
ಕನ್ನಡ ಚಿತ್ರರಂಗದ ಓನ್ ಆ್ಯಂಡ್ ಓನ್ಲಿ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಇದೇ ಸೆ.24ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಹಾಗೂ ಅಮೃತಾ ಅಯ್ಯರ್, ನಾಗಭೂಷಣ್ ಚಿತ್ರದಲ್ಲಿ ನಟಿಸಿದ್ದಾರೆ.
'ನಾನು ಯೋಗರಾಜ್ ಭಟ್ ಅವರಿಗೆ ಧನ್ಯವಾದಗಳನ್ನು ಹೇಳಬೇಕು. ತುಂಬಾ ಹಿಂದೆ ಅವರು ಈ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ನಮ್ಮ ತಂಡ ಸಿನಿಮಾ ಮಾಡುವ ನಿರ್ಧಾರ ಮಾಡಿದಾಗ, ಅವರು ತುಂಬಾ ಪ್ರೀತಿಯಿಂದ ನಮಗೆ ಈ ಟೈಟಲ್ ಬಿಟ್ಟು ಕೊಟ್ಟರು. ನಾವೆಲ್ಲರೂ ಬಡವ ರಾಸ್ಕಲ್‌ಗಳು, ಹೀಗಾಗಿ ಯಾವ ಕಾರಣಕ್ಕೂ ಯೋಗರಾಜ್ ಭಟ್ ಇಲ್ಲ ಎನ್ನುವ ಹಾಗೆ ಇರಲಿಲ್ಲ. ಶಂಕರ್ ಅವರು ಕೋರಿಯರ್ ಬಾಯ್ ಹಾಗೂ ನಾನೂ ರೈತರ ಕುಟುಂಬದಿಂದ ಬಂದವನು. ನಾವಿಬ್ಬರೂ ಡೈರೆಕ್ಟರ್ ಸ್ಪೆಷಲ್ ಚಿತ್ರದಿಂದ ಪರಿಚಯಸ್ತರು,' ಎಂದು ಡಾಲಿ ಧನಂಜಯ್ ಬೆಂಗಳೂರು ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾವಿತ್ರಮ್ಮ ಅಡವಿ ಸ್ವಾಮಿ ಈ ಚಿತ್ರದ ನಿರ್ಮಾಪಕರಾಗಿದ್ದು, ಪ್ರೀತಾ ಜಯರಾಮ್ ಕ್ಯಾಮೆರಾ ಹಿಡಿದಿದ್ದಾರೆ. ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ. ಇನ್ನು ಡಾಲಿ ಇನ್ನಿತರೆ ಸಿನಿಮಾಗಳಾದ ಹೆಡ್‌ಬುಶ್, ಸಲಗ, ರತ್ನನ್ ಪ್ರಪಂಚ, ತೋಥಾಪೂರಿ, ಶಿವಪ್ಪ, ಪುಷ್ಪ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.