
ಸ್ಯಾಂಡಲ್‌ವುಡ್ ನಟ, ಕರ್ನಾಟಕ ರತ್ನ ಪ್ರಶಸ್ತಿ ವಿಜೇತ, ಕನ್ನಡಿಗರ ಪ್ರೀತಿಯ ಅಪ್ಪು (Appu) ಹುಟ್ಟಿದ್ದ ಹಬ್ಬ ಸದ್ಯವೇ ಇದೆ ಎಂಬುದು ಎಲ್ಲರಿಗೂ ಗೊತ್ತು. ಮಾರ್ಚ್ 17 ನಟ ಪುನೀತ್ (Puneeth Rajkumar) ಹುಟ್ಟಿದ ದಿನ. ಅಪ್ಪು ಹುಟ್ಟಿದ ಹಬ್ಬಕ್ಕೆ ಮರುಬಿಡುಗಡೆ ಆಗುತ್ತಿದೆ ಅವರ ನಟನೆಯ ಮೊಟ್ಟಮೊದಲನೇ ಚಿತ್ರ 'ಅಪ್ಪು'. ಪುನೀತ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಅಪ್ಪು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಇಂದು ಪುನೀತ್ ಅವರು ನಮ್ಮೊಂದಿಗೆ ಇದ್ದರೆ ಬಹುಶಃ ಅವರ ಹೊಸ ಚಿತ್ರ ಬಿಡುಗಡೆ ಆಗುತ್ತಿತ್ತು. ಆದರೆ, ಆ ಭಾಗ್ಯ ಕನ್ನಡಿಗರಿಗೆ ಇಲ್ಲ.. ನಟ ಅಪ್ಪು ಇಂದು ನಮ್ಮೊಂದಿಗೆ ಇಲ್ಲ..
ಅಪ್ಪು ಈಗ ಬದುಕಿಲ್ಲದ ಕಾರಣಕ್ಕೆ ಅನಿವಾರ್ಯವಾಗಿ ಅವರ ಹಳೆಯ ಸಿನಿಮಾ ಬಿಡುಗಡೆ ಆಗುತ್ತಿದೆ, ಅಂದು ನೋಡದಿದ್ದವರು ನೋಡುತ್ತಾರೆ, ನೋಡಿದವರು ಕೂಡ ಇನ್ನೊಮ್ಮೆ ನೋಡುತ್ತಾರೆ. ಅಭಿಮಾನಿಗಳಂತೂ ಮತ್ತೆಮತ್ತೆ ನೋಡುತ್ತಾರೆ. ಆದ್ದರಿಂದ, ಆ ಕಾರಣಕ್ಕಾಗಿಯೇ ಅಪ್ಪು ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಆದರೆ, 17ಕ್ಕೆ ಅಲ್ಲ, ಹದಿನಾಲ್ಕಕ್ಕೇ ತೆರೆಗೆ ಬರಲಿದ್ದಾರೆ. ಅಪ್ಪು ಅಭಿಮಾನಿಗಂತೂ ಹಿರಿಹಿರಿ ಹಿಗ್ಗುತ್ತಿದ್ದಾರೆ, ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಇದು.. ಇದು.. ವೈರಲ್ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್ ಬಗ್ಗೆ ಕಿಶೋರ್ ಹೇಳಿದ್ದೇನು?
ಅಪ್ಪು ಬಗೆಗಿನ ಸೀಕ್ರೆಟ್ ಸುದ್ದಿಯೊಂದಿದೆ. ಅದನ್ನು ರಹಸ್ಯ ಅನ್ನೋದಕ್ಕಿಂತ ಅಚ್ಚರಿ ಎನ್ನಬಹುದು. ಪುನೀತ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಇಬ್ಬರು ದಿಗ್ಗಜ ಸೂಪರ್ ಸ್ಟಾರ್ ಗಳ ಕೈಲಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಬಳಿಕ ಅವರ ಪಯಣ ಒಂದು ಇತಿಹಾಸ, ಒಂದು ಮೈಲಿಗಲ್ಲು. ಅವರು ಬೇರಾರೂ ಅಲ್ಲ, ಒಬ್ಬರು ಸ್ವತಃ ಅವರ ತಂದೆ ಡಾ ರಾಜ್‌ಕುಮಾರ್ ಹಾಗೂ ಇನ್ನೊಬ್ಬರು ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್. ಹೌದು, ಅವರಿಬ್ಬರೂ ಅಪ್ಪು ಚಿತ್ರದ ಸಕ್ಸಸ್ ವೇಳೆ ಪುನೀತ್ ಅವರನ್ನು ಸನ್ಮಾನಿಸಿದ್ದರು.
ಒಟ್ಟಿನಲ್ಲಿ, ಮೇರು ನಟ ಡಾ ರಾಜ್‌ಕುಮಾರ್ ಮಗನಾಗಿರುವ ಪುನೀತ್, ಆರಂಭದಲ್ಲೇ ತಮ್ಮ ಅಪ್ಪಾಜಿ ಹಾಗೂ ಸೂಪರ್ ಸ್ಟಾರ್ ಆಶೀರ್ವಾದ ಪಡೆದಿದ್ದರು. ಬಳಿಕ ಅವರ ಸಾಧನೆ, ಸಾವು ಎಲ್ಲವೂ ಎಲ್ಲರಿಗೂ ಗೊತ್ತಿರುವಂಥದ್ದೇ.. ಆದರೆ, ನಟ ಪುನೀತ್ ಹುಟ್ಟಹಬ್ಬದ ಈ ಸಂದರ್ಭದಲ್ಲಿ ಅವರ ನೆನಪು ಹೆಚ್ಚು ಆಗುವುದು ಸಹಜ. ಉಳಿದ ಟೈಮಲ್ಲಿ ಕೂಡ ಅವರದು ಮರೆಯುವಂಥ ವ್ಯಕ್ತಿತ್ವ ಅಲ್ಲ ಬಿಡಿ..
ಗೌರವ ಪಡೆದು ಪ್ರಥಮ್ ಮಾಡಿರೋ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ..'
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.