ಹೀರೋಯಿನ್ ಇಲ್ಲ, ಮೇಕಪ್ ಇಲ್ಲ.. ಆದರೂ ಗಮನ ಸೆಳೆಯುತ್ತಿರುವ ಈ ಕನ್ನಡ ಸಿನಿಮಾ ಯಾವುದು?

Published : May 23, 2026, 06:37 PM IST
Mangamaya Movie

ಸಾರಾಂಶ

ಕಾಶೀನಾಥ್‌ ಗರಡಿಯಲ್ಲಿ ಪಳಗಿದ ನಟ, ನಿರ್ದೇಶಕ ಪ್ರಸಾದ್‌ ಪುತ್ತೂರು ನಿರ್ದೇಶನದ ಚಿತ್ರ ‘ಮಂಗಮಾಯ’ ಇದೀಗ ಥಿಯೇಟರ್‌ನಲ್ಲಿದೆ. ಸಿನಿಮಾ ಬಗ್ಗೆ ನಿರ್ದೇಶಕ ಪ್ರಸಾದ್‌ ಪುತ್ತೂರು, ಶ್ರೀಸಾಮಾನ್ಯನೊಬ್ಬನ ಶಕ್ತಿಯನ್ನು ಹೇಳುವ ಸಸ್ಪೆನ್ಸ್‌ ಥ್ರಿಲ್ಲರ್‌.

ಕಾಶೀನಾಥ್‌ ಗರಡಿಯಲ್ಲಿ ಪಳಗಿದ ನಟ, ನಿರ್ದೇಶಕ ಪ್ರಸಾದ್‌ ಪುತ್ತೂರು ನಿರ್ದೇಶನದ ಚಿತ್ರ ‘ಮಂಗಮಾಯ’ ಇದೀಗ ಥಿಯೇಟರ್‌ನಲ್ಲಿದೆ. ಸಿನಿಮಾ ಬಗ್ಗೆ ನಿರ್ದೇಶಕ ಪ್ರಸಾದ್‌ ಪುತ್ತೂರು, ಶ್ರೀಸಾಮಾನ್ಯನೊಬ್ಬನ ಶಕ್ತಿಯನ್ನು ಹೇಳುವ ಸಸ್ಪೆನ್ಸ್‌ ಥ್ರಿಲ್ಲರ್‌. ಈ ಹಿಂದೆ ರಿಲೀಸ್‌ ಆದ ವೆಡ್ನೆಸ್‌ ಡೇಯಂಥಾ ಸಿನಿಮಾಕ್ಕಿಂತ ಸಂಪೂರ್ಣ ಭಿನ್ನ. ಇದು ಒಂದು ದಿನದಲ್ಲಿ ನಡೆಯುವ ಕಥೆ. ಸಿನಿಮಾದ ಹೈಲೈಟ್‌ ಕಥೆ ಮೂಡಿಸುವ ಕುತೂಹಲ.

ಥ್ರಿಲ್ಲರ್‌ಗೆ ಹಾಸ್ಯವನ್ನೂ ಸೇರಿಸಿ ಸಿನಿಮಾವನ್ನು ಒಂದೊಳ್ಳೆ ಮನರಂಜನಾತ್ಮಕ ಕಥೆಯಾಗಿಸಿದ್ದೇವೆ. ಕರಾವಳಿ ಭಾಗದಲ್ಲಿ ಈ ಸಿನಿಮಾವನ್ನು ಈಗಾಗಲೇ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದಿದ್ದಾರೆ. ಕಾಶಿನಾಥ್‌ ಅವರು ಇದ್ದಿದ್ದರೆ ನಮಗೆ ಉತ್ತಮ ಬೆಂಬಲ ಸಿಗುತ್ತಿತ್ತು. ಕೊಂಚ ಹೆಸರು ಮಾಡಿದ ಕಲಾವಿದರು ಶುರುವಿನಲ್ಲಿ ಉತ್ಸಾಹ ತುಂಬಿದರೂ ಸಿನಿಮಾ ಬೆಂಬಲಕ್ಕೆ ನಿಂತಿಲ್ಲ ಎಂದೂ ಬೇಸರ ತೋಡಿಕೊಂಡಿದ್ದಾರೆ.

ಇದು ಸುಮಾರು 127 ನಿಮಿಷಗಳ ಚಲನಚಿತ್ರವಾಗಿದೆ. ಒಟ್ಟಾರೆ 43 ದಿನಗಳಲ್ಲಿ ಚಿತ್ರೀಕರಣಗೊಂಡಿದ್ದು, ಸಣ್ಣ ವೆಚ್ಚದ, ನೈಜ ಘಟನೆ ಆಧಾರಿತ, ಒಂದೇ ದಿನ ನಡೆಯುವ ಘಟನೆಗಳ ಕಥಾ ಹಂದರ ಒಳಗೊಂಡಿದೆ ಎಂದು ಅವರು ಹೇಳಿದರು. ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ಉದ್ಯೋಗ ಅರಸಿ ಬೇಸತ್ತ ನಾಯಕ, ಕೊನೆಗೆ ಲಾಡ್ಡ್ ವೊಂದರಲ್ಲಿ ರೂಂ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾನೆ. 2ನೇ ಅಲೆಯಲ್ಲಿ ಕಪ್ಪು ಹಣ ತರಲು ಲಾಡ್ಜ್ ಗೆ ಬಂದಾಗ ಬ್ಯಾಗ್ ಮಂಗಮಾಯ ಆಗಿರುತ್ತದೆ. ನಂತರದ ರೋಚಕ ಘಟನೆಗಳನ್ನು ಸಿನಿಮಾ ಹೊಂದಿದೆ ಎಂದರು.

ಒಂದೇ ದಿನ ನಡೆಯುವ ಕಥಾ ಹಂದಾರ

‘ಮಂಗಮಾಯ’ ಸಿನೆಮಾ ಸಣ್ಣ ವೆಚ್ಚದ, ನೈಜ ಘಟನೆ ಆಧಾರಿತ, ಒಂದೇ ದಿನ ನಡೆಯುವ ಕಥಾ ಹಂದಾರವಾಗಿದ್ದು, ಯಾವುದೇ ಮೇಕಪ್‌ ಇಲ್ಲದೆ, ಹೀರೋಯಿನ್ ಇಲ್ಲದೆ, ಒಂದೇ ಲೊಕೇಷನ್‌ ಮತ್ತು ಒಂದೇ ಶೆಡ್ಯೂಲ್‌ನಲ್ಲಿ ಶೂಟ್‌ ಮಾಡಲ್ಪಟ್ಟ ಯುವ ಸಿನೆಮಾ ತಂಡದ ಪ್ರಾಮಾಣಿಕ ಪ್ರಯತ್ನ. ಈ ಸಿನೆಮಾದ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಕರಾವಳಿಯವರಾಗಿರುವುದಲ್ಲದೆ, ಹಲವು ಕರಾವಳಿಯ ಕಲಾವಿದರು, ತಂತ್ರಜ್ಞರ ಸಮಾಗಮದಲ್ಲಿ ಮೂಡಿಬಂದಿರುವ ಕರಾವಳಿ ಕನ್ನಡದ ಭಾಷಾ ಸೊಗಡು ಇರುವ ಚಿತ್ರ ಇದಾಗಿದೆ ಎಂದರು.

ಕಲಾವಿದರಾದ ರಂಜನ್‌ ಶೆಟ್ಟಿ, ರಾಧೇಶ್ ಶೆಣೈ ಉಡುಪಿ, ಪ್ರಕಾಶ್ ಶೆಣೈ ಮೈಸೂರು, ಪ್ರಸನ್ನ ಪುತ್ತೂರು, ಮಹಮ್ಮದ್‌ ಹನೀಫ್‌ ಹೂಟಗಳ್ಳಿ, ಅಕ್ಷತ್‌ ಅಮೀನ್, ಚಂದನ್ ಕುಮಾರ್, ಬಿ.ಅರುಣ್ ಶೆಣೈ ಮೈಸೂರು, ಬಿ.ಎನ್.ಸಿದ್ದು ಪ್ರಸನ್ನ, ನಿತಿನ್ ಅಗರ್ವಾಲ್, ಚೇತನ್ ಪುತ್ತೂರು, ಎಮ್.ಎನ್.ಮಂಜುನಾಥ್, ವಿಜಯಲಕ್ಷ್ಮೀ ಎಮ್ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ
Big Deal: ಭಾರತದ ಸಿನಿಮಾ ಇತಿಹಾಸದಲ್ಲೇ ಬಿಗ್ ಡೀಲ್‌.. 'ಇಷ್ಟೊಂದು ಕೋಟಿ' ಹಣಕ್ಕೆ ರಾಮಾಯಣ ರೈಟ್ಸ್‌ ಸೇಲ್‌?