಲಾಗಿದೆ. ಅದಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ಕೊಟ್ಟ ಉತ್ತರ ಹೀಗಿದೆ.. 'ನಂಗೆ ತುಂಬಾ ಖುಷಿ ಆಗ್ತಿದೆ. ನಾನು ಸಿನಿಮಾ ನಟನೆ ಬಿಟ್ಟು ಹತ್ತು ವರ್ಷಗಳ ಮೇಲಾಯ್ತು.. ಆದ್ರೂ ಜನ ಈಗ್ಲೂ ನನಗೆ ಪ್ರೀತಿ ಅಭಿಮಾನ ತೋರಿಸ್ತಾ ಇದಾರೆ. ನನಗೆ ನಿಜವಾಗಿಯೂ ಇದು ಆಶೀರ್ವಾದ.. ಇದು ನನಗೆ ಖಂಡಿತ ಹೆಮ್ಮೆ ಪಡೋ ಸಂಗತಿ.'' ಎಂದಿದ್ದಾರೆ ರಮ್ಯಾ. 

ಹಾಗೇ, ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟಿ ರಮ್ಯಾ, 'ನನಗೆ ಒಳ್ಳೆಯ ವಿಭಿನ್ನ ಪಾತ್ರ ಸಿಕ್ಕರೆ ಖಂಡಿತ ನಾನು ಮತ್ತೆ ನಟನೆ ಮಾಡ್ತೀನಿ.. ಆದ್ರೆ, ನಂಗೆ ಒಳ್ಳೆಯ ಪಾತ್ರದ ಆಫರ್ ಬರ್ತಾ ಇಲ್ಲ. ನಾನು ಇಷ್ಟು ಗ್ಯಾಪ್ ಬಳಿಕ ಮತ್ತೆ ನಟಿಸ್ಬೇಕು ಅಂದ್ರೆ ನಂಗೆ ಇಲ್ಲಿಯತನಕ ಮಾಡದೇ ಇರೋ ಪಾತ್ರ ಸಿಗ್ಬೇಕು. ನನ್ನ ಅಭಿಮಾನಿಗಳು ಈಗಾಗ್ಲೇ ಮಾಡಿರೋ ಪಾತ್ರಗಳನ್ನೆ, ಅದನ್ನೇ ಮತ್ತೆ ಮತ್ತೆ ಮಾಡ್ತಾ ಇದ್ರೆ ಇಷ್ಟ ಪಡಲ್ಲ. ಜೊತೆಗೆ, ನನಗೂ ಕೂಡ ಅದೇ ಪಾತ್ರದಲ್ಲಿ ಮತ್ತೆ ನಟಿಸೋಕೆ ಮನಸ್ಸಾಗಲ್ಲ' ಎಂದಿದ್ದಾರೆ. 

ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್

'ಸಿನಿಮಾಗೋಸ್ಕರ ಏನಾದ್ರೂ ಟ್ರೀಟ್ಮೆಂಟ್ ತಗೊಳ್ಳೋದು, ಸಣ್ಣ ಆಗುವಂಥದ್ದು ಹೀಗೆ ಏನಾದ್ರೂ ಪ್ಲಾನ್ ನಡಿತಾ ಇದ್ಯಾ? ಹಾಗಂತ ಸುದ್ದಿ ಓಡಾಡ್ತಾ ಇರುತ್ತಲ್ಲ' ಎಂದ ನಿರೂಪಕರ ಪ್ರಶ್ನೆಗೆ ಸ್ವಲ್ಪ ರಾಂಗ್ ಆಗಿದ್ದಾರೆ. 'ಏನಕ್ಕೆ ಅವೆಲ್ಲಾ? ನಾನು ಮೊದಲಿನಿಂದಲೂ ಹೇಗೆ ಇದೀನೋ ಹಾಗೇ ಇದೀನಿ.. ಸಿನಿಮಾಗೋಸ್ಕರ, ಪಾತ್ರಕ್ಕೋಸ್ಕರ ಯಾವತ್ತೂ ಬದಲಾಗಿಲ್ಲ. ನಾನು ಸಿನಿಮಾಗೆ ಬರ್ಬೇಕು ಅಂತ ಯಾವತ್ತೂ ಅಂದ್ಕೊಂಡಿರ್ಲಿಲ್ಲ. ಅದು ತಾನಾಗೇ ಆಯ್ತು ಅಷ್ಟೇ..' ಎಂದಿದ್ದಾರೆ ನಟಿ ರಮ್ಯಾ. 

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ 'ಸದ್ಯಕ್ಕೆ ಸಿನಿಮಾದಲ್ಲಿ ಮತ್ತೆ ನಟಿಸುವ ಪ್ಲಾನ್ ಏನೂ ಇಲ್ಲ. ಅಂಥ ಒಳ್ಳೆಯ ಸ್ಕ್ರಿಪ್ಟ್ ಸಿಕ್ರೆ ನಾನೇ ಸಿನಿಮಾ ನಿರ್ಮಾಣ ಮಾಡಿ ನಟಿಸ್ತೀನಿ. ಆದ್ರೆ ಸದ್ಯಕ್ಕೆ ಯಾವುದೂ ಅಂತ ಕಥೆ ಹಾಗೂ ಪಾತ್ರ ಬಂದಿಲ್ಲ' ಎಂದಿದ್ದಾರೆ ನಟಿ ರಮ್ಯಾ. ಕಳೆದ ಹತ್ತು ವರ್ಷಗಳಿಂದಲೂ ರಮ್ಯಾ ಮತ್ತೆ ನಟಿಸುತ್ತಾರೆ ಎಂಬ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಆ ಸುದ್ದಿ ಯಾವತ್ತೂ ಸತ್ಯವಾಗಿಲ್ಲ. ಈಗಲೂ ರಮ್ಯಾ ಮಾತನ್ನು ಕೇಳುತ್ತಿದ್ದರೆ ಸದ್ಯಕ್ಕೆ ನಟಿ ರಮ್ಯಾ ಮತ್ತೆ ನಟಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. 

'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?