ನಾಗರಹಾವು ಚಿತ್ರದ ಬಳಿಕ ನಟ ವಿಷ್ಣುವರ್ಧನ್ ಸಾಲುಸಾಲು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ಹಲವು ಸಿನಿಮಾಗಳನ್ನು ಮಾಡಿ ಮತ್ತೆ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ನಟ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣರ ಸಂಗಮದ ಯಾವುದೇ ಚಿತ್ರ ಭವಿಷ್ಯದಲ್ಲಿ ಬರಲೇ ಇಲ್ಲ.
ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ Vishnuvardhan) ಹಾಗು ಲೆಜೆಂಡ್ ಖ್ಯಾತಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal)ಅವರಿಬ್ಬರ ಜೋಡಿಯಲ್ಲಿ ಮೂಡಿ ಬಂದಿದ್ದ 'ನಾಗರಹಾವು' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಸಿನಿಲೋಕಕ್ಕೆ ಹ್ಯಾಂಡ್‌ಸಮ್ ಸ್ಟಾರ್ ಹೀರೋ ವಿಷ್ಣುವರ್ಧನ್ ಕೊಡುಗೆಯಾಗಿ ಸಿಕ್ಕರು. ಅದೇ ನಾಗರಹಾವು (Naagarahaavu)ಚಿತ್ರದಲ್ಲಿ ಕನ್ವರ್ ಲಾಲ್ ಪಾತ್ರದಲ್ಲಿ ವಿಷ್ಣುವರ್ಧನ್ ಎದುರು ವಿಲನ್ ಆಗಿ ನಟಿಸಿದ್ದ ಅಂಬರೀಷ್ ಮುಂದೆ 'ರೆಬೆಲ್ ಸ್ಟಾರ್ ಎಂದು ಖ್ಯಾತಿಯಾಗಿ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಅಪೂರ್ವ ಕೊಡುಗೆ ಆದರು. ಅಚ್ಚರಿ ಎಂಬಂತೆ ನಾಗರಹಾವು ಚಿತ್ರದಲ್ಲಿ ಹೀರೋ-ವಿಲನ್ ಆಗಿ ನಟಿಸಿದ್ದ ವಿಷ್ಣು-ಅಂಬಿ ನಿಜ ಜೀವನದಲ್ಲಿ ಅಪ್ತಮಿತ್ರರಾದರು.
ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣುವರ್ಧನ್ ಸಂಗಮದ ನಾಗರಹಾವು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಗಳಿಕೆ ಮಾಡಿ ಶತಮಾನೋತ್ಸವ ಆಚರಿಸಿ ಮುನ್ನುಗಿತ್ತು. ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದ ನಾಗರಹಾವು ಚಿತ್ರದ ಜೋಡಿ ಪುಟ್ಟಣ್ಣ ಕಣಗಾಲ್-ವಿಷ್ಣುವರ್ಧನ್ ಇಬ್ಬರೂಜೊತೆಯಾಗಿ ಇನ್ನಷ್ಟು ಸಿನಿಮಾಗಳನ್ನು ಪ್ರೇಕ್ಷಕರಿಗೆ ಕೊಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಹಾಗಾಗಲೇ ಇಲ್ಲ. ಅವರಿಬ್ಬರೂ ಇನ್ನೊಂದು ಚಿತ್ರವನ್ನು ಮಾಡಲೇ ಇಲ್ಲ. ಅದಕ್ಕೆ ನಿಜವಾದ ಕಾರಣ ಅಂದು ಹಾಗೂ ಇಂದೂ ಕೂಡ ನಿಗೂಢವಾಗಿಯೇ ಇದೆ. ಕೆಲವು ಉಹಾಪೋಹಗಳು ಅಂದೂ ಇದ್ದವು, ಇಂದೂ ಇವೆ ಅಷ್ಟೇ.
ಕಾರ್ತಿಕ್ ಮಹೇಶ್ ಜೊತೆ ನಮ್ರತಾ ಗೌಡ ಮದುವೆ; ಏಷ್ಯಾನೆಟ್ ಸುವರ್ಣಾ'ಗೆ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್ ವಿನ್ನರ್
ನಾಗರಹಾವು ಚಿತ್ರದ ಬಳಿಕ ನಟ ವಿಷ್ಣುವರ್ಧನ್ ಸಾಲುಸಾಲು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ಹಲವು ಸಿನಿಮಾಗಳನ್ನು ಮಾಡಿ ಮತ್ತೆ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ನಟ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣರ ಸಂಗಮದ ಯಾವುದೇ ಚಿತ್ರ ಭವಿಷ್ಯದಲ್ಲಿ ಬರಲೇ ಇಲ್ಲ. ಈ ಬಗ್ಗೆ ಭಾರೀ ಬೇಸರ ಹೊಂದಿದ್ದ ನಟ ಹಾಗೂ ವಿಷ್ಣುವರ್ಧನ್ ಸ್ನೇಹಿತ ಅಂಬರೀಷ್ ಪುಟ್ಟಣ್ಣ ಕಣಗಾಲ್ ಬಳಿ ಹಲವು ಬಾರಿ ನಟ ವಿಷ್ಣುಗೆ ಮತ್ತಷ್ಟು ಸಿನಿಮಾಗಳನ್ನು ಮಾಡಲು ಕೇಳಿಕೊಂಡಿದ್ದರಂತೆ. ಪುಟ್ಟಣ್ಣ ಜತೆ ಸಾಕಷ್ಟು ಸಲುಗೆಯಿಂದ ಇದ್ದ ನಟ ಅಂಬರೀಷ್ ಈ ಬಗ್ಗೆ ಮಾತನಾಡಿದರೆ ಸ್ವಲ್ಪ ಸಂಕೋಚದ ಸ್ವಭಾವದ ವಿಷ್ಣುವರ್ಧನ್ ಆ ಬಗ್ಗೆ ಏನೂ ಹೇಳಿರಲಿಲ್ಲವಂತೆ.
ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಹಾಗು ಶುಭ ಮಂಗಳ' ಎರಡೂ ಚಿತ್ರಗಳಿಗೆ ವಿಷ್ಣವರ್ಧನ್ ಅವರೇ ನಾಯಕರಾಗುತ್ತಾರೆ ಎಂದೇ ಅಂದು ಎಲ್ಲರೂ ಭಾವಿಸಿದ್ದರಂತೆ. ಆದರೆ, ಅಚ್ಚರಿ ಎಂಬಂತೆ ಆ ಚಿತ್ರಗಳಿಗೆ ಅಂದಿನ ಇನ್ನೊಬ್ಬರು ಜನಪ್ರಿಯ ನಟ ಶ್ರೀನಾಥ್ ಆಯ್ಕೆಯಾಗಿದ್ದರು. ಆತ್ಮೈ ಸ್ನೇಹಿತ ವಿಷ್ಣುವರ್ಧನ್‌ಗೆ ಇನ್ನಷ್ಟು ಸಿನಿಮಾ ಮಾಡಲು ಹೇಳಿದ್ದ ಅಂಬರೀಷ್ ಮಾತನ್ನು ಪುಟ್ಟಣ್ಣ ಅವರು ಕೊನೆಗೂ ನಡೆಸಿಕೊಡಲೇ ಇಲ್ಲ.
ಏಳುಬೀಳುಗಳ ನಡುವೆಯೂ ಗಟ್ಟಿ ಬದುಕು ಕಟ್ಟಿಕೊಂಡ ಜಯಮಾಲಾ ಅದೆಂಥ ಸಮಸ್ಯೆಗೆ ಸಿಲುಕಿದ್ದರು?
ಹಾಗಂತ, ನಟರಾದ ವಿಷ್ಣುವರ್ಧನ್-ಅಂಬರೀಷ್ ಮತ್ತು ಪುಟ್ಟಣ್ಣ ಕಣಗಾಲ್ ಸ್ನೇಹ ಹಿತಮಿತವಾಗಿ ಚೆನ್ನಾಗಿಯೇ ಇತ್ತು ಎನ್ನಲಾಗಿದೆ. ಆದರೆ, ಯಾಕೆ ಮತ್ತೆ ವಿಷ್ಣುಗೆ ಪುಟ್ಟಣ್ಣ ಅವರು ಸಿನಿಮಾ ಮಾಡಿಲ್ಲ ಎನ್ನವುದು ಎಂದೆಂದಿಗೂ ಯಕ್ಷಪ್ರಶ್ನೆಯಾಗಿಯೇ ಕನ್ನಡ ಸಿನಿಪ್ರೇಕ್ಷಕರನ್ನು ಕಾಡಲಿದೆ.
ಐಎಎಸ್ ಅಧಿಕಾರಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಕೆ ಶಿವರಾಮ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ