ಬೂಕನಕೆರೆಗೆ ಹೋಗುತ್ತಿದ್ದಾಗ ಕಾರು ನಿಲ್ಲಿಸಿ ಓಡಿ ಹೋಗಿದ್ದೇಕೆ ಡಾ ರಾಜ್‌ಕುಮಾರ್‌?

Published : Jan 05, 2025, 05:23 PM IST
ಬೂಕನಕೆರೆಗೆ ಹೋಗುತ್ತಿದ್ದಾಗ ಕಾರು ನಿಲ್ಲಿಸಿ ಓಡಿ ಹೋಗಿದ್ದೇಕೆ ಡಾ ರಾಜ್‌ಕುಮಾರ್‌?

ಸಾರಾಂಶ

೧೯೭೭ರಲ್ಲಿ ಮೈಸೂರಿನ ಬಳಿ ಡಾ. ರಾಜ್‌ಕುಮಾರ್ ಪ್ರಯಾಣಿಸುತ್ತಿದ್ದಾಗ, ರಸ್ತೆಬದಿಯಲ್ಲಿ ಮುದುಕಿಯೊಬ್ಬರು ತಮ್ಮ ಫೋಟೋಗೆ ಹಾರ ಹಾಕಿ ಎಳನೀರು ಮಾರುತ್ತಿದ್ದದ್ದನ್ನು ಕಂಡು ಕಾರು ನಿಲ್ಲಿಸಿದರು. ಮುದುಕಿಗೆ ನಮಸ್ಕರಿಸಿ, ಎಳನೀರು ಕುಡಿದು, ಅವರನ್ನು ಗೌರವಿಸಿ ಮುಂದೆ ಸಾಗಿದರು. ಈ ಘಟನೆ ಅವರ ವಿನಯಶೀಲತೆಗೆ ಸಾಕ್ಷಿ ಎಂದು ಛಾಯಾಗ್ರಾಹಕ ನಾಗರಾಜ್ ಶರ್ಮಾ ತಿಳಿಸಿದ್ದಾರೆ.

ಅದು ಬಹುಶಃ ಸಾವಿರದ ಒಂಬೈನೂರಾ ಎಪ್ಪತ್ತೇಳನೇ ಇಸವಿ ಇರಬಹುದು. ಮೈಸೂರಿನ ಕನ್ನಂಬಾಡಿ ಆಣೇಕಟ್ಟಿನ ಪಕ್ಕ ಬೂಕನಕೆರೆ ಎಂಬ ಹಳ್ಳಿಯಲ್ಲಿ ಅಲ್ಲಿನ ಜನರು ಫ್ರೌಢಶಾಲಾ ಸಹಾಯಾರ್ಥವಾಗಿ ಒಂದು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿಗೆ ಡಾ ರಾಜ್‌ಕುಮಾರ್ (Dr Rajkumar) ಅವರನ್ನು ಅತಿಥಿಯನ್ನಾಗಿ ಕರೆದಿದ್ದರು. ಅದಕ್ಕೆ ಡಾ ರಾಜ್, ಪಾರ್ವತಮ್ಮನವರು ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಬಂದಿದ್ದರು. ಡಾ ರಾಜ್‌ಕುಮಾರ್ ಕುಟುಂಬದ ಒಂದು ಕಾರು ಸೇರಿದಂತೆ 3-4 ಕಾರುಗಳು ಮೈಸೂರಿನಿಂದ ಬೂಕನಕೆರೆಗೆ ಪ್ರಯಾಣ ಬೆಳೆಸುತ್ತಿತ್ತು. ಆಗ ನಡೆದ ಪ್ರಸಂಗವೊಂದು ಈಗ ಜಗಜ್ಜಾಹೀರಾಗಿದೆ. ಹಾಗಿದ್ದರೆ ಆಗಿದ್ದೇನು? ಮುಂದೆ ನೋಡಿ.. 

ಕನ್ನಂಬಾಡಿ ಹಿನ್ನಿರಿನ ಸಮೀಪ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಡಾ ರಾಜ್‌ಕುಮಾರ್ ಅವರ ಕಾರು ಸಡನ್ನಾಗಿ ಬ್ರೇಕ್ ಹಾಕಿ ನಿಂತುಬಿಟ್ಟಿತು. ತಕ್ಷಣ ಕಾರಿನಿಂದ ಇಳಿದ ಡಾ ರಾಜ್‌ಕುಮಾರ್ ಅವರು ತಾವು ಉಟ್ಟಿದ್ದ ರೇಷ್ಮೆ ಪಂಚೆಯನ್ನು ಕೈನಲ್ಲಿ ಸ್ವಲ್ಪ ಮೇಲಕ್ಕೆ ಹಿಡಿದು ಓಡತೊಡಗಿದರು. ಎಲ್ಲರೂ ಶಾಕ್ ಆಗಿ ನೋಡುತ್ತಿದ್ದರು. ಓಡಿ ಹೋದ ಅಣ್ಣಾವ್ರು ಅಲ್ಲಿ ಒಂದು ಕಡೆ ಒಬ್ಬರು ಮುದುಕಿ ಎಳನೀರು ಮಾರಾಟ ಮಾಡುತ್ತಿದ್ರು. ಅವರು ಡಾ ರಾಜ್‌ಕುಮಾರ್ ಅವರ ಪುಟ್ಟದೊಂದು ಫೋಟೋ ಇಟ್ಟುಕೊಂಡು ಅದಕ್ಕೆ ಹಾವಿನ ಹಾರಿ ಹಾಕಿದ್ದರು. ಅದನ್ನು ಕಂಡು ಡಾ ರಾಜ್‌ ಅವರು ಓಡಿ ಬಂದಿದ್ದರು. 

ಅಂದು ಡಾ ರಾಜ್‌ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಖ್ಯಾತ ನಿರ್ದೇಶಕರು!

ಅಲ್ಲಿ ಹೋದವರೇ ಡಾ ರಾಜ್‌ಕುಮಾರ್ ಅವರು ಅಜ್ಜಿಯ ಬಳಿ ನಿಂತರು. ಅಜ್ಜಿ ನಮಸ್ಕಾರ ಮಾಡಲು ಬಗ್ಗಿದಾಗ ಅದನ್ನು ತಡೆದು ತಾವೇ ನಮಸ್ಕಾರ ಮಾಡಲು ಹೋದರು. ಆಗ ಅದನ್ನು ಅಜ್ಜಿ ತಡೆದರು. ರಸ್ತೆಯಲ್ಲಿ ನಿಂತು ನಾವೆಲ್ಲಾ ಅದನ್ನು ನೋಡುತ್ತಿದ್ದೆವು. ಆಮೇಲೆ ಅಜ್ಜಿ ಒಂದು ಎಳನೀರು ಕೊಚ್ಚಿ ನೀರನ್ನು ಲೋಟದಲ್ಲಿ ಹಾಕಿ ಅಣ್ಣಾವ್ರಿಗೆ ಕುಡಿಯಲು ಕೊಟ್ಟರು. ಅದನ್ನು ಕುಡಿದ ರಾಜ್‌ ಅವರು ಅಜ್ಜಿಗೆ ಧನ್ಯವಾದ ಹೇಳಿ, ಎಳನೀರು ತುಂಬಾ ಸಿಹಿಯಾಗಿದೆ ಎಂದು ಹೊಗಳಿ, ನಮಸ್ಕಾರ ಮಾಡಿ ಅಲ್ಲಿಂದ ಹೊರಟರು. 

ಈ ಪ್ರಸಂಗವನ್ನು ಹೇಳಿದ್ದು ಹಿರಿಯ ಫೋಟೋಗ್ರಾಫರ್ ಡಾ. ನಾಗರಾಜ್ ಶರ್ಮಾ ಅವರು. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಡಾ. ನಾಗರಾಜ್ ಶರ್ಮಾ ಅವರು ಈ ಸಂಗತಿ ಹೇಳಿದ್ದಾರೆ. ಡಾ ರಾಜ್‌ಕುಮಾರ್ ಅವರ ಅಂತಃಕರಣ ಹೇಗಿತ್ತು ಎಂಬುವುದಕ್ಕೆ ನಿದರ್ಶನವಾಗಿ ಅವರು ಈ ಪ್ರಸಂಗ ಹೇಳಿದ್ದಾರೆ. ಈ ಸ್ಟೋರಿ ಕೇಳಿದರೆ ಡಾ ರಾಜ್‌ಕುಮಾರ್ ಸ್ವಭಾವ ಹೇಗಿತ್ತು ಎಂಬುದು ಅರ್ಥವಾಗುತ್ತದೆ.

ಕುಡ್ಸು ನನ್ ಮಗ್ನಿಗೆ ಹಾಲು, ಹಂಗಾದ್ರೂ ಬೆಳ್ಳಗಾಗ್ತಾನೇನೋ ಅಂದಿದ್ರಂತೆ ಡಾ ರಾಜ್‌! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!