
ಕನ್ನಡ ಚಿತ್ರರಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾ ಅಂದ್ರೆ ದಂಡುಪಾಳ್ಯ 1 ಮತ್ತು ದಂಡುಪಾಳ್ಯ 2. ಚಿತ್ರದ ಎರಡು ಭಾಗದಲ್ಲೂ ನಟಿ ಪೂಜಾ ಗಾಂಧಿ ನಟಿಸಿದ್ದಾರೆ. ಭಾಗ 1ರಲ್ಲಿ ಬ್ಯಾಕ್‌ಲೆಸ್ ಆಗಿ ಪೋಸ್ ಕೊಟ್ಟರೆ, ಭಾಗ 2ರಲ್ಲಿ ಲಿಪ್‌ಲಾಕ್ ಮಾಡಿದ್ದಾರೆ. ಇಲ್ಲಿ ಪೂಜಾ ಗಾಂಧಿ ಜೊತೆ ಲಿಪ್‌ಲಾಕ್ ಮಾಡಿರುವುದು ತನಿಷಾ ಕುಪ್ಪಂಡ. ಈ ಸೀನ್ ಮಾಡಲು ಕಾರಣ ಏನು ಎಂದು ತನಿಷಾ ರಿವೀಲ್ ಮಾಡಿದ್ದಾರೆ.
'ನಾನು ಬೇರೆಯವರ ಪರವಾಗಿ ಆಯ್ಕೆ ಆಗಿ ಹೋಗಿರುತ್ತೀನಿ ಏಕೆಂದರೆ ಮೊದಲು ನನ್ನನ್ನು ಆಯ್ಕೆ ಮಾಡಿರುವುದಿಲ್ಲ. ಅಲ್ಲಿ ಕೊನೇ ಕ್ಷಣದಲ್ಲಿ ಕೈ ಕೊಟ್ಟಾಗ ಯಾರೋ ಹುಷಾರಿಲ್ಲ ಅಂತ ಬಿಟ್ಟಾಗ ನನ್ನನ್ನು ಅಯ್ಕೆ ಮಾಡುತ್ತಾರೆ. ನಾನು ದಂಡುಪಾಳ್ಯ 2 ಸಿನಿಮಾದಲ್ಲಿ ಆ ಕಿಸ್ ಸೀಸನ್ ಮಾಡುವುದಕ್ಕೆ ಎರಡು ಕಾರಣವಿದೆ. ಒಂದು ಒಳ್ಳೆ ಸಂಭಾವನೆ ಕೊಡುತ್ತಾರೆ, ಎರಡನೆಯದು ಆ ರೀತಿ ಪಾತ್ರವನ್ನು ಸೌತ್ ಇಂಡಸ್ಟ್ರಿಯಲ್ಲಿ ಯಾರೂ ಮಾಡಿರಲಿಲ್ಲ. ನಾನು ಮತ್ತು ಪೂಜಾ ಗಾಂಧಿ ಅವರೇ ಮೊದಲ ಬಾರಿಗೆ ಲೆಸ್ಲೋ ಕಾನ್ಸೆಪ್ಟ್‌ನಲ್ಲಿ ಸೀನ್ ಮಾಡಿರುವುದು. ದಂಡುಪಾಳ್ಯ ಚಿತ್ರಕ್ಕೂ ಮುನ್ನ ನಾನು ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ಆದರೆ ಈ ಸೀನ್ ಮಾಡಿದಾಗ ಅದು ನಾನು ಎಂದು ಯಾರೂ ಗುರುತು ಹಿಡಿಯಲಿಲ್ಲ. ಬಹಳಷ್ಟು ಜನ ನನ್ನ ಧ್ವನಿಯಿಂದ ಗುರುತಿಸಿದ್ದರು. ಆಗಲೇ ಗೊತ್ತಾಗಿದ್ದು ಧ್ವನಿ ಮೂಲಕ ಜನರು ಗುರುತಿಸುತ್ತಾರೆ ಅಂತ' ಎಂದು ಆರ್‌ಜೆ ರಾಜೇಶ್ ಸಂದರ್ಶನದಲ್ಲಿ ತನಿಷಾ ಮಾತನಾಡಿದ್ದಾರೆ.
ಧ್ರುವ ಸರ್ಜಾ ಮಗನ ಮೊದಲ ಬರ್ತಡೇ ಸೆಲೆಬ್ರೇಷನ್; Cow boy ಥೀಮ್ ಸೆಟ್ ಹೇಗಿದೆ ನೋಡಿ!
'ಆ ಸೀಸನ್ ಶೂಟಿಂಗ್ ಮಾಡುವ ದಿನ ನಾನು ತುಂಬಾ ಧೈರ್ಯದಿಂದ ಹೋಗಿದ್ದೆ. ಶೂಟಿಂಗ್ ಶುರುವಾಗುವ ಮುನ್ನ ನಾನು ಮತ್ತು ಪೂಜಾ ಗಾಂದಿ ಚರ್ಚೆ ಮಾಡುತ್ತಿದ್ವಿ. ದಂಡುಪಾಳ್ಯ 1 ಚಿತ್ರದಲ್ಲಿ ಪೂಜಾ ಗಾಂಧಿ ಬ್ಯಾಕ್‌ಲೆಸ್ ಸೀನ್ ಮಾಡಿದ್ದರು ಅದರ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಜೊತೆಗೆ ಈ ಸೀನ್ ಮಾಡುವುದಕ್ಕೂ ಮುನ್ನ ಯೋಚನೆ ಮಾಡು ಎಂದು ಸಲಹೆ ಕೊಟ್ಟಿದ್ದರು ಆದರೆ ನಾನು ಶೂಟಿಂಗ್‌ಗೆ ರೆಡಿಯಾಗಿದ್ದೆ. ಆಗ ನಾನು ತುಂಬಾ ಕಾನ್ಫಿಡೆಂಟ್ ಆಗಿದ್ದೆ ಅದನ್ನು ಅವರು ಮೆಚ್ಚಿಕೊಂಡರು. ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಟೆಕ್ನಿಕಲ್ ಸಮಸ್ಯೆಗಳಿಂದ ಸುಮಾರು 5-6 ಟೇಕ್ ತೆಗೆದುಕೊಳ್ಳಬೇಕಿತ್ತು' ಎಂದು ತನಿಷಾ ಹೇಳಿದ್ದಾರೆ.
ದುಬೈಗೆ ಹಾರುತ್ತಿದ್ದಂತೆ ಬದಲಾದ 'ಲಕ್ಷ್ಮಿ ನಿವಾಸ' ಭಾವನಾ; ಫೋಟೋ ನೋಡಿ ವೀಕ್ಷಕರು ಶಾಕ್!
'ಆ ಸೀಸನ್ ಮಾಡಿದ್ದ ಸೀರಿಯಸ್‌ನೆಸ್ ವರ್ಕೌಟ್ ಆಗಲಿಲ್ಲ ಸೀನ್ ಕೂಡ ಹೈಲೈಟ್ ಆಗಲಿಲ್ಲ ಆದರೆ ಸಿಕ್ಕಾಪಟ್ಟೆ ಟ್ರೋಲ್ ಆಯ್ತು. ಈಗಲೂ ಹಲವರಿಗೆ ನಾನು ಮತ್ತು ಪೂಜಾ ಗಾಂಧಿ ಆ ಸೀನ್ ಮಾಡಿರುವುದು ಎಂದು ಗೊತ್ತಿಲ್ಲ. ದುಡ್ಡು ಅಂತ ಆಸೆ ಬಿದ್ದು ಮಾಡಿಲ್ಲ ಆದರೆ ಇದಕ್ಕೂ ಮುನ್ನ ನಾನು ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದೆ ಆಗ ನನ್ನ ಕಾಲಿಗೆ ಪೆಟ್ಟಾಗಿತ್ತು. ಆ ಶೋನವರು ನನ್ನ ವೈದ್ಯಕೀಯ ವೆಚ್ಚಗಳನ್ನು ನೀಡಲಿಲ್ಲ ಆಗ ದುಡ್ಡು ಎಷ್ಟು ಮುಖ್ಯ ಅನ್ನೋದು ಅರ್ಥವಾಗಿತ್ತು' ಎಂದಿದ್ದಾರೆ ತನಿಷಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.