RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

Published : Apr 18, 2023, 06:01 PM ISTUpdated : Apr 18, 2023, 06:27 PM IST
RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

ಸಾರಾಂಶ

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ ಎಂದು ಸಿಂಪಲ್ ಸುನಿ CSK ಫ್ಯಾನ್ಸ್‌ಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 226 ರನ್ ಕಲೆಹಾಕಿ 227 ಗುರಿ ನೀಡಿತ್ತು. ಆ ಗುರಿ ಬೆನ್ನಟ್ಟಿದ  ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಮೂಲಕ 8 ರನ್‌ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಒಪ್ಪಿಕೊಂಡಿತು. ಆರ್‌ಸಿಬಿ ಸೋಲುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮೂಲಕ ಕಿತ್ತಾಟ ಶುರು ಮಾಡಿಕೊಂಡರು. ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿ ಅಭಿಮಾನಿಗಳ ಕಾಲೆಳೆದು, ಟ್ರೋಲ್ ಮಾಡಿ ಉರಿಸುತ್ತಿದ್ದಾರೆ. 

ಈ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳಿದ್ದ ಸುನಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೋಲಿನ ಬಳಿಕ ಸುನಿ ಸಿಎಸ್‌ಕೆ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ. ಸಿಂಪಲ್ ಸುನಿ ಆರ್‌ಸಿಬಿಯ ಅಪ್ಪಟ ಅಭಿಮಾನಿ. ಎಷ್ಟೇ ಸೋತರು, ಕಪ್ ಗೆಲ್ಲದಿದ್ದರೂ ಆರ್ ಸಿ ಬಿ ಮೇಲೆ ಪ್ರಾಣನೇ ಇದೆ ಅಂತಾರೆ ಸುನಿ. ಹೀಗಿರುವಾಗ ನಿನ್ನೆ ಸೋತ ಮ್ಯಾಚನ್ನು ಬಿಟ್ಟುಕೊಡುವ ಮಾತೆ ಇಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಸುನಿ, ಖುಷಿಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ ಎಂದು ಹೇಳಿದ್ದಾರೆ. 

ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ....; RCBಗೆ ಸಿಂಪಲ್ ಸುನಿ ಮನವಿ

'ಶುಭಾಶಯಗಳು csk. ಈ ಮ್ಯಾಚ್  ಧೋನಿಗೆ..ಖುಷಿಪಡಿ.. ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಮಾತ್ರ ಬರಬೇಡಿ. ನಮ್ ಹುಡುಗ್ರು ಒಳ್ಳೆ ಫೈಟ್ ಕೊಟ್ರು..ಕೊನೇಲಿ ಏನಾಯ್ತೋ.. ಮ್ಯಾಚ್ ಬಿಟ್ರು..' ಎಂದು ಹೇಳಿದ್ದಾರೆ. ಸುನಿ ಪೋಸ್ಟ್‌ಗ ಪರ ವಿರೋಧ ಚರ್ಚೆ ನಡೆಯುತ್ತಿದೆ. ಇದನ್ನು ಇಂಡಿಯಾ ಪಾಕಿಸ್ತಾನ ಅಂತ ಬಿಂಬಸಬೇಡಿ. ಎರಡು ರಾಜ್ಯಗಳು ಭಾರತದಲ್ಲೇ ಇರೋದು ಎಂದು ಹೇಳುತ್ತಿದ್ದಾರೆ.

IPL 2023: ಚೆನ್ನೈ ಎದುರು ಸೋಲಿನ ಬೆನ್ನಲ್ಲೇ ವಿರಾಟ್‌ ಕೊಹ್ಲಿಗೆ ಶಾಕ್ ನೀಡಿದ ಬಿಸಿಸಿಐ..!

 

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಆರ್ ಸಿ ಬಿ ಸೋತಾಗಲೂ ಸುನಿ ಪೋಸ್ಟ್ ಶೇರ್ ಮಾಡಿದ್ದರು. 'ಈ ಮ್ಯಾಚ್ ಅಷ್ಟೇ ಅಲ್ಲಾ ಬೇಕಾದರೆ 15ನೇ ತಾರೀಖು ಇರೋ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ. ಆದ್ರೆ 17ನೇ ತಾರಿಖು ನಡೆಯೋ ಮ್ಯಾಚ್ ಮಾತ್ರ ನಮ್ದೆ ಆಗ್ಬೇಕು. RCB ಕೆಂಪು CSK ಹಳದಿ ಸೇರಿದ ಸ್ಟೇಡಿಯಂಲಿ ಶಿಳ್ಳೆ ಎಲ್ಲಾ ನಮ್ ಕಹಳೆನೇ ಮೊಳಗಬೇಕು ಧೋನಿ ಮೇಲೆ ರೆಸ್ಪಕ್ಟ್ ಇದೆ. ಆದರೆ CSK ಮೇಲೆ ಜಿದ್ದಿದೆ. RCB ಮೇಲೆ ಪ್ರಾಣನೇ ಇದೆ' ಎಂದು ಬರೆದುಕೊಂಡಿದ್ದರು. ಆದರೆ ಸುನಿಯ ನಿರೀಕ್ಷೆ ಹುಸಿ ಮಾಡಿದೆ ಆರ್ ಸಿ ಬಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ