ಸಂಜು ವೆಡ್ಸ್‌ ಗೀತಾ 2 ಕ್ಲೈಮ್ಯಾಕ್ಸ್ ಭಾಗಕ್ಕೆ ಸ್ವಿಟ್ಜರ್‌ಲ್ಯಾಂಡ್‌ ರಾಣಿ ಹಾಗೂ ಯೋಧನ ಕಥೆ ಸ್ಫೂರ್ತಿ: ನಾಗಶೇಖರ್‌

By Kannadaprabha News  |  First Published Jul 25, 2024, 12:07 PM IST

‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟ್‌ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಕೊನೆಯ ಹಂತದ ಚಿತ್ರೀಕರಣ ನೆದರ್‌ಲ್ಯಾಂಡ್‌ನಲ್ಲಿ ನಡೆಯಲಿದೆ.


‘ನಮ್ಮ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ರೈತರ ಕಥೆ ಕೇಳಿದರೆ ಕಷ್ಟವಾಗುತ್ತದೆ. ಏರದ ಮಾರುಕಟ್ಟೆ ದರ, ಒದ್ದಾಡಿಸುವ ಸಮಸ್ಯೆಗಳು, ಸದಾ ಹಸಿದೇ ಇರುವ ಹೊಟ್ಟೆ, ಇವರಿಂದ ಕಡಿಮೆ ಬೆಲೆಗೆ ರೇಷ್ಮೆ ಖರೀದಿಸಿ ತಮ್ಮ ಬ್ರಾಂಡ್‌ನಡಿ ದುಬಾರಿ ಬೆಲೆಗೆ ಮಾರುವ ವರ್ಗ.. ಇಂಥಾ ದಾರುಣ ಬದುಕನ್ನು ಪೊಯೆಟಿಕ್‌ ಆಗಿ ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಇಲ್ಲಿ ಪ್ರೇಮಕಥೆಯೊಂದಿಗೆ ರೈತ ಹೋರಾಟದ ಎಳೆಯೂ ಇದೆ’.

- ಹೀಗೆಂದವರು ನಿರ್ದೇಶಕ ನಾಗಶೇಖರ್‌. ಅವರ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟ್‌ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಕೊನೆಯ ಹಂತದ ಚಿತ್ರೀಕರಣ ನೆದರ್‌ಲ್ಯಾಂಡ್‌ನಲ್ಲಿ ನಡೆಯಲಿದೆ. ‘ಕ್ಲೈಮ್ಯಾಕ್ಸ್‌ ಭಾಗಕ್ಕೆ ಸ್ವಿಟ್ಜರ್‌ಲ್ಯಾಂಡ್‌ ರಾಣಿ ಹಾಗೂ ಯೋಧನ ಕಥೆ ಸ್ಫೂರ್ತಿಯಾಗಿದೆ’ ಎಂದೂ ನಾಗಶೇಖರ್‌ ಹೇಳಿದರು. ನಾಯಕ ಶ್ರೀನಗರ ಕಿಟ್ಟಿ, ನಿರ್ಮಾಪಕ ಚಲಪತಿ ಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Latest Videos

undefined

ಶ್ರೀನಗರ ಕಿಟ್ಟಿ- ರಚಿತಾ ರಾಮ್ ವಿವಾಹ ವಾರ್ಷಿಕೋತ್ಸವ: ಸಂಜು, ಗೀತಾ ಜೊತೆ ತುಪ್ಪದ ಬೆಡಗಿ ಡ್ಯಾನ್ಸ್​!

ಸ್ಯಾಂಡಲ್‌ವುಡ್‌ ಸಂಜು ಫ್ರಮ್‌ ಶಿಡ್ಲಘಟ್ಟ: ನಾಗಶೇಖರ್‌ ನಿರ್ದೇಶನದ, ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಮೊದಲ ಹಂತದ ಶೂಟಿಂಗ್‌ ಮುಗಿಸಿಕೊಂಡಿದೆ. ಛಲವಾದಿ ಕುಮಾರ್‌ ನಿರ್ಮಾಣ, ಸತ್ಯ ಹೆಗಡೆ ಕ್ಯಾಮೆರಾ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆಯ ಈ ಚಿತ್ರಕ್ಕೆ ಎರಡನೇ ಹಂತದ ಶೂಟಿಂಗ್‌ ತಯಾರಿಗಳು ನಡೆಯುತ್ತಿವೆ. ಇಷ್ಟಕ್ಕೂ ಪಾರ್ಟ್‌ 2 ಕತೆ ಏನೆಂಬ ಪ್ರಶ್ನೆ ಎಲ್ಲರದ್ದು.

ಸಂಜು ಫ್ರಮ್‌ ಶಿಡ್ಲಘಟ್ಟ: ಪಾರ್ಟ್‌ 2 ಕತೆ ಸಿಕ್ಕಾಪಟ್ಟೆ ಹೊಸದಾಗಿದೆಯಂತೆ. ಈ ಬಾರಿ ಮಳೆ, ಹಸಿರು, ತಣ್ಣನೆಯ ಪ್ರದೇಶಕ್ಕಿಂತ ನಿಗಿ ನಿಗಿ ಸುಡುವ ಬಯಲಿನಲ್ಲಿ ಕತೆ ತೆರೆದುಕೊಳ್ಳಲಿದೆಯಂತೆ. ಯಾಕೆಂದರೆ ಸಂಜು ಅಥಾರ್ತ್‌ ಚಿತ್ರದ ನಾಯಕನ ಊರು ಶಿಡ್ಲಘಟ್ಟ. ಮೊದಲ ಭಾಗದಲ್ಲಿ ಊಟಿಯಲ್ಲಿದ್ದ ಸಂಜು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಊರಿಗೆ ಹೋಗಿದ್ದು ಯಾಕೆ, ಇಲ್ಲಿ ಸಂಜು ಏನು ಮಾಡುತ್ತಾರೆ, ಅಲ್ಲದೆ ಗೀತಾ ಮತ್ತೆ ಹೇಗೆ ಸಿಗುತ್ತಾಳೆ ಎನ್ನುವುದೇ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಆತ್ಮ.

ಗುಡ್ಡಗಾಡಿನ ಪ್ರದೇಶದ ಕತೆ: ಬೆಟ್ಟ ಗುಡ್ಡಗಳಿಂದ ಕೂಡಿದ, ಕುರುಚುಲು ಕಾಡಿನಂತಿರುವ ಶಿಡ್ಲಘಟ್ಟದ ಕತೆಯೊಂದು ತೆರೆ ಮೇಲೆ ಮೂಡುತ್ತಿದೆ. ಇದುವರೆಗೂ ಯಾರೂ ಕೂಡ ಗಮನಿಸಿದ, ಗ್ಲೋಬಲ್‌ ಮಟ್ಟದ ಪರಂಪರೆಯೊಂದನ್ನು ನಿರ್ದೇಶಕ ನಾಗಶೇಖರ್‌ ತೆರೆ ಮೇಲೆ ತರುತ್ತಿದ್ದಾರೆ. ಆ ಪರಂಪರೆ ಯಾವುದು, ಇದಕ್ಕೂ ಮತ್ತು ಚಿತ್ರದ ನಾಯಕ ಸಂಜುಗೆ ಇರುವ ನಂಟು ಏನೆಂಬುದೇ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಕೇಂದ್ರಬಿಂದು. ನೈಜತೆ, ದೇಸಿತನ ಮತ್ತು ಸಿನಿಮಿಯ ತಿರುವುಗಳೇ ಚಿತ್ರದ ಶಕ್ತಿಯಾಗಿದೆ ಎಂಬುದು ನಾಗಶೇಖರ್‌ ಮಾತು.

ಸ್ವಿಜರ್‌ಲ್ಯಾಂಡ್‌ ಹಿಮದಲ್ಲಿ ಕುಣಿದಾಡಿದ ಡಿಂಪಲ್ ಕ್ವೀನ್: ಸ್ವಿಸ್ ಟ್ರೆಡಿಷನಲ್ ಡ್ರೆಸ್‌ನಲ್ಲೇ ರಚ್ಚು ಕಾಣಿಸಿಕೊಂಡಿದ್ದೇಕೆ?

ಜರ್ನಿ ಟು ಸ್ವಿಟ್ಜರ್ಲ್ಯಾಂಡ್‌: ಶಿಡ್ಲಘಟ್ಟದ ಗ್ಲೋಬಲ್‌ ಕತೆಯೊಂದು ಸ್ವಿಟ್ಜರ್ಲ್ಯಾಂಡ್‌ ವರೆಗೂ ಪ್ರಯಾಣ ಮಾಡುತ್ತದೆ. ಇಲ್ಲಿನ ಒಂದು ಸಾಮಾನ್ಯ ಪ್ರದೇಶದ ಊರಿನ ಹುಡುಗ ಸ್ವಿಟ್ಜರ್ಲ್ಯಾಂಡ್‌ವರೆಗೂ ಯಾಕೆ ಹೋಗುತ್ತಾನೆ ಎನ್ನುವ ಒಂದು ರೋಕ ಪ್ರಯಾಣ ಇಲ್ಲಿದೆ. ಮುಂದೆ ಅಲ್ಲಿಂದ ಬಾಂಬೆಗೆ ಬರುತ್ತಾನೆ. ಈ ಪ್ರಯಾಣದಲ್ಲಿ ಸಂಜು ಜತೆಗೆ ಗೀತಾ ಎಲ್ಲಿ ಸೇರಿಕೊಳ್ಳುತ್ತಾಳೆ ಎಂಬುದನ್ನು ತುಂಬಾ ಸೊಗಸಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ನಾಗಶೇಖರ್‌.

click me!