
ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ನಮ್ಮಿಂದ ಅಗಲಿದರೂ ಇನ್ನೂ ಇಲ್ಲೇ ಎಲ್ಲೋ ಇದ್ದಾರೆ ಎಂಬ ಭಾವನೆ ಹುಟ್ಟುತ್ತದೆ. ಜೂನಿಯರ್ ಚಿರು ಆಗಮನದ ನಂತರ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಿದೆ. ಕಷ್ಟದ ಸಮಯದಲ್ಲಿ ಮೇಘನಾಗೆ ಬೆನ್ನೆಲುಬಾಗಿ ನಿಂತ ಸ್ನೇಹಿತರು ಅಪಾರ.
ಮೇಘನಾ ರಾಜ್ ಪುತ್ರನಿಗೆ ಕಿಚ್ಚ ಸುದೀಪ್ ಕೊಟ್ಟ ಸ್ಪೇಷಲ್ ಗಿಫ್ಟ್!
ಇತ್ತೀಚಿಗೆ ನಿರ್ದೇಶಕ ಪನ್ನಗಾಭರಣ ಪುತ್ರ ವೇದ್ ಮೇಘನಾ ರಾಜ್ ಹಾಗೂ ಜೂನಿಯರ್ ಚಿರುನನ್ನು ಭೇಟಿ ಮಾಡಬೇಕೆಂದು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. 'ಬಾಕ್ಸ್ ನೋಡೋಕೆ ಬರೋದು. ಪಾಪ ನೋಡೋಕೆ ಬರೋದ ಮೇಘು' ಎಂದು ನಗು ನಗುತ್ತಾ ಕಂದಮ್ಮ ಮಾತನಾಡಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೇಘನಾ ಶೇರ್ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಜೂನಿಯರ್ ಚಿರು ತೊಟ್ಟಿಲು ಶಾಸ್ತ್ರ ಮಾಡಲಾಗಿತ್ತು. ಮಗುವಿಗೆ ಹೆಸರು ಇನ್ನೂ ಫೈನಲ್ ಮಾಡಿಲ್ಲ ಎಂದು ಮೇಘನಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಚಿರು ಸ್ನೇಹಿತರು ಮೇಘನಾಗೆ ಜೊತೆಯಾಗಿ ನಿಂತಿದ್ದಾರೆ. ಸೀಮಂತ ಶಾಸ್ತ್ರದಲ್ಲಿ ಚಿರು ಫೋಟೋವನ್ನು ಪೋಸ್ಟರ್ ರೀತಿಯಲ್ಲಿ ನಿಲ್ಲಿಸುವ ಪ್ಲಾನ್ ಮಾಡಿದ್ದೇ ಪನ್ನಗಾಭರಣ ಎನ್ನಲಾಗಿದೆ.
ತಮಿಳಿನ ರೀಮೆಕ್ ಚಿತ್ರಕ್ಕೆ ಚಿರಂಜೀವಿ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
ಮೇಘನಾ ಇನ್ನು ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗಲೇ ಪತಿ, ಸ್ಯಾಂಡಲ್‌ವುಡ್‌ನ ಭರವಸೆಯ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.