
ಸ್ಯಾಂಡಲ್‌ವುಡ್-ಕಾಲಿವುಡ್-ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದ ಸೌಂದರ್ಯ ಸಾವಿನ ಸುದ್ದಿ ಇತ್ತೀಚೆಗಷ್ಟೇ ನಡೆದಂತಿದೆ. ಹೆಸರಿಗೆ ತಕ್ಕ ಸೌಂದರ್ಯ ಹಾಗೂ ನಟನೆಯಿಂದ ಕನ್ನಡಿಗರ ಹೃದಯದಲ್ಲಿ ಸದಾ ನೆನಪಲ್ಲಿ ಉಳಿಯುವ ಆಪ್ತ ನಟಿ. ಅಭಿನಯ, ರೂಪದೊಂದಿಗೆ ಹಿರಿಯ ಕಲಾವಿದರನ್ನೂ ಗೌರವಿಸುತ್ತಿದ್ದ ಗುಣ, ತಮಗೆ ಸೂಕ್ತವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದ ರೀತಿ ಅಭಿಮಾನಿಗಳನ್ನು ಮಾತ್ರವಲ್ಲದೇ ಚಿತ್ರರಂಗದವರನ್ನೂ ಗಮನ ಸೆಳೆಯುತ್ತಿತ್ತು. ಅವರೊಬ್ಬರು ಅಪ್ಪಟ ಚಿನ್ನದಂತಿದ್ದರು.
ಹೆಸರಿಗೆ ತಕ್ಕಂತೆ 'ಸೌಂದರ್ಯ'ದ ಖನಿಯಂತಿದ್ದಾರೆ ಆಪ್ತಮಿತ್ರ ಚೆಲುವೆ!
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೆಶಕ, ಬರಹಗಾರ ಪರುಚಾರಿ ಗೋಪಾಲಕೃಷ್ಣ ನಟಿ ಸೌಂದರ್ಯ ಬಗ್ಗೆ ಹೃದಯ ತುಂಬಿ ಮಾತನಾಡಿದ್ದಾರೆ. 'ಸೌಂದರ್ಯ ಅದ್ಭುತ ಕಲಾವಿದೆ. ಆಕೆಯನ್ನು ನೋಡಿದಾಗ ಹೆಂಡತಿಗಿಂತಲೂ ಇಂಥ ಸಹೋದರಿ ಇರಬೇಕಿತ್ತೆಂಬ ಭಾವನೆ ಮೂಡುತ್ತಿತ್ತು. ಒಬ್ಬ ನಟಿಯನ್ನು ನೋಡಿದರೆ ಅಂಥ ಭಾವನೆ ಮೂಡುವುದೇ ವಿಶೇಷ.' ಎಂದಿದ್ದಾರೆ. ಆಕೆಯ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಬಗ್ಗೆಯೂ ಹೇಳುತ್ತಾರೆ.
'ಸೌಂದರ್ಯ ವಿಮಾನ ಬಳಸಿ ಹೈದರಾಬಾದ್‌ಗೆ ಬರಬೇಕಿತ್ತು. ಆದರೆ ಆಪ್ತಮಿತ್ರ ಶೂಟಿಂಗ್ ಮುಗಿಸಿ ಬರುವಷ್ಟರಲ್ಲಿ ವಿಮಾನ ಮಿಸ್ ಆಯ್ತು. ಈ ಕಾರಣಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೈದರಾಬಾದ್‌ಗೆ ಬರುವುದಾಗಿ ನಿರ್ಧರಿಸಿದರು. ಅಕೆಯ ಸಾವಿನ ದಿನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಆಗೋಲ್ಲ. ಏಕೆಂದರೆ ಆ ದಿನ ನನ್ನ ತಾಯಿ ಆಸೆ ಈಡೇರಿಸಿದ ದಿನ. ಏಪ್ರಿಲ್ 17ರಂದು ನನಗೆ ಡಾಕ್ಟರೇಟ್ ಸಿಕ್ಕಿತು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿ ಪಡೆಯುವ ಸಂಭ್ರಮದಲ್ಲಿದ್ದೆ. ಆಗಲೇ ನನಗೆ ಸೌಂದರ್ಯ ಹೆಲಿಕಾಪ್ಟರ್‌ನಲ್ಲಿ ದುರಂತದಲ್ಲಿ ಮೃತಪಟ್ಟರು, ಎಂಬ ಸುದ್ದಿ ಬಂತು. ಸೌಂದರ್ಯ ಆ ವಿಶೇಷ ಕಾಪ್ಟರ್‌ನಲ್ಲಿ ಬಾರದಿದ್ದರೆ ಇಂದು ನಮ್ಮೊಂದಿಗೆ ಇರುತ್ತಿದ್ದರು' ಎಂದು ದುಃಖ ತೋಡಿಕೊಂಡಿದ್ದಾರೆ.
ಸೌಂದರ್ಯ ನಿಧನರಾದಾಗ 7 ತಿಂಗಳ ಗರ್ಭಿಣಿ?
'ದ್ವೀಪ', 'ಆಪ್ತಮಿತ್ರ' 'ಸಿಪಾಯಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ, ಚಿತ್ರರಂಗಕ್ಕೆ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಅದ್ಭುತ ಸೌಂದರ್ಯದೊಂದಿಗೆ, ಮನೋಜ್ಞ ಅಭಿನಯದಿಂದ ಚಿತ್ರರಂಗದಲ್ಲಿ ಅವರು ಬೇಗ ಬೆಳೆಯಲು ಸಹಕಾರಿಯಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.