ದೇವದಾಸ್ ಕಾಪಿಕಾಡ್ 'ಪುರುಷೋತ್ತಮನ ಪ್ರಸಂಗ' ಬಿಡುಗಡೆಗೆ ಕ್ಷಣಗಣನೆ; ಮೋಡಿ ಮಾಡುತ್ತಾ ಹೊಸಬರ ಟೀಮ್?

By Shriram Bhat  |  First Published Feb 29, 2024, 1:40 PM IST

ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಜತೆಗೆ, ಒಂದು ಪ್ರಮುಖ ಪಾತ್ರದಲ್ಲೂ ದೇವದಾಸ್ ನಟಿಸಿದ್ದಾರೆ.


ರಾಜ್ಯ ಪ್ರಶಸ್ತಿ ವಿಜೇತ ನಟ ಡಾ ದೇವದಾಸ್ ಕಾಪಿಕಾಡ್ ಚಿತ್ರಕಥೆ, ನಿರ್ದೇಶನದ ಕನ್ನಡ ಸಿನೆಮಾ 'ಪುರುಷೋತ್ತಮನ ಪ್ರಸಂಗ' ಮಂಗಳೂರು ಸೇರಿದಂತೆ ಹಲವು ಕಡೆ ಸುದ್ದಿ ಮಾಡುತ್ತಿದೆ. ಈ ಚಿತ್ರವು ಹಾಸ್ಯ ಪ್ರಧಾನ ಕಂಟೆಂಟ್ ಒಳಗೊಂಡಿದ್ದರೂ ಹಾಸ್ಯದ ಜೊತೆ ಜೀವನದ ಹಲವು ಮಜಲುಗಳನ್ನೂ ಟಚ್ ಮಾಡಿದೆ ಎನ್ನಲಾಗಿದೆ. ಪುರುಷೋತ್ತಮನ ಪ್ರಸಂಗ (Purushothamana Prasanga)ಚಿತ್ರವು ಕನ್ನಡದ ಚಿತ್ರವಾಗಿದ್ದು, ಮಂಗಳೂರು ಮೂಲದ ಕನ್ನಡದ ಹಲವು ನಟನಟಿಯರು ಇದರಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಂಗಳೂರು ಕಂಪು ಸಹ ಇರಲಿದ್ದು, ಒಟ್ಟಾರೆಯಾಗಿ ಚಿತ್ರವು ಇಡೀ ಕರ್ನಾಟಕಕ್ಕೇ ಸಲ್ಲುವ ಕಥಾವಸ್ತುವನ್ನು ಒಳಗೊಂಡಿದೆ ಎಂದಿದೆ ಚಿತ್ರತಂಡ.

ಮಂಗಳೂರು ಸುತ್ತಮುತ್ತ ಬಜಪೆ, ಮುರನಗರ, ಕೆಂಜಾರ್ ಮೊದಲಾದ ಪ್ರದೇಶಗಳಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು.  ಪುರುಷೋತ್ತಮನ ಪ್ರಸಂಗಕ್ಕೆ ದುಬೈನಲ್ಲಿ 7 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ವಿದೇಶದಲ್ಲಿನ ಹಲವು ಸ್ಥಳಗಳನ್ನು ಸಹ ಈ ಮೂಲಕ ಸಿನಿಮಾಗೆ ಸೆರೆಹಿಡಿಯಲಾಗಿದೆ.  ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಕಥೆಗೆ  ಪೂರಕವಾಗಿ ಇದೆಯಂತೆ. ಈ ಸಿನಿಮಾದ ಮೂಲಕ ಅಜಯ್ ಹೆಸರಿನ ಹೊಸ ನಟ, ರಿಷಿಕಾ ನಾಯ್ಕ ಮತ್ತು ದೀಪಿಕಾ ಎಂಬಿಬ್ಬರು ನಟಿಯರನ್ನು ದೇವದಾಸ್ ಕಾಪಿಕಾಡ್ ಕನ್ನಡಕ್ಕೆ ಪರಿಚಯಿಸಿದ್ದಾರೆ. 

Latest Videos

undefined

ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?

ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಜತೆಗೆ, ಒಂದು ಪ್ರಮುಖ ಪಾತ್ರದಲ್ಲೂ ದೇವದಾಸ್ ನಟಿಸಿದ್ದಾರೆ. ನಿರ್ದೇಶನದಲ್ಲಿ ಅರ್ಜುನ್ ಕಾಪಿಕಾಡ್ ಸಹ ಸಾಥ್ ನೀಡಿದ್ದು ಈ ಚಿತ್ರಕ್ಕೆ ವಿ ರವಿ ಕುಮಾರ್ ಬಂಡವಾಳ ಹೂಡಿದ್ದಾರೆ. 

ನಾಗರಹಾವು ಬಳಿಕ ನಟ ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾ ಯಾಕೆ ಮಾಡಲಿಲ್ಲ?

ಹಾಸ್ಯ ದಿಗ್ಗಜರನ್ನೊಳಗೊಂಡ ಪರುಷೋತ್ತಮನ ಪ್ರಸಂಗ ಚಿತ್ರದಲ್ಲಿ ಬಹಳಷ್ಟು ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ. ಅಜಯ್ ನಾಯಕ್, ರಿಷಿಕಾ ನಾಯ್ಕ್, ದೀಪಿಕಾ, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ, ಶಿವ ಪ್ರಕಾಶ್ ಪೂಂಜ ಹರೇಕಳ, ರೂಪಾ ವರ್ಕಾಡಿ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. 

ಏಳುಬೀಳುಗಳ ನಡುವೆಯೂ ಗಟ್ಟಿ ಬದುಕು ಕಟ್ಟಿಕೊಂಡ ಜಯಮಾಲಾ ಅದೆಂಥ ಸಮಸ್ಯೆಗೆ ಸಿಲುಕಿದ್ದರು?

ಮಾರ್ಚ್ 1 ರಂದು (01 ಮಾರ್ಚ್‌ 2024ರಂದು 'ಪುರುಷೋತ್ತಮನ ಪ್ರಸಂಗ' ಹಾಸ್ಯ ಪ್ರಧಾನ ಸಿನಿಮಾ ತೆರೆಗೆ ಬರಲಿದೆ. ದೇವದಾಸ್ ಕಾಪಿಕಾಡ್ ಅವರು ಪತ್ರಿಕಾಗೋಷ್ಟಿಯಲ್ಲಿ ಪುರುಷೋತ್ತಮನ ಪ್ರಸಂಗ ಕನ್ನಡ ಚಿತ್ರದ ಬಗ್ಗೆ ವಿವರ ನೀಡಿದರು. ಚಿತ್ರದ ನಿರ್ಮಾಪಕ ವಿ ರವಿ ಕುಮಾರ್, ಸಹ ನಿರ್ಮಾಪಕ ಅಬೂಬ್‌ಕರ್ ಪುತ್ತಕ, ಸಂಶುದ್ದೀನ್, ಸಹ ನಿರ್ದೇಶಕ ಅರ್ಜುನ್ ಕಾಪಿಕಾಡ್, ನಾಯಕ ನಟ ಅಜಯ್, ನಾಯಕಿ ನಟಿ ದೀಪಿಕಾ ದಿನೇಶ್ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅನುಭವಗಳನ್ನು ಅಲ್ಲಿ ಹಂಚಿಕೊಂಡರು. 

click me!