
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ 'ಪಡ್ಡೆ ಹುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆನಂತರ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಜೊತೆ 'ವಿಷ್ಣುಪ್ರಿಯಾ' ಸಿನಿಮಾದಲ್ಲಿ ಅಭಿನಯಿಸುತ್ತಿರುವಾಗಲೇ, ಮತ್ತೊಂದು ಚಿತ್ರದ ಶೀರ್ಷಿಕೆ ಅನೌನ್ಸ್ ಮಾಡಿದ್ದಾರೆ.
ಶ್ರೇಯಸ್ ಕೆ.ಮಂಜು ಹೊಸ ಸಿನಿಮಾ ಹೆಸರು ರಾಣ!
ನಿರ್ದೇಶಕ ನಂದಕಿಶೋರ್ ಮತ್ತು ಶ್ರೇಯಸ್ ಮಂಜು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ 'ರಾಣಾ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಈ ಹಿಂದೆಯೇ ರಾಕಿಂಗ್ ಸ್ಟಾರ್ ಯಶ್ ಚಿತ್ರಕ್ಕೆ ಬಳಸಲಾಗಿದೆ, ಹರ್ಷ ನಿರ್ದೇಶನ ಮಾಡುವುದು ನಿಶ್ಚಯವಾಗಿದೆ, ಎಂದು ಹೇಳಲಾಗುತ್ತಿದೆ. ಟೈಟಲ್ ವಿವಾದದ ಬಗ್ಗೆ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.
'ರಾಣಾ ಹೆಸರು ನಿರ್ಮಾಪಕ ಕೆ ಮಂಜು ಅವರ ಬಳಿ ಇತ್ತು. ಚಿತ್ರದ ಕಥೆ ಅಂತಿಮವಾದ ಮೇಲೆ ಸೂಕ್ತ ಹೆಸರಿಗಾಗಿ ಹುಡುಕುತ್ತಿದ್ದಾಗ, ಮಂಜು ಅವರು ನಿರ್ಮಾಣ ಸಂಸ್ಥೆಯ ಬಳಿ ಇರುವ ಟೈಟಲ್‌ಗಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಎಂದಾಯಿತು. ಆಗ ನಮಗೆ ಸೂಕ್ತ ಎಂದೆನಿಸಿದ್ದು ರಾಣಾ. ನಾವು ಮಾಡುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ರಾಣಾ ಒಪ್ಪುತ್ತಾರೆ, ಯಾರಿಗಾದರೂ ಬೇಸರ ಮಾಡಬೇಕು ಎಂದಲ್ಲ. ಅವರ ಬಳಿಯಿಂದ ಹೆಸರನ್ನು ಎತ್ತಿಕೊಂಡು ಬರಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ,' ಟೈಟಲ್ ಕೇಳಿದಾದ ಶ್ರೇಯಸ್‌ಗೆ ಮತ್ತು ಆತ ಮಾಡುವ ಪಾತ್ರಕ್ಕೆ ಸೂಟ್ ಆಗುತ್ತದೆ ಎನಿಸಿತ್ತು,' ಎಂದು ಮುಹೂರ್ತ ಸಮಯದಲ್ಲಿ ನಂದಕಿಶೋರ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.