‘ದೂರ ತೀರ ಯಾನ’ ಟ್ರೇಲರ್‌ ನೋಡಿ ಖುಷಿಪಟ್ಟ ಕಿಚ್ಚ ಸುದೀಪ್: ಗುಡ್ ಲಕ್ ಅಂದಿದ್ಯಾಕೆ?

Published : Jul 03, 2025, 02:23 PM IST
Kichcha Sudeep

ಸಾರಾಂಶ

ಪ್ರಯಾಣದಲ್ಲಿ ಜೊತೆಯಾಗುವ ಪಾತ್ರಧಾರಿಗಳ ಮೂಲಕ ಆಪ್ತವಾದ ಕತೆ ಹೇಳಿರುವ ಚಿತ್ರ ಇದಾಗಿದ್ದು, ಎಂಆರ್‌ಟಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ದೂರ ತೀರ ಯಾನ ಟ್ರೇಲರ್‌ ನೋಡಬಹುದು.

ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ದೂರ ತೀರ ಯಾನ ಟ್ರೇಲರ್ ಚೆನ್ನಾಗಿದೆ. ಸಂಗೀತವೂ ಅದ್ಭುತ ಅನಿಸುತ್ತದೆ. ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ನೋಡ್ತಾ ಹೋದ್ರೆ ಖುಷಿ ಆಗುತ್ತದೆ. ಹಾಡುಗಾರಿಕೆನೂ ಚೆನ್ನಾಗಿದೆ. ಸಂಗೀತ ನಿರ್ದೇಶಕರಾದ ಬಕ್ಕೇಶ್ - ಕಾರ್ತಿಕ್ ಕೆಲಸ ಚೆನ್ನಾಗಿದೆ ಗುಡ್ ಲಕ್ ಎಂದು ಕಿಚ್ಚ ಸುದೀಪ್‌ ಹಾರೈಸಿದ್ದಾರೆ.

ಪ್ರಯಾಣದಲ್ಲಿ ಜೊತೆಯಾಗುವ ಪಾತ್ರಧಾರಿಗಳ ಮೂಲಕ ಆಪ್ತವಾದ ಕತೆ ಹೇಳಿರುವ ಚಿತ್ರ ಇದಾಗಿದ್ದು, ಎಂಆರ್‌ಟಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ನೋಡಬಹುದು. ವಿಜಯ್‌ ಕೃಷ್ಣ, ಪ್ರಿಯಾಂಕ ಕುಮಾರ್ ಜೋಡಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್‌ ಆರ್‌ ನಿರ್ಮಿಸಿರುವ ಈ ಚಿತ್ರಕ್ಕೆ ಚೇತನಾ ತೀರ್ಥಹಳ್ಳಿ, ಕೃಷ್ಣ ಹೆಬ್ಬಾಳೆ ಸಹ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನೆಮಾ ನಾತಿಚರಾಮಿ. ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನೆಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ಸಿನಿಮಾಗೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕಷ್ಟೇ ಅಲ್ಲದೇ ಈ ಸಿನೆಮಾದ ಕಥಾ ವಸ್ತುವೂ ಹೆಚ್ಚು ಚರ್ಚಿತವಾಗಿ, ನೆಟ್ ಫ್ಲಿಕ್ಸ್ ಮೂಲಕ ದೇಶ ವಿದೇಶದ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಗೌರಿ ಪಾತ್ರ ಮಾಡಿದ್ದ ಶೃತಿ ಹರಿಹರನ್ ಮತ್ತೆ ಮಂಸೋರೆ ಅವರ ಹೊಸ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .

ನಾತಿಚರಾಮಿಯ ದಿಟ್ಟ ಮಹಿಳೆ ಗೌರಿ ಕನ್ನಡ ಚಿತ್ರರಂಗದಲ್ಲೇ ಒಂದು ಐಕಾನಿಕ್ ಪಾತ್ರ . ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನಿಮಾದ ಪಾತ್ರಗಳನ್ನು ಮತ್ತೊಂದು ಸಿನಿಮಾದಲ್ಲಿ ತರುವುದರ ಮೂಲಕ ತಮ್ಮದೇ ಆದ ಸಿನಿಮಾ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಅಪರೂಪದ ಜಗತ್ತನ್ನು ಮಂಸೋರೆಯವರು ತಮ್ಮ ದೂರ ತೀರ ಯಾನದಲ್ಲಿ ಸೃಷ್ಟಿರುವ ಪ್ರಯತ್ನವನ್ನು ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿತ್ತು.

ಇಂತಹ ಅಚ್ಚರಿ ನೀಡಿರುವ ಮಂಸೋರೆ ಮತ್ತು ಗೌರಿ ಕಾಂಬಿನೇಶನ್ ತೆರೆಯ ಮೇಲೆ ಯಾವ ರೀತಿ ತೆರೆಮೇಲೆ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಇದೀಗ ಪ್ರೇಕ್ಷಕ ವರ್ಗದಲ್ಲಿ ದೂರ ತೀರ ಯಾನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಸದ್ಯ ದೂರ ತೀರ ಯಾನ ಸಿನೆಮಾ ಸೆನ್ಸಾರ್ ಪೂರ್ಣಗೊಳಿಸಿ ಯು/ಎ ಪ್ರಮಾಣ ಪತ್ರವನ್ನು ಪಡೆದಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಇನ್ನು ಸಿನಿಮಾವು ಇದೇ ಜುಲೈ 11ರಂದು ತೆರೆ ಕಾಣಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ