ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

Published : Jan 31, 2024, 08:18 PM ISTUpdated : Jan 31, 2024, 09:26 PM IST
ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

ಸಾರಾಂಶ

ಆ ಚಿತ್ರದಲ್ಲಿ ನಟಿಸಿದ ಬಳಿಕ ಅದೇಕೋ ಡಾ ರಾಜ್‌ಕುಮಾರ್ ಅವರು 'ಕನ್ನಡ ಸಿನಿಮಾಗಳನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲವಂತೆ.. ಬಳಿಕ ಅವರು 'ನಾನು ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ' ಎಂದು ಪ್ರತಿಜ್ಞೆ ಮಾಡಿಬಿಟ್ಟರಂತೆ. ಪ್ರತಿಜ್ಞೆ ಮಾಡಿದ್ದಷ್ಟೇ ಅಲ್ಲ, ಜೀವನಪರ್ಯಂತ ಹಾಗೇ ನಡೆದುಕೊಂಡರು...

'ಅಣ್ಣವ್ರು' ಖ್ಯಾತಿಯ ಕನ್ನಡದ ಧ್ರುವತಾರೆ, ಪದ್ಮಭೂಷಣ ಪ್ರಶಸ್ತಿ ವಿಜೇತ ನಟ ಡಾ ರಾಜ್‌ಕುಮಾರ್ (Dr rajkumar) ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಚಿತ್ರವೊಂದರಲ್ಲಿ ಕೂಡ ನಟಿಸಿದ್ದರು. ಹೌಡು, ಡಾ ರಾಜ್‌ಕುಮಾರ್ ತೆಲುಗು (Telugu)ಚಿತ್ರವೊಂದರಲ್ಲಿ ನಟಿಸಿದ್ದರು, ಆ ಚಿತ್ರದ ಬಳಿಕ ಅವರು ಮತ್ತೆಂದೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು, ಅದರಂತೆ ಕೊನೆಯವರೆಗೂ ನಡೆದುಕೊಂಡಿದ್ದರು. 

ಹೌದು, ವರನಟ ಡಾ ರಾಜ್‌ಕುಮಾರ್ ಕನ್ನಡದ ಜತೆ ತೆಲುಗು ಚಿತ್ರದಲ್ಲಿ ನಟಿಸಿದ್ದರು. 1954ರಲ್ಲಿ ತೆರೆಕಂಡ ಡಾ ರಾಜ್‌ಕುಮಾರ್ ಹಾಗೂ ಪಂಡರಿಬಾಯಿ (Pandari Bai) ಜೋಡಿಯ ಕನ್ನಡದ 'ಬೇಡರ ಕಣ್ಣಪ್ಪ' (Bedara Kannappa) ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಆ ಯಶಸ್ಸಿನಿಂದ ಪ್ರೇರಿತರಾದ ಸಿನಿಮಾ ನಿರ್ಮಾಪಕರು ಇದೇ ಚಿತ್ರವನ್ನು ತಮಿಳಿನಲ್ಲಿ 'ವೇಡನ್ ಕಣ್ಣಪ್ಪ' (Vedan Kannappa)ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಒಂದು ಹೊಸ ಹಾಡು ಹಾಗೂ ಕೆಲವು ಹೊಸ ದೃಶ್ಯಗಳನ್ನು ಸೇರಿಸಿ ನಿರ್ಮಿಸಿದ್ದ ವೇಡನ್ ಕಣ್ಣಪ್ಪ ಸಿನಿಮಾ ಕೂಡ ಸಕ್ಸಸ್ ಆಯಿತು. 

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!

ಬಳಿಕ ಕನ್ನಡದ ಬೇಡರ ಕಣ್ಣಪ್ಪ ಚಿತ್ರವನ್ನು ತೆಲುಗಿನಲ್ಲಿ ಮರುನಿರ್ಮಾಣ ಮಾಡಲಾಯಿತು. ಈ ಚಿತ್ರಕ್ಕೆ 'ಕಾಳಹಸ್ತಿ ಮಹಾತ್ಯಂ' ಎಂದು ಹೆಸರು. ಆ (Kalahasti Mahatyam)ಚಿತ್ರದಲ್ಲಿ ಡಾ ರಾಜ್‌ಕುಮಾರ್ ನಟಿಸುವ ಮೂಲಕ ಕನ್ನಡ ಚಿತ್ರ ಹೊರತುಪಡಿಸಿ ಇನ್ನೊಂದು ಭಾಷೆಯಲ್ಲೂ ನಟಿಸುವ ಸಾಧನೆ ಮಾಡಿದ್ದರು. ಈ ಚಿತ್ರದಲ್ಲಿ ಕೂಡ ನಟಿ ಪಂಡರಿಬಾಯಿ ಡಾ ರಾಜ್‌ ಅವರಿಗೆ ಜತೆಯಾಗಿದ್ದರು. ಖ್ಯಾತ ಹಾಸ್ಯ ನಟ ನರಸಿಂಹ ರಾಜು, ರಾಜಾ ಸುಲೋಚನ, ಕುಶಲಾ ಕುಮಾರಿ, ಜಿವಿ ಅಯ್ಯರ್, ಸಂಧ್ಯಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಹೆಚ್‌ಎಲ್‌ಎನ್ ಸಿಂಹ (HLN Simha)ನಿರ್ದೇಶನ ಮಾಡಿದ್ದರು.

ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್‌ ಭಟ್‌..!?

ಆದರೆ, ಆ ಚಿತ್ರದಲ್ಲಿ ನಟಿಸಿದ ಬಳಿಕ ಡಾ ರಾಜ್‌ಕುಮಾರ್ ತಾವು ಕನ್ನಡ ಸಿನಿಮಾಗಳನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ  ನಟಿಸುವುದಿಲ್ಲ' ಎಂದು ಪ್ರತಿಜ್ಞೆ ಮಾಡಿಬಿಟ್ಟರಂತೆ. ಕೇವಲ ಪ್ರತಿಜ್ಞೆ ಮಾಡಿದ್ದಷ್ಟೇ ಅಲ್ಲ, ಜೀವನಪರ್ಯಂತ ಹಾಗೇ ನಡೆದುಕೊಂಡರು. ಅದೇ ಅವರನ್ನು ಕನ್ನಡದ ನಟ, ಕನ್ನಡವೇ ಸರ್ವಸ್ವ ಎಂಬಂತೆ ಬದುಕಿದವರು ಎಂಬ ಖ್ಯಾತಿಗೆ ಪಾತ್ರವಾಗಿಸಿದೆ. ಡಾ ರಾಜ್‌ಕುಮಾರ್ ಎಂದರೆ ಅದು 'ಕನ್ನಡದ ಆಸ್ತಿ' ಎಂಬ ಪ್ರಸಿದ್ಧಿಯನ್ನು ಅವರಿಗೆ ತಂದುಕೊಟ್ಟಿದೆ. 

'ಪ್ರಚಂಡ ರಾವಣ'ನಾದ ಸದಾನಂದ ಸಾಗರ; ಕೊನೆಗಾಲ ಹೇಗಿತ್ತು, ಅದೆಂಥ ವ್ಯಕ್ತಿಯಾಗಿದ್ದರು ವಜ್ರಮುನಿ..!?

ಕನ್ನಡದ ಮೇರು ನಟ ಎಂಬ ಬಿರುದು ಹೊತ್ತಿರುವ ನಟ ಡಾ ರಾಜ್‌ಕುಮಾರ್ 'ಕಾಳಹಸ್ತಿ ಮಹಾತ್ಯಂ' ಬಳಿಕ ಯಾವುದೇ ಪರಭಾಷೆ ಚಿತ್ರಗಳಲ್ಲಿ ನಟಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಒಂದೇ ಒಂದು ಪರಭಾಷೆಯ ಸಿನಿಮಾದಲ್ಲಿ ನಟಿಸಿ, ಬಳಿಕ ತಾವು ಕನ್ನಡಕ್ಕೇ ಸೀಮಿತರಾಗಬೇಕು, ಕನ್ನಡವನ್ನೇ ಉಸಿರಾಡಬೇಕು, ಕನ್ನಡ ಚಿತ್ರೋದ್ಯಮವನ್ನೇ ಬೆಳೆಸಬೇಕು ಎಂದು ಡಾ ರಾಜ್‌ಕುಮಾರ್ ಸಂಕಲ್ಪ ಮಾಡಿ ಅದರಂತೆ ಉಸಿರಿರುವವರೆಗೂ ನಡೆದುಕೊಂಡಿದ್ದು ನಿಜವಾಗಿಯೂ ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ. ಕನ್ನಡಕ್ಕಾಗಿಯೇ ಬದುಕಿದ ಮೇರ ನಟ ಡಾ ರಾಜ್‌ಕುಮಾರ್ ಕನ್ನಡ ಭಾಷೆ, ಕನ್ನಡ ನಾಡು ಇರುವವರೆಗೂ ಅಜರಾಮರ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್