
‘ಇದು ರಮೇಶ್ ಅರವಿಂದ್ ನಟನೆಯ 101ನೇ ಸಿನಿಮಾ. ಫೆ.21ಕ್ಕೆ ತೆರೆಗೆ ಬರುತ್ತಿದೆ. ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ನಾನು ಆ್ಯಕ್ಸಿಡೆಂಟ್ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡುವಾಗ ರಮೇಶ್ ಅರವಿಂದ್ ಜತೆಗೆ ಮತ್ತೆ ಇಂಥ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದೆ. ಅದು ಶಿವಾಜಿ ಸುರತ್ಕಲ್ ಮೂಲಕ ಈಡೇರಿದೆ’ ಎನ್ನುತ್ತಾರೆ ಆಕಾಶ್ ಶ್ರೀವಾಸ್ತವ್.
ರಮೇಶ್ ಅರವಿಂದ್ '100' ಚಿತ್ರದ ಪಾತ್ರಕ್ಕೆ ತ್ಯಾಗರಾಜನ ಇಮೇಜ್ ಇಲ್ಲ!
ಅಕಾಶ್ ಶ್ರೀವಾಸ್ತವ್ ಅವರು ನನ್ನ ಜತೆ ‘ಆ್ಯಕ್ಸಿಡೆಂಟ್’ ಚಿತ್ರದಲ್ಲಿ ಕೆಲಸ ಮಾಡಿದವರು. ಆ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟರು. ಮತ್ತೆ ಆ ರೀತಿಯ ಸಿನಿಮಾ ಮಾಡಲು ಆಗಲಿಲ್ಲ. ಈಗ ತೆರೆಗೆ ಬರಲು ಸಿದ್ಧವಾಗಿರುವ ‘ಶಿವಾಜಿ ಸುರತ್ಕಲ್’ ಸಿನಿಮಾ ಮೂಲಕ ಮತ್ತೊಮ್ಮೆ ಕ್ರೈಮ್ ಥ್ರಿಲ್ಲರ್ ಕತೆಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಚಿತ್ರದ ಟ್ರೇಲರ್ ನೋಡಿದವರು ‘ಆ್ಯಕ್ಸಿಡೆಂಟ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದಷ್ಟೇ ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸುತ್ತಿದೆ ಎಂದರೆ ಅದಕ್ಕೆ ಕಾರಣ ಚಿತ್ರದ ಟ್ರೇಲರ್.-ರಮೇಶ್ ಅರವಿಂದ್, ನಟ
ಈ ಚಿತ್ರವನ್ನು ಕೆಆರ್ಜಿ ಸ್ಟುಡಿಯೋ ಮೂಲಕ ಕಾರ್ತಿಕ್ ಗೌಡ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಚಿತ್ರದಲ್ಲಿ ಬರುವ ರಮೇಶ್ ಅರವಿಂದ್ ಅವರ ದೃಶ್ಯದ ಎರಡು ಫೋಟೋಗಳನ್ನು ಬಿಡುಗಡೆ ಮಾಡಿ ಇದರಲ್ಲಿ ವ್ಯತ್ಯಾಸ ಗುರುತಿಸುವ ಗೇಮ್ ನಡೆಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯತ್ಯಾಸ ಗುರುತಿಸುವ ಗೇಮ್ ಸಾಕಷ್ಟುವೈರಲ್ ಆಗಿತ್ತು.
ಶಿವಾಜಿ ಸುರತ್ಕಲ್ ಪೂರ್ತಿ ಡಿಫರೆಂಟು: ರಮೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.