ತೆರೆ ಮೇಲೆ ಅನ್‌​ಟೋಲ್ಡ್‌ ಪ್ರೇಮ ಕಥೆ 'ಮಾಂಜ್ರಾ'

Suvarna News   | Asianet News
Published : Feb 13, 2020, 09:31 AM ISTUpdated : Feb 17, 2020, 05:28 PM IST
ತೆರೆ ಮೇಲೆ ಅನ್‌​ಟೋಲ್ಡ್‌ ಪ್ರೇಮ ಕಥೆ 'ಮಾಂಜ್ರಾ'

ಸಾರಾಂಶ

ತಾನು ಪ್ರೀತಿ​ಸಿದ ಹುಡು​ಗಿ​ಗಾಗಿ ಬೆಂಗ​ಳೂ​ರಿ​ನಿಂದ ಕಾಲ್ಗೆಜ್ಜೆ ಕೊಂಡು ಹೋದ ಹುಡು​ಗ​ನಿಗೆ ಹುಡುಗಿ ಕಾಣ​ಲಿಲ್ಲ. ಆತ ತನ್ನ ಹುಡು​ಗಿ​ಯನ್ನು ಎಷ್ಟೇ ಹುಡು​ಕಿ​ದರೂ ಸಿಗ​ಲಿಲ್ಲ. ಆತ ಮುಂದೆ ಮಾನ​ಸಿಕ ಅಸ್ವಸ್ಥ​ನಾ​ಗು​ತ್ತಾನೆ. ಈಗಲೂ ಜೀವಂತ​ವಾ​ಗಿ​ರುವ ಈ ವ್ಯಕ್ತಿಯ ಹೆಸರು ಶಂಕ​ರಪ್ಪ. ಆಕೆಯ ನೆನ​ಪಿ​ನಲ್ಲಿ ಎಲ್ಲ​ವನ್ನೂ ಕಳೆ​ದು​ಕೊಂಡು ಹುಚ್ಚ​ನಾ​ಗಿ​ದ್ದಾನೆ. ಆ ಹುಡು​ಗಿಯ ಹೆಸರು ಪದ್ಮಾ.

2005ರಲ್ಲಿ ಬೆಳ​ಗಾವಿ ಜಿಲ್ಲೆಯ ಬೊಂಬಾ​ರಗ ಎನ್ನುವ ಹಳ್ಳಿ​ಯ​ಲ್ಲಿ ನಡೆದ ಈ ಪ್ರೇಮ ಕತೆ​ಯನ್ನು ಈಗ ತೆರೆ ಮೇಲೆ ತರು​ತ್ತಿ​ದ್ದಾರೆ ಮುತ್ತು​ರಾಜ್‌ ರೆಡ್ಡಿ. ಚಿತ್ರದ ಹೆಸರು ‘ಮಾಂಜ್ರಾ’.

ಈ ನೈಜ ಕತೆ​ಗೆ ಸಂಬಂಧಿ​ಸಿದ ಶಂಕರ್‌ ಅವ​ರನ್ನು ಚಿತ್ರದ ಪತ್ರಿ​ಕಾ​ಗೋ​ಷ್ಟಿಗೆ ಕರೆ​ತಂದು ಚಿತ್ರ​ತಂಡ ಪರಿ​ಚ​ಯಿ​ಸಿತು. ವೇದಿಕೆ ಮೇಲೆ ಕೂರಿ​ಸಿ​ದರೂ ಫೋಸ್ಟ​ರ್‌​ನಲ್ಲಿ ನೋಡು​ತ್ತಲೇ ಇದ್ದ ಶಂಕ​ರ್‌ಗೆ ಏನು ನೆನ​ಪಾ​ಯಿತೋ ಗೊತ್ತಿಲ್ಲ, ವೇದಿಕೆ ಮೇಲಿಂದ ದಿಢೀರ್‌ ಎಂದು ಇಳಿದು ಹೋದರು.

ಈ ವಾರವೂ 11 ಸಿನಿಮಾ ರಿಲೀಸ್‌;ಬಿಡುಗಡೆಯ ಅತಿವೃಷ್ಟಿಯಲ್ಲಿ ಒಳ್ಳೆಯ ಸಿನಿಮಾಗಳು ಕಾಣೆ!

ಹುಡುಗಿ ಕೆಳ ಜಾತಿಗೆ ಸೇರಿ​ದಾಕೆ. ಹುಡುಗ ಮೇಲ್ಜಾ​ತಿ​ಯ​ವನು. ಇವರ ಪ್ರೀತಿಗೆ ಜಾತಿ ಅಡ್ಡ ಬಂದು ಹುಡು​ಗನ ಕಡೆ​ಯ​ವರೇ ಹುಡು​ಗಿ​ಯನ್ನು ಏನೋ ಮಾಡಿ​ದ್ದಾರೆ ಎಂಬು​ದು ಸದ್ಯಕ್ಕೆ ಆ ಊರಿ​ನಲ್ಲಿ ಇರುವ ಅನು​ಮಾನ. ಮೇಲ್ಜಾತಿ ಹುಡು​ಗ​ನನ್ನು ಪ್ರೀತಿ​ಸಿದ ಹುಡುಗಿ ಕೊಲೆಯೋ, ಆತ್ಮ​ಹ​ತ್ಯೆಯೋ ತಿಳಿ​ಯದು. ಆಕೆ ತೀರಿ​ಕೊಂಡಿ​ದ್ದಾಳೆ.

ನಿಖಿಲ್ ರೇವತಿಗೆ ಹಾಕಿರುವ ಉಂಗುರದ ಬೆಲೆ ಇಷ್ಟೊಂದಾ?

ಈಗಲೂ ಅದೇ ಹಳ್ಳಿ​ಯಲ್ಲಿ ಮೂಲ ಕತೆಯ ನಾಯ​ಕಿಯ ಹೆತ್ತ​ವರು ವಾಸಿ​ಸು​ತ್ತಿದ್ದಾರೆ. ಅದೇ ಮನೆ​ಯಲ್ಲಿ ಚಿತ್ರೀ​ಕ​ರಣ ಮಾಡಿ​ದ್ದಾರೆ. ಜತೆಗೆ ಚಿತ್ರ​ದಲ್ಲಿ ಶಂಕರ್‌ ಅವ​ರನ್ನೂ ತೋರಿ​ಸಿ​ದ್ದಾರೆ. ಹೀಗೆ ಜಾತಿ ವಿಚಾ​ರಕ್ಕೆ ನಿಗೂ​ಢ​ವಾಗಿ ಸಾವು ಕಂಡ ಹುಡುಗಿ, ಮಾನ​ಸಿಕ ಅಸ್ವ​ಸ್ಥ​ನಾದ ಶಂಕರ್‌ ಕತೆ ಬಹು​ತೇ​ಕ​ರಿಗೆ ಗೊತ್ತಿಲ್ಲ. ಈ ಅನ್‌ ಟೋಲ್ಡ್‌ ಪ್ರೇಮ ಕತೆ​ಯನ್ನು ತೆರೆ ಮೇಲೆ ತರು​ತ್ತಿ​ದ್ದಾರೆ. ಈ ರಿಯಲ್‌ ಕತೆಗೆ ರಂಜಿತ್‌ ಸಿಂಗ್‌ ಹಾಗೂ ಅಪೂರ್ವ ಜೋಡಿ​ಯಾ​ಗಿ​ದ್ದಾರೆ. ಚಿತ್ರೀ​ಕ​ರಣ ಮುಗಿದ್ದು, ಆಡಿಯೋ ಬಿಡು​ಗಡೆ ಮಾಡಿ​ಕೊಂಡಿ​ರುವ ಈ ನೈಜ ಕತೆಯ ‘ಮಾಂಜ್ರಾ’ ಸಿನಿಮಾ ಸದ್ಯ​ದಲ್ಲೇ ತೆರೆ ಮೇಲೆ ಬರ​ಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?