
ಡಿಫರೆಂಟ್ ಡೈರೆಕ್ಟರ್ ರಿಷಬ್ ಶೆಟ್ಟಿ ಹಾಗೂ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಜೋಡಿಯಾಗಿ ಅಭಿನಯಿಸಿರುವ 'ಹೀರೋ' ಚಿತ್ರ ಇದೀಗ ತೆಲುಗಿಗೆ ಡಬ್ ಮಾಡಲಾಗಿದೆ. ತೆಲುಗು ಜನಪ್ರಿಯಾ 'ಆಹಾ' ಓಟಿಟಿಯಲ್ಲಿ ಜು.24ರಿಂದ ಸಿನಿಮಾ ಪ್ರಸಾರವಾಗಲಿದೆ.
ರಿಷಬ್ ಶೆಟ್ಟಿ ಹಾಗೂ ಗಾನವಿ ನಟನೆಯ ಹೀರೋ ಚಿತ್ರವನ್ನು ಮೊದಲ ಹಂತದ ಲಾಕ್‌ಡೌನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಅತಿ ಕಡಿಮೆ ತಂತ್ರಜ್ಞರನ್ನು ಬಳಸಿ, ಚಿಕ್ಕಮಗಳೂರಿನ ಕಾಫಿ ತೋಟವೊಂದರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಲಾಕ್‌ಡೌನ್ ಸಡಿಲಿಕೆ ಆಗುತ್ತಿದ್ದಂತೆ, ಚಿತ್ರಮಂದಿರದಲ್ಲಿ ತೆರೆ ಕಂಡು ಗಮನ ಸೆಳೆದಿತ್ತು. ಅನ್‌ಲಾಕ್ ನಂತರ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಥಲೂ ಖ್ಯಾತಿ ಪಡೆಯಿತು.
ಎಂ. ಭರತ್‌ರಾಜ್ ನಿರ್ದೇಶನದ ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಬಂಡವಾಳ ಹೂಡಿದ್ದರು. ರಿಷಬ್ ಶೆಟ್ಟಿ ವೃತ್ತಿಯಲ್ಲಿ ಕ್ಷೌರಿಕನಾಗಿರುತ್ತಾನೆ. ತನ್ನ ಹಳೆಯ ಪ್ರೇಯಸಿ ಒಬ್ಬ ಮಾಫಿಯಾ ಡಾನ್ ಅನ್ನು ಮದುವೆ ಆಗಿರುತ್ತಾಳೆ, ಎಂಬ ಕಾರಣಕ್ಕೆ ಕೊಲೆ ಮಾಡಲು ಮುಂದಾಗುತ್ತಾರೆ. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ಯಾವ ಪಾತ್ರಧಾರಿಗೂ ಹೆಸರಿರುವುದಿಲ್ಲ. ಎಲ್ಲರನ್ನೂ ತಮ್ಮ ವೃತ್ತಿಯಿಂದ ಕರೆಯುವುದೇ ಈ ಚಿತ್ರದ ವಿಶೇಷತೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.