ಜೊತೆಯಲ್ಲಿ ನಟಿಸಿರುವ ಡಾಲಿ ಧನಂಜಯ್ ನಟ ಶಿವಣ್ಣಗೆ 'ಅರವಟ್ಟಿಗೆ' ಅಂದಿದ್ಯಾಕೆ?

By Shriram Bhat  |  First Published Nov 14, 2024, 1:52 PM IST

'ಕದ ತಟ್ಟೋಣ ಅಂದ್ರೆ ಆ ಹೃದಯಕ್ಕೆ ಕದವೇ ಇಲ್ಲ. ಇರೋ ಬರೋರೆಲ್ಲಾ ಆ ಹೃದಯಕ್ಕೆ ನುಗ್ಗೋದು ಬೇಡ, ಸ್ವಲ್ಪ ಕದ ತಟ್ಟಿ ಒಳಗೆ ಬರಲಿ ಅಂತ ಅಲ್ಲಿ ಕದ ಹಾಕೋಣ ಅಂದ್ರೆ, ಕದ ಹಾಕೋದಕ್ಕೆ ಅಲ್ಲಿ ಗೋಡೆಗಳೇ ಇಲ್ಲ. ಶಿವಣ್ಣನ ಹೃದಯ ಬಯಲು ಆಲಯ ಅದು.. 


ನಟ ಶಿವರಾಜ್‌ಕುಮಾರ್ (Shiva Rajkumar) ಅವರಿಗೆ ಕ್ಯಾನ್ಸರ್‌ (Cancer) ಕಾಡುತ್ತಿದ್ದು, ಅವರೀಗ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಜನವರಿಯಲ್ಲಿ ಅಮೆರಿಕಕ್ಕೆ (America) ತೆರಳುತ್ತಿರುವ ನಟ ಶಿವಣ್ಣ ಅಲ್ಲಿ ಟ್ರೀಟ್‌ಮೆಂಟ್ ಜೊತೆಗೆ ಸರ್ಜರಿಗೆ ಕೂಡ ಒಳಗಾಗಲಿದ್ದಾರೆ. ಸದ್ಯ ನಟ ಶಿವಣ್ಣರ ಅನಾರೋಗ್ಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಈ ವೇಳೆ ಹಲವರು ನಟ ಶಿವಣ್ಣರ ಬಗ್ಗೆ ತಮ್ಮ ಮನದಾಳದ ಮಾತು ಹೇಳಿಕೊಂಡಿದ್ದಾರೆ. 

ಟಗರು, ಭೈರಾಗಿ ಹಾಗೂ ಉತ್ತರಕಾಂಡ ಸಿನಿಮಾಗಳಲ್ಲಿ ನಟ ಧನಂಜಯ್ (Dolly Dhananjay) ಅವರು ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಶಿವಣ್ಣ ನಟನೆಯ ಮುಂಬರುವ 'ಭೈರತಿ ರಣಗಲ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಡಾಲಿ ಖ್ಯಾತಿಯ ಧನಂಜಯ್ ಅವರು ಶಿವಣ್ಣರ ಬಗ್ಗೆ ಅಭಿಮಾನದಿಂದ ಕೆಲವು ಮಾತುಗಳನ್ನು ಆಡಿದ್ದಾರೆ. ಅದೀಗ ಭಾರೀ ವೈರಲ್ ಆಗುತ್ತಿದೆ. ಹಾಗಿದ್ದರೆ ನಟ ಧನಂಜಯ್ ಅವರು ಹೇಳಿದ್ದೇನು, ನೋಡಿ..

Tap to resize

Latest Videos

undefined

ಈ ಕನ್ನಡದ ನಟ ತೆಲುಗು ಬಿಗ್ ಸ್ಟಾರ್ ಆಗೋದು ಫಿಕ್ಸ್; ಭವಿಷ್ಯ ನುಡಿದ ಮೆಗಾ ಸ್ಟಾರ್!

'ಕದ ತಟ್ಟೋಣ ಅಂದ್ರೆ ಆ ಹೃದಯಕ್ಕೆ ಕದವೇ ಇಲ್ಲ. ಇರೋ ಬರೋರೆಲ್ಲಾ ಆ ಹೃದಯಕ್ಕೆ ನುಗ್ಗೋದು ಬೇಡ, ಸ್ವಲ್ಪ ಕದ ತಟ್ಟಿ ಒಳಗೆ ಬರಲಿ ಅಂತ ಅಲ್ಲಿ ಕದ ಹಾಕೋಣ ಅಂದ್ರೆ, ಕದ ಹಾಕೋದಕ್ಕೆ ಅಲ್ಲಿ ಗೋಡೆಗಳೇ ಇಲ್ಲ. ಶಿವಣ್ಣನ ಹೃದಯ ಬಯಲು ಆಲಯ ಅದು.. ಬರೀ ಪ್ರೀತಿ-ಸ್ನೇಹದ ಗಾಳಿಯೇ ತುಂಬಿರೋ ಓಪನ್ ಗ್ರೌಂಡ್.. ಕನ್ನಡ ಚಿತ್ರರಂಗದಲ್ಲಿ ನಟ ಶಿವಣ್ಣ ಅರವಟ್ಟಿಗೆ ಇದ್ದಂತೆ...' ಇದು 'ಭೈರತಿ ರಣಗಲ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್‌ ಅವರ ಮನದಾಳದ ಮಾತು. 

ಹಾಗಿದ್ದರೆ ನಟ ಶಿವಣ್ಣ ಎಂಥವರು. ಅವರು ಯಾವತ್ತೂ ಯಾರಿಗೂ ಕೇಡು ಬಯಸಿದವರಲ್ಲ. ಜೊತೆಯಲ್ಲಿ ಇರುವವರಿಗೆ ತಂಗಾಳಿಯ ತಂಪು ನೀಡುವವರು. ದೂರ ಇರುವವರಿಗೆ ಕೇಡು ಬಯಸದ ಸಂತ, ಎಲ್ಲರ ಹಿತೈಷಿ. ತಾವೀಗ ಗಂಭೀರ ಖಾಯಿಲೆಗೆ ತುತ್ತಾಗಿದ್ದರೂ, ಮನಸ್ಸಿನಲ್ಲಿ ಭಯ-ದುಗುಡ ತುಂಬಿದ್ದರೂ ಮಾಡಬೇಕಾದ ಕೆಲಸ ಮಾಡುತ್ತ, ತಾವೇ ಇತರರಿಗೆ ಸಮಾಧಾನ ಮಾಡುತ್ತ ಬದುಕುತ್ತಿರುವ ಭಾವಜೀವಿ ಹಾಗೂ ಸ್ನೇಹಜೀವಿ ಎನ್ನುತ್ತಿದ್ದಾರೆ ಅವರ ಒಡನಾಡಿ ಆಪ್ತಮಿತ್ರರು.

ನನಗೇನೂ ಗೊತ್ತಿಲ್ಲ ಎಂಬುದು ಚೆನ್ನಾಗಿ ಗೊತ್ತಾಗಿದೆ: ಯಾವಾಗ ಹೀಗೆ ಹೇಳಿದ್ರು ವಿಷ್ಣುವರ್ಧನ್?

ಕರುನಾಡ ಚಕ್ರವರ್ತಿ ಬಿರುದು ಪಡೆದಿರುವ ನಟ ಶಿವರಾಜ್‌ಕುಮಾರ್ ಅವರು ಸದ್ಯ ಭೈರತಿ ರಣಗಲ್ ಶೂಟಿಂಗ್ ಮಗಿಸಿ, ಕಿರುತೆರೆಯ 'ಡಿಕೆಡಿ' ಶೋದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಿಕ್ಕ ಸಿನಿಮಾಗಳ ಶೂಟಿಂಗ್‌ಗಳನ್ನು ಸದ್ಯ ಮುಂದಕ್ಕೆ ಹಾಕಿರುವ ಶಿವಣ್ಣ ಅವರು ಇಂದು ನವೆಂಬರ್ 14 (Noveber 14) ಮಕ್ಕಳ ದಿನಾಚರಣೆ ಅಂಗವಾಗಿ ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ. 'A for ಆನಂದ್' ಎಂದು ಆ ಚಿತ್ರಕ್ಕೆ ಹೆಸರಿಟ್ಟಿದ್ದು, ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಈ ಚಿತ್ರದಲ್ಲಿ ತಮ್ಮದೇ ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ನಟಿಸಲಿದ್ದಾರೆ. ಈ ಚಿತ್ರವನ್ನು 'ಶ್ರೀನಿ' ನಿರ್ದೇಶಿಸಲಿದ್ದಾರೆ. 

click me!