
ಬೆಂಗಳೂರು (ಜು.15): ನನ್ನನ್ನು ಗುರುತಿಸಿ ಆಹ್ವಾನ ಕೊಟ್ಟಿದ್ದರು. ಆದರೆ, ನನಗೆ ಅಲ್ಲಿನ ಪ್ರೊಟೊಕಾಲ್ ಅಡ್ಡಿಯಾಗಬಹುದು ಎಂದು ಮದುವೆಗೆ ಹೋಗಲಾಗಲಿಲ್ಲ ಎಂದು ಸ್ಯಾಂಡಲ್‌ವುಡ್ ಬಾದ್‌ಶಾ ಖ್ಯಾತಿಯ ನಟ ಕಿಚ್ಚ ಸುದೀಪ್ ಹೇಳಿದ್ದೊಂದು ಹಳೇ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ, ಇದು ಹಳೆಯ ವೀಡಿಯೋವಾಗಿದ್ದು, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವಕ್ಕೂ, ಈ ವೀಡಿಯೋಗೂ ಸಂಬಂಧವಿಲ್ಲವಿಲ್ಲದಿದ್ದರೂ, ಈ ವಿಷಯದೊಟ್ಟಿಗೆ ಥಳಕು ಹಾಕಲಾಗುತ್ತಿದೆ.. .
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ರಾಜಕೀಯ, ಸಿನಿಮಾ, ಸಂಗೀತ, ನೃತ್ಯ, ಉದ್ಯಮ, ಕ್ರಿಕೆಟ್ ಹಾಗೂ ಕ್ರೀಡೆ ಸೇರಿ ಎಲ್ಲ ವಿಭಾಗದ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿತ್ತು. ಕನ್ನಡದ ರಿಷಭ್ ಶೆಟ್ಟಿ ಅವರು ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಹೋಗಿ ಬಂದಿದ್ದರು. ಆದರೆ, ಮದುವೆ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಬಿಟ್ಟರೆ ಬೇರಾರೂ ಹೋಗಿರಲಿಲ್ಲ. ಇನ್ನು ಸ್ಯಾಂಡಲ್‌ವುಡಡ್‌ನ ಬೇರಾವ ನಟರಿಗೂ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿಯೂ ನಟಿಸಿದ ಕಿಚ್ಚ ಸುದೀಪ್ ಅವರಿಗೂ ಅಂಬಾನಿ ಮದುವೆಗೆ ಆಹ್ವಾನ ಸಿಕ್ಕಿಲ್ಲವೇ ಎಂಬ ಪ್ರಶ್ನೆಗಳೂ ಕೇಳಿ ಬಂದಿದ್ದವು.
ಅಂಬಾನಿ ಮದ್ವೆಯಲ್ಲಿ ಕಾಣಿಸಿಕೊಳ್ಳದ ತಾರೆಯರಿವರು, ಓರ್ವನಿಗೆ ಕೋವಿಡ್, ಮತ್ತೋರ್ವನನ್ನು ಕರೆದೇ ಇಲ್ಲ!
ಈ ಅನುಮಾನದ ಹಿನ್ನೆಲೆಯಲ್ಲಿಯೇ ಸುದೀಪ್ ಅವರ ಹಳೆಯ ವೀಡಿಯೋವೊಂದನ್ನು ಅಂಬಾನಿ ಮಗನ ಮದ್ವೆಯೊಂದಿಗೆ ಥಳಕು ಹಾಕಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಒಮ್ಮೆ ಸ್ಯಾಂಡಲ್‌ವುಡ್ ನಟರನ್ನು ಭೇಟಿಯಾದಾಗ, ಸುದೀಪ್‌ಗೆ ಕೇಳಿರುವ ಪ್ರಶ್ನೆ ಎಂದೆನಿಸುತ್ತಿದೆ. ಆಗವರು ಖಂಡಿತವಾಗಿಯೂ ನನಗೆ ಆಹ್ವಾನ ಬಂದಿತ್ತು. ಅವರು ನನ್ನನ್ನು ಗುರುತಿಸಿ ಅಹ್ವಾನ ನೀಡಿದ್ದಕ್ಕೆ ಖಂಡಿತವಾಗಿಯೂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.ನಾನು ಹೋಗಬೇಕೆಂಬ ಸಿದ್ಧತೆಯಲ್ಲಿದ್ದಾಗ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೋಗಲಾಗಲಿಲ್ಲ ಎಂದರು.
ಮುಂದುವರೆದು, ಅವರೆನ್ನೆಲ್ಲಾ ಭೇಟಿಯಾಗಲು ಹೋಗುವಾಗ ಕಠಿಣ ಪ್ರೋಟೋಕಾಲ್ ಇದೆ. ಆಹ್ವಾನವಿದ್ದವರಿಗೆ ಸ್ವಲ್ಪ ಅನಾರೋಗ್ಯವಿದ್ದರೆ, ನೆಗಡಿ, ಶೀತ ಅಥವಾ ಜ್ವರ ಇದ್ದರೆ ಆರ್‌ಟಿಪಿಸಿಆರ್ ಚೆಕಿಂಗ್ ಕೂಡ ಮಾಡಲಾಗುತ್ತಿತ್ತು. ಆದರೆ, ನನಗೆ ಸ್ವಲ್ಪ ಹುಷಾರಿರಲಿಲ್ಲ, ಸ್ವಲ್ಪ ಜ್ವರವೂ ಇತ್ತು. ಇದರಿಂದ ನಾನು ಅಲ್ಲಿಗೆ ಹೋಗಲು ಕಂಫರ್ಟ್ ಇರಲಿಲ್ಲ. ಜೊತೆಗೆ, ನನಗೆ ಇಲ್ಲಿ ಹಲವು ಕೆಲಸಗಳು ಕೂಡ ಇದ್ದವು. ಇನ್ನು ಅಲ್ಲಿಗೆ ಹೋದ ನಂತರ ನಮಗೆ ಟೆಂಪರೇಚರ್ ಚೆಕ್ ಮಾಡಿ ನಿಮಗೆ ಒಳಗೆ ಬಿಡಬೇಡಿ ಇಲ್ಲ ಎಂದು ಹೇಳಿಬಿಟ್ಟರೆ ತಪ್ಪಾಗಿ ಬಿಡುತ್ತದೆ ಎಂಬ ಭಾವನೆಯಿಂದ ನಾನು ಹೋಗಲಿಲ್ಲವೆಂದು ವೀಡಿಯೋದಲ್ಲಿ ಸುದೀಪ್ ಹೇಳಿದ್ದಾರೆ..
ಬೆಂಗಳೂರು: ಆಂಬುಲೆನ್ಸ್‌ಗೆ ಸಿಗ್ನಲ್ ಜಂಪ್ ಮಾಡಿ ದಾರಿ ಬಿಟ್ಟಿದ್ರಾ? ನಿಮ್ಮ ವಾಹನಗಳ ದಂಡ ಹಾಕಲ್ಲ ಬಿಡಿ
ಇನ್ನು ನಾನು ಅನುಪಸ್ಥಿತಿ ಬಗ್ಗೆ ಯಾರಿಗೆ ಹೇಳಬೇಕೋ ಅವರಿಗೆ ಕರೆ ಮಾಡಿ, ಬರುವುದಕ್ಕೆ ಆಗುವುದಿಲ್ಲ ಕ್ಷಮೆಯಿರಲಿ, ನಾನು ಖಂಡಿತವಾಗಿಯೂ ಇನ್ನೊಂದು ಬಾರಿ ಬಂದು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದೇನೆ. ಯಾಕೆಂದರೆ, ಅವರನ್ನು ಭೇಟಿ ಮಾಡುವುದೆಂದರೆ ನಮ್ಮ ಅದೃಷ್ಟ, ಈ ಬಗ್ಗೆ ಖುಷಿಯೂ ನಮಗಿದೆ. ನಾವು ಅವರನ್ನು ತುಂಬಾ ಗೌರವಯುತವಾಗಿ ಕಾಣುತ್ತೇವೆ. ಆದರೆ, ಆಕಸ್ಮಿಕವಾಗಿ ನನಗೆ ಅನಾರೋಗ್ಯ ಉಂಟಾದ ಕಾರಣ, ಹೋಗಲು ಹಿಂದೇಟು ಹಾಕಬೇಕಾಯಿತು. ನಮಗೂ ಭಯ ಇರುವುದಿಲ್ಲವೇ? ಎಂದು ಸುದೀಪ್ ವೀಡಿಯೋದಲ್ಲಿ ಹೇಳಿದ್ದು, ಇದನ್ನು ಅನಂತ್ ಅಂಬಾನಿ ಮದುವೆಯೊಂದಿಗೆ ಥಳಕು ಹಾಕಿ ವೈರಲ್ ಮಾಡಲಾಗುತ್ತಿದೆ. .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.