'ಆನೆ ಮುಂದೆ ಬೊಗಳುವ ನಾಯಿಗಳು': ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು

Published : Nov 06, 2024, 08:04 PM ISTUpdated : Nov 07, 2024, 07:00 PM IST
'ಆನೆ ಮುಂದೆ ಬೊಗಳುವ ನಾಯಿಗಳು': ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು

ಸಾರಾಂಶ

ನಿರ್ದೇಶಕ ಗುರುಪ್ರಸಾದ್ ಅವರ ಬಗ್ಗೆ ನಟ ಜಗ್ಗೇಶ್ ನೀಡಿದ್ದ ಹೇಳಿಕೆಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಗ್ಗೇಶ್ ಟೀಕಾಕಾರರನ್ನು 'ಆನೆ ಮುಂದೆ ಬೊಗಳುವ ನಾಯಿಗಳು' ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.06) : ಕನ್ನಡ ಚಿತ್ರರಂಗದ ವಿಶೇಷ ಹಾಗೂ ವಿಭಿನ್ನ ನಿರ್ದೇಶಕರಾಗಿದ್ದ ನಿರ್ದೇಶಕ ಗುರುಪ್ರಸಾದ್ ಬೆಂಗಳೂರಿನ ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಇದರ ಬೆನ್ನಲ್ಲಿಯೇ ಗುರುಪ್ರಸಾದ್ ಜೀವನ ಶೈಲಿ ಹಾಗೂ ಶೋಕಿ ಜೀವನದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ಅವರ ವಿರುದ್ಧ ಹಲವರು ಟೀಕೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟ್ರೋಲ್ ಮಾಡಲು ಮುಂದಾಗಿದ್ದರು. ತಮ್ಮ ಬಗ್ಗೆ ಟೀಕೆ ಮಾಡಿದವರನ್ನು ಇದೀಗ ನಟ ಜಗ್ಗೇಶ್ ಅವರು ಆನೆಯ ಮುಂದೆ ಬೊಗಳುವ ನಾಯಿಗೆ ಹೋಲಿಕೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜಗ್ಗೇಶ್ ಅವರು, ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತವೆ. ಅದಕ್ಕೆ Scientific ಕಾರಣ "ಭಯ". ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳದಿದೆ ಎಂಬ ಸಂಕಟ. ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು' ಎಂದು ಬರೆದುಕೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಗುರು ಪ್ರಸಾದ್‌ ಬಗ್ಗೆ ಮಾತನಾಡಿದ್ದು ನಂಗೆ ತುಂಬಾ ನೋವಾಯ್ತು; ಜಗ್ಗೇಶ್‌ ಬಗ್ಗೆ ಅಸಮಾಧಾನ ಹೊರ ಹಾಕಿದ ಹುಚ್ಚ ವೆಂಕಟ್!

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜಗ್ಗೇಶ್ ವಿರುದ್ಧದ ಟೀಕೆಗಳು:
ಜಗ್ಗೇಶ್ ಪ್ರಕಾರ ಅವರು ಮಾತ್ರ ಸಾಚಾ ಅಂತೆ...ಬೇರೆ ಅವ್ರು ಎಲ್ಲ ಕಚಡಾ ಅಂತೆ.
ಇವತ್ತು ಸತ್ತಿದ್ದು ಕೇವಲ #ಗುರುಪ್ರಸಾದ್ ಅವರು ಮಾತ್ರವಲ್ಲ ನಟ #ಜಗ್ಗೇಶ್ ಅವರ ವ್ಯಕ್ತಿತ್ವವೂ ಕೂಡ..! ಎಲುಬಿಲ್ಲದ ನಾಲಿಗೆ..!
ಜಗ್ಗೇಶ್ ಮೇಲೆ ತುಂಬಾ ಗೌರವ ಇತ್ತು ಆದ್ರೆ ಇಷ್ಟು ಅಸಯ್ಯ ಮನಷ್ಯ ಅಂತ ಇವಾಗ್ಲೆ ಅನ್ಸಿದ್ದು.
ಜಗ್ಗಣ್ಣ ಅಲ್ಲಾ ಇವ ' ಗುದ್ಧನ್ನ'  - ನೀಚ.
ಸೋತಾಗ ಮಾತನಾಡಿದ್ದು ತೃಪ್ತಿ ಸಿಗದೆ, ಸತ್ತಾಗಲೂ ಮಾತನಾಡಿದ ಮನಸ್ಥಿತಿಗಳಿಗೆ... ಭಾವಪೂರ್ಣ ಶ್ರದ್ಧಾಂಜಲಿ..

ಇದನ್ನೂ ಒದಿ:  ಬಿಎಂಟಿಸಿ ಬಸ್ ಚಾಲಕನ ಹೃದಯಾಘಾತ: 50 ಜನರಿರುವ ಬಸ್‌ನಲ್ಲಿ ಮುಂದಾಗಿದ್ದು ದುರಂತ!

ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದಲ್ಲದೇ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ವಿಡಿಯೋ ಮಾಡಿ ಹಾಗೂ ಮಾಧ್ಯಮಳ ಮುಂದೆ ಬಂದು ನಟ ಜಗ್ಗೇಶ್ ವಿರುದ್ಧ ಟೀಕೆ ಮಾಡಿದ್ದರು. ಈ ಸಂಬಂಧಪಟ್ಟ ವಿಡಿಯೋವೊಂದತಲ್ಲಿ 'ಕಾಲಾಯ ತಸ್ಮೈ ನಮಃ.. ಇವತ್ತು ಯಮ ಗುರಪ್ರಸಾದ್ ಮನೆ ಬಾಗಿಲಲ್ಲಿ ಇದ್ದ, ನಾಳೆ ಯಾರ ಮನೆಯ ಮುಂದೆ ಬೇಕಾದರೂ ಬರಬಹುದು. ವೇಯ್ಟ್ ಅಂಡ್ ಸೀ.., ನಟ ಜಗ್ಗೇಶ್‌ಗೆ ಕಮ್‌ಬ್ಯಾಕ್ ಜೀವನ ಕೊಟ್ಟಂತಹ ಗುರು @ ಗುರುಪ್ರಸಾದ್ ಅವರಿಗೆ ಒಳ್ಳೆಯ ಬಳುವಳಿ ಕೊಟ್ಟೆ. ನಿನಗೆ ಕೆರೆತ ಬಂತಾ, ಕಿವಿಯಲ್ಲಿ ರಕ್ತ ಬರುತ್ತಿದೆಯಾ.? ನಿನ್ನ ತಿನ್ನುವ ಅನ್ನದ ತಟ್ಟೆ ಕಿತ್ತುಕೊಳ್ಳುತ್ತಿದ್ದನಾ? ಎಂತಹ ವಿಕೃತವಾದ ಮನಸ್ಸು ನಿಂದು. ಇದನ್ನು ನಾನು ನಂಬಲೂ ಸಾಧ್ಯವಾಗುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದರು.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?