ಡಿಕೆಶಿ ಮಾತಿನಿಂದ ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ: ಇದಕ್ಕೆಲ್ಲ ಕಾರಣ ಸಾಧು ಕೋಕಿಲಾನಾ?

Published : Mar 03, 2025, 05:02 PM ISTUpdated : Mar 03, 2025, 05:20 PM IST
ಡಿಕೆಶಿ ಮಾತಿನಿಂದ ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿ: ಇದಕ್ಕೆಲ್ಲ ಕಾರಣ ಸಾಧು ಕೋಕಿಲಾನಾ?

ಸಾರಾಂಶ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಾಧು ಕೋಕಿಲ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಪಕ್ಷದ ಬೆಂಬಲಕ್ಕೆ ನೀಡಿದ ಕೊಡುಗೆ ಎಂದು ಹೇಳಿರುವುದು ಟೀಕೆಗೆ ಗುರಿಯಾಗಿದೆ. ಇದು ಸರ್ಕಾರ ಮತ್ತು ಸ್ಯಾಂಡಲ್​ವುಡ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ವರದಿ: ಅಮೀತ್ ದೇಸಾಯಿ, ಏಷ್ಯಾನೆಟ್‌ ಸುವರ್ಣನ್ಯೂಸ್

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ಕನ್ನಡ ಸಿನಿರಂಗದಲ್ಲಿ ಬಿರುಗಾಳಿ ಎಬ್ಬಿಸಿವೆ. ಆಡಳಿತ ಪಕ್ಷದ ಹಲವು ನಾಯಕರು ಸಿನಿತಾರೆಯರ ವಿರುದ್ದ ಅಬ್ಬರಿಸ್ತಾ ಇದ್ದಾರೆ. ಒಂದು ರೀತಿ ಸರ್ಕಾರ Vs ಸ್ಯಾಂಡಲ್​ವುಡ್​ ಅನ್ನುವಂಥಾ ವಾತಾವರಣ ನಿರ್ಮಾಣ ಆಗಿದೆ. ಇಷ್ಟೆಲ್ಲಾ ರಾಮಾಯಣ ಆಗ್ಲಿಕ್ಕೆ ಮೂಲ ಕಾರಣನೇ ನಮ್ಮ ಸಾಧು ಮಹಾರಾಜ್. ಅದ್ಹೇಗೆ ಅಂತೀರಾ ಈ ಸ್ಟೋರಿ ನೋಡಿ.

ಸಿನಿಮಾ ಇಂಡಸ್ಟ್ರಿ ನಟ್ಟು, ಬೋಲ್ಟು ಡಿಕೆ ಕೈಗೆ ಕೊಟ್ರಾ ಸಾಧು?
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ಕನ್ನಡ ಸಿನಿರಂಗಕ್ಕೆ ಆಘಾತ ಉಂಟು ಮಾಡಿವೆ. ಸಿನಿಮಾದವರ ನಟ್ಟು, ಬೋಲ್ಟು ಟೈಟ್ ಮಾಡ್ತಿನಿ ಅಂತ ಡಿಕೆಶಿ ಹೇಳಿದ ಮಾತುಗಳಲ್ಲಿ ಚಿತ್ರೋದ್ಯಮದ ಬಗ್ಗೆ ಇರೋ ಅಗೌರವ,  ಕಲಾವಿದರರೆಲ್ಲಾ ನಮ್ಮಲ್ಲಿ ಹಂಗಲ್ಲಿ ಇರುವವರು ಅನ್ನೋ ಅಹಂಭಾವ ಎದ್ದು ಕಾಣ್ತಾ ಇದೆ. ಇದರ ಬಗ್ಗೆ ಚಿತ್ರರಂಗದ ಹಿರಿಯರೆಲ್ಲಾ ಬೇಸರ ಮಾಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಯಾರೇ ಸಿಎಂ ಆದ್ರೂ ಡಾ.ರಾಜ್‌ಕುಮಾರ್ ಅವರ ಮನೆಗೆ, ಫಿಲಂ ಚೇಂಬರ್​ಗೆ ಭೇಟಿ ಕೊಟ್ಟು ನಿಮ್ಮ ಸಹಕಾರ ನಮ್ಮೊಡನೆ ಇರಲಿ ಅಂತ ಕೇಳಿಕೊಳ್ತಾ ಇದ್ರು. ಆದ್ರೆ ಇವತ್ತು ನಿಮ್ಮ ಶೂಟಿಂಗ್ ನಿಲ್ಲಿಸ್ತಿನಿ, ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಅನ್ನೋ ಕಾಲ ಬಂದಿದೆ. ಇಂಥ ಪರಿಸ್ಥಿತಿ ಬರೋದಕ್ಕೆ ಕಾರಣ ಬೇರ್ಯಾರೂ ಅಲ್ಲ ನಮ್ಮ ಕಾಮಿಡಿ ಕಿಂಗ್ ಸಾಧು ಮಹಾರಾಜ್.

ಕಿಚ್ಚನ ಕಾರಣಕ್ಕೆ ಚಿತ್ರರಂಗದ ವಿರುದ್ದ ಕಿಚ್ಚು ಹತ್ತಿಕೊಳ್ತಾ? ಸುದೀಪ್‌ ವಿರುದ್ಧ ರವಿ ಗಣಿಗ ಕೆಂಡಾಮಂಡಲ!
 
ಮ್ಯೂಸಿಕ್​ಗೆ ಮರ್ಯಾದೆಯಿಲ್ಲ. ಕಾಮಿಡಿಗೆ ಕಿಮ್ಮತ್ತಿಲ್ಲ!
ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಅಂತ ಹೇಳುವ ಮುನ್ನ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಒಂದು ಮಾತು ಹೇಳಿದ್ರು. ಸಾಧು ಕೋಕಿಲ ನಮ್ಮ ಪಕ್ಷದ ಮೇಕೆದಾಟು ಪಾದಯಾತ್ರೆ ಬಂದಿದ್ರು ನಮ್ಮ ಪರ ನಿಂತಿದ್ರು. ಅದಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರ್ತಾನೇ ಅವರನ್ನ ಚಲನಚಿತ್ರ ಅಕಾಡಮಿ ಅಧ್ಯಕ್ಷ ಮಾಡಿದ್ವಿ ಅಂದುಬಿಟ್ರು ಡಿ.ಕೆ ಶಿವಕುಮಾರ್.

ಅರೇ ಸಾಧುಗೆ ಈ ಸ್ಥಾನ ಸಿಕ್ಕಿದ್ದು ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಗಲ್ಲ. ಅವರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಕ್ಕೆ ಮಾತ್ರ ಅನ್ನೋದನ್ನ ನೇರಾನೇರ ಹೇಳಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್. ಸಾಧುಕೋಕಿಲ ಚಿತ್ರರಂಗದಲ್ಲಿ ಮಾಡಿರೋ ಸಾಧನೆ ಏನೂ ಕಡಿಮೆ ಅಲ್ಲ ಸ್ವಾಮಿ. 1993ರಲ್ಲಿ ಶ್ ಸಿನಿಮಾಗೆ  ಸಂಗೀತ ನಿರ್ದೇಶನ ಮಾಡುವ ಕರೀಯರ್ ಶುರುಮಾಡಿದ ಸಾಧು ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಕೆಲಸ ಮಾಡಿದ್ದಾರೆ.

ಸಂಗೀತ ನಿರ್ದೇಶಕನಾಗಿ 50ಕ್ಕೂ ಅಧಿಕ ಚಿತ್ರಗಳನ್ನ ಮಾಡಿರೋ ಸಾಧು, ನಟನಾಗಿ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿದ್ದಾರೆ ಮೂರು ದಶಕಗಳಿಂದ ತನ್ನ ಕಾಮಿಡಿ ಟೈಮಿಂಗ್​ನಿಂದ ಕನ್ನಡಿರಗರನ್ನ ರಂಜಿಸ್ತಾ ಬಂದಿದ್ದಾರೆ.

 ಮೈಸೂರಿನಲ್ಲಿ ಹೈಟೆಕ್ ಫಿಲ್ಮ್ ಸಿಟಿ ಸಿದ್ದರಾಮಯ್ಯ ಘೋಷಣೆ, ಚಿತ್ರರಂಗಕ್ಕೆ ಡಿಕೆಶಿ ಖಡಕ್ ಎಚ್ಚರಿಕೆ!
 
ಸಾಧುಕೋಕಿಲ 10ಕ್ಕೂ ಅಧಿಕ ಸಿನಿಮಾಗಳನ್ನ ನಿರ್ದೇಶನ ಕೂಡ ಮಾಡಿದ್ದಾರೆ. ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ ಸಾಧುಕೋಕಿಲ. ಇವರ ಪ್ರತಿಭೆ ಬಗ್ಗೆ ಎರಡು ಮಾತೇ ಇಲ್ಲ. ಸಾಧುಕೋಕಿಲ ಸಾಧನೆ ಗುರುತಿಸಿ ಅವರಿಗೆ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು‌ ಪ್ರದರ್ಶಕ ಕಲೆಗಳ‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಕೂಡ ಲಭಿಸಿದೆ.
 
ಹೀಗಾಗಿ  ಡಾಕ್ಟರ್ ಸಾಧುಕೋಕಿಲ ಅವರ ಈ ಪ್ರತಿಭೆ ಮತ್ತು ಪರಿಶ್ರಮಕ್ಕೆ ಕೊಡುಗೆಯಾಗಿ ಅಕಾಡಮಿ ಅಧ್ಯಕ್ಷ ಸ್ಥಾನ ಸಿಕ್ಕಿದೆ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದ್ಯಾವುದು ಲೆಕ್ಕಿಕ್ಕಿಲ್ಲ. ಸಾಧು ನಮ್ಮ ಜೊತೆ ಮೆಕೆದಾಟು ಪಾದಯಾತ್ರೆಗೆ ಬಂದ್ರು. ಅದಕ್ಕೆ ಅಧ್ಯಕ್ಷ ಸ್ಥಾನ ಕೊಟ್ವಿ ಅಂತ ವೇದಿಕೆ ಮೇಲೆಯೇ ಹೇಳಿ ಸಾಧುವಿನ ಗೌರವವನ್ನ ಬಹಿರಂಗವಾಗಿ ಕಳೆದಿದ್ದಾರೆ ಡಿಕೆ ಶಿವಕುಮಾರ್.
 
ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದ್ರೂ ತಮ್ಮ ಪಕ್ಷಕ್ಕೆ ನಿಷ್ಟವಾಗಿರೋರಿಗೆ ಸ್ಥಾನಗಳನ್ನ ಕೊಡೋದು ಹೊಸತೇನೂ ಅಲ್ಲ. ಆದ್ರೆ ಅದನ್ನ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆ ಮೇಲೆ ಹೇಳ್ತಾರೆ ಅಂದ್ರೆ ಸಾಧು ಬಗ್ಗೆ ಅವರಿಗೆಷ್ಟು ಗೌರವ ಇದೆ ಅನ್ನೋದು ಗೊತ್ತಾಗುತ್ತೆ. ಅಲ್ಲಿಗೆ ಸಾಧುಕೋಕಿಲ ಅದೆಷ್ಟರ ಮಟ್ಟಿಗೆ ರಾಜಕಾರಣಿಗಳಿಗೆ ನಿಷ್ಟರಾಗಿ ನಡೆದುಕೊಂಡಿದ್ದಾರೆ ಅನ್ನೋದು ಕೂಡ ಗೊತ್ತಾಗುತ್ತೆ. ಅಷ್ಟೆಲ್ಲಾ ಯಾಕೆ ಸ್ವಾಮಿ ಸಾಧುಕೋಕಿಲ ಅಂದ್ರೆ ನಮ್ಮ ಡಿಸಿಎಂ ಸಾಹೇಬರಿಗೆ ಅದೆಷ್ಟು ಸದರ ಅಂದ್ರೆ ಕೈಗೆ ಅಂಟಿರೋ ಎಣ್ಣೆಯನ್ನ ವೇದಿಕೆ ಮೇಲೆಯೇ ಸಾಧು ತಲೆಗೆ ಸವರುವಷ್ಟು.

ಚಂದನವನದ ಮರ್ಯಾದೆ ಕಳೆದಿರಲ್ಲ,ಇದು ‘ಸಾಧು’ನಾ..?
ಅಸಲಿಗೆ ಡಿ.ಕೆ ಶಿವಕುಮಾರ್ ಚಿತ್ರರಂಗದವರ ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಅಂದಿದ್ದು ಇಡೀ ಚಿತ್ರರಂಗಕ್ಕೆ ಅಗೌರವ ಮಾಡಿದಂತೆ ಆಗಿದೆ. ಡಿ.ಕೆ ಶಿವಕುಮಾರ್ ಮಾತುಗಳನ್ನ ಸಮರ್ಥಿಸಿಕೊಂಡು ಅನೇಕರು ನಮ್ಮ ಸ್ಯಾಂಡಲ್​ವುಡ್ ತಾರೆಯರ ಮೇಲೆ ಹರಿಹಾಯ್ತಾ ಇದ್ದಾರೆ. ಒಂಥರಾ ಸರ್ಕಾರ Vs ಸ್ಯಾಂಡಲ್​ವುಡ್ ಅನ್ನೋ ವಾತಾವರಣ ನಿರ್ಮಾಣ ಆಗಿದೆ. ಇದಕ್ಕೆ ಸಾಧುನೇ ನೇರಾನೇರ ಕಾರಣ ಅಂತಿದ್ದಾರೆ ಚಿತ್ರರಂಗದ ಹಿರಿಯರು.

ಅಕಾಡೆಮಿ ಮಾಡಿದ ಎಡವಟ್ಟು, ಚಿತ್ರರಂಗದ ಮಾನ ಹರಾಜು!
ಹೌದು ಅನೇಕ ಹಿರಿಯ ಚಿತ್ರಕರ್ಮಿಗಳು ಹೇಳುವಂತೆ ಸಾಧುಕೋಕಿಲ ನೇತೃತ್ವದ ಅಕಾಡೆಮಿ ಯಾರಿಗೂ ಸೂಕ್ತ ಆಹ್ವಾನ ನೀಡಿಲ್ಲ. ಅನೇಕರ ಮನೆಗೆ ಕೊನೆ ಘಳಿಗೆಯಲ್ಲಿ ಆಹ್ವಾನ ಪತ್ರಿಕೆ ಹೋಗಿದೆ. ಒಂದು ವೇಳೆ ಬಿಗ್ ಸ್ಟಾರ್​ಗಳನ್ನ ವೇದಿಕೆಗೆ ಕರಿಸಲೇಬೇಕು ಅಂದ್ರೆ ಸಾಧುಕೋಕಿಲಗೆ ಯಾರು ತಾನೇ ಪರಿಚಯ ಇಲ್ಲ. ಎಲ್ಲಾ ಕಲಾವಿದರಿಗೂ ಸಾಧು ಆಪ್ತರೇ. ಇವರು ಕರೆದಿದ್ರೆ ಯಾರೂ ಬಾರದೇ ಇರ್ತಾ ಇರ್ಲಿಲ್ಲ. ಅಸಲಿಗೆ ಚಲನಚಿತ್ರೋತ್ಸವ ಉದ್ಘಾಟನೆಗೆ ಎಲ್ಲಾ ತಾರೆಯರು ಬರಲೇಬೇಕು ಅನ್ನೋ ನಿಯಮ ಎಲ್ಲೂ ಇಲ್ಲ. ಸಾಕಷ್ಟು ಜನ ಚಿತ್ರಕರ್ಮಿಗಳು ವೇದಿಕೆ ಮೇಲೆ ಹಾಜರಿದ್ರು. ಅಷ್ಟಾಗಿಯೂ ಡಿ.ಕೆ ಶಿ ಚಿತ್ರತಾರೆಯರ ಬಗ್ಗೆ ಅಗೌರವದ ಮಾತನಾಡಿದ್ದಾರೆ. ಇದಕ್ಕೆ ಸಾಧುಕೋಕಿಲನೇ ನೇರ ಕಾರಣ ಅಂದ್ರೆ ತಪ್ಪಾಗಲ್ಲ. ಸಾಧು ತಮ್ಮ ಮರ್ಯಾದೆ ಕಳೆದುಕೊಳ್ಳೋದ್ರ ಜೊತೆಗೆ ಇಡೀ ಚಿತ್ರರಂಗದ ಗೌರವವನ್ನ ಹರಾಜು ಹಾಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?