ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗೆಯಾಗಿದೆ. ಚಿತ್ರದ ಕತೆ ಏನು, ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರ ಹಾಗೂ ಮೇಕಿಂಗ್ ಹೇಗಿರುತ್ತದೆ ಎನ್ನುವುದರ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ (James) ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗೆಯಾಗಿದೆ. ಚಿತ್ರದ ಕತೆ ಏನು, ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರ ಹಾಗೂ ಮೇಕಿಂಗ್ (Making) ಹೇಗಿರುತ್ತದೆ ಎನ್ನುವುದರ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ (Chetan Kumar) ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಜೇಮ್ಸ್' ಶೂಟಿಂಗ್ ಸಮಯದಲ್ಲಿ ಪುನೀತ್ ಸರ್ ಆಕ್ಷನ್ ಸೀಕ್ವೆನ್ಸ್ ಪೋಷನ್ಸ್‌ನಲ್ಲಿ ಮಾಡಿದಂತಹ ವಿಡಿಯೋ ಕ್ಲಿಪ್ಸ್‌ಗಳನ್ನು ತಮ್ಮ ಮೊಬೈಲ್‌ಗೆ ಹಾಕಿಕೊಂಡು ನೋಡುತ್ತಾ ಖುಪಿಪಡುತ್ತಿದ್ದರು. ಚಿತ್ರದ ಎಲ್ಲಾ ಫೈಟ್ ಸೀನ್ ಅವರ ಮೊಬೈಲ್ನಲ್ಲಿತ್ತು. ಇಡೀ ಸಿನಿಮಾವನ್ನು ಅಪ್ಪು ಅವರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು. ಪ್ರತಿದಿನ ನಗುವಿನಿಂದಲೇ ಸೆಟ್‌ಗೆ ಬರುತ್ತಿದ್ದರು. ಯಾರ ಮೇಲೆಯೂ ಒಂಚೂರು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ನಾನು ಈ ವಿಚಾರದಲ್ಲಿ ತುಂಬಾ ಲಕ್ಕಿ. ಚಿತ್ರೀಕರಣದಲ್ಲಿ ಶೂಟ್ ಮಾಡಿದಂತಹ ಎಲ್ಲ ವಿಡಿಯೋಗಳನ್ನು ಪುನೀತ್ ಸರ್ ನೋಡಿದ್ದಾರೆ. ಆದರೆ ಪೂರ್ತಿ ಚಿತ್ರವನ್ನು ಅವರು ನೋಡಲಿಲ್ಲವಲ್ಲ ಎಂಬ ಕೊರಗು ಇದ್ದರೂ ಅಪ್ಪು ಸರ್ ಈ ಚಿತ್ರವನ್ನು ಮೇಲಿನಿಂದ ನೋಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ.
ಅಪ್ಪು ಸರ್ ಕೆರಿಯರ್‌ನಲ್ಲಿ ಮಾಡದೇ ಇರುವಂತಹ ಎಕ್ಸ್‌ಪೆರಿಮೆಂಟ್‌ಗಳನ್ನು 'ಜೇಮ್ಸ್' ಚಿತ್ರದಲ್ಲಿ ಮಾಡಿದ್ದಾರೆ. ಚೇತನ್ ನಿನಗೆ ಏನು ಮಾಡಬೇಕು ಅನ್ಸುತ್ತೆ ಮಾಡು ಎಂದು ನಂಬಿಕೆ ಇಟ್ಟು ನನಗೆ ಹೇಳಿದ್ದರು. ಅಪ್ಪು ಅವರ ಇಷ್ಟು ವರ್ಷದಲ್ಲಿ ಅವರು ಏನು ಮಾಡಿಲ್ಲವೋ ಅಷ್ಟು ಎಕ್ಸ್‌ಪೆರಿಮೆಂಟ್ಸ್‌ಗಳನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಈ ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ವಿಶೇಷವಾಗಿ ಪುನೀತ್ ಚಿತ್ರಗಳಲ್ಲಿ ಒಂದು ಹೇರ್‌ಸ್ಟೈಲ್ ಇರುತ್ತೆ. ಆದರೆ 'ಜೇಮ್ಸ್' ಚಿತ್ರದಲ್ಲಿ ಡಬಲ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಲ್ಜರ್ ಗೆಟಪ್‌ನಲ್ಲಿರುವ ಪುನೀತ್ ಅವರನ್ನು ಮೊದಲು ನೋಡಿದ್ದು ಅಶ್ವಿನಿ ಮೇಡಂ. ಆಯುಧ ಪೂಜೆ ಹಾಗೂ ವಿಜಯದಶಮಿ ಸಂದರ್ಭದಲ್ಲಿ ಹಬ್ಬವನ್ನು ಬಿಟ್ಟುಬಂದು ಪುನೀತ್ ಸರ್ ಚಿತ್ರಕ್ಕೋಸ್ಕರ ಸಾಂಗ್ ಮಾಡಿಕೊಟ್ಟಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಾನು ತುಂಬಾನೇ ಲಕ್ಕಿ ಎಂದು ಚೇತನ್ ತಿಳಿಸಿದ್ದಾರೆ.
undefined
ಬ್ಯುಸಿನೆಸ್‌ಗಿಂತ ಭಾವನೆ ದೊಡ್ಡದ್ದು, ಪುನೀತ್ ರಾಜ್‌ಕುಮಾರ್ James Teaser ರಿಲೀಸ್!
'ಜೇಮ್ಸ್' ಚಿತ್ರದ ಬಜೆಟ್ ವಿಚಾರಕ್ಕೆ ಬಂದರೆ ನಿರ್ಮಾಪಕರು ಯಾವುದೇ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ವಿಶೇಷವಾಗಿ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಪುನೀತ್ ಸರ್ ಅವರ ದೊಡ್ಡ ಅಭಿಮಾನಿ. ಅಪ್ಪು ಸರ್ ಪ್ರತಿಸಲ ಈ ಚಿತ್ರ ಏನೋ ಬೇರೆ ತರಹ ಕಾಣಿಸ್ತಿದೆ ಅಂತಾ ಹೇಳುತ್ತಿದ್ದರು. ಚಿತ್ರದ ಪ್ರತಿಯೊಂದು ಫ್ರೇಮ್‌ಗಳನ್ನು ಡಿಐ ಸ್ಯಾಂಪಲ್ ನೋಡಿ ಚೆಕ್ ಮಾಡುತ್ತಿದ್ವಿ. ಇವೆಲ್ಲಾವನ್ನು ನಾವು ಅಪ್ಪು ಸರ್‌ಗೆ ತೋರಿಸ್ತಿದ್ವಿ. ಈ ಚಿತ್ರ ಬೇರೆ ಲೆವಲ್‌ನಲ್ಲಿ ಇದೆ ಎಂಬ ಕಾನ್ಫಿಡೆಂಟ್ ಅವರಿಗೆ ಮೊದಲಿನಿಂದಲೂ ಇತ್ತು. ಅಪ್ಪು ಸರ್ ಇವಾಗ ಇದ್ದಿದ್ರೆ ಈ ಚಿತ್ರವನ್ನ ಬೇರೆ ಲೆವಲ್‌ನಲ್ಲಿ ಸೆಲೆಬ್ರೆಟ್ ಮಾಡುತ್ತಿದ್ವಿ. ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಆಕ್ಷನ್ ಇದ್ದು, ಒಟ್ಟು 4 ಹಾಡುಗಳು ಚಿತ್ರದಲ್ಲಿವೆ. ಮುಖ್ಯವಾಗಿ ಅಪ್ಪು ಸರ್‌ದು ಡ್ಯುಯೆಟ್ ಸಾಂಗ್ ಪ್ಲ್ಯಾನ್ ಮಾಡಿದ್ದೆ. ಆದರೆ ಆ ಅವಕಾಶ ಸಿಗಲಿಲ್ಲ. ಆ ಡ್ಯುಯೆಟ್ ಹಾಡನ್ನು ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡುತ್ತೇವೆ. ಮಾತ್ರವಲ್ಲದೇ ಇಂಟ್ರೊಡಕ್ಷನ್ ಹಾಡನ್ನ ಅಪ್ಪು ಸರ್ ಬ್ಯಾಂಗ್ ಆಗಿ ಮಾಡಿಕೊಟ್ಟಿದ್ದಾರೆ ಎಂದು ಚೇತನ್, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಪುನೀತ್ ಅವರೇ ಹೇಳಿದಂತೆ ಅವರ ಹುಟ್ಟುಹಬ್ಬಕ್ಕೆ (Birthday) ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಮಾ.17ಕ್ಕೆ ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲೂ 'ಜೇಮ್ಸ್' ತೆರೆ ಮೇಲೆ ಬರುವುದು ಪಕ್ಕಾ. ಈ ಕಾರಣಕ್ಕೆ ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸುತ್ತಿದ್ದೇವೆ. ತಾನು ಸೋಲ್ಜರ್ ಪಾತ್ರದಲ್ಲಿ ನಟಿಸಬೇಕು ಎಂಬುದು ಪುನೀತ್ ಅವರಿಗೆ ಇದ್ದ ಬಹು ವರ್ಷಗಳ ಕನಸು. ಅವರ ಅಭಿಮಾನಿಯಾಗಿ, ಅವರ ಕನಸು ಅರ್ಥ ಮಾಡಿಕೊಂಡ ನಿರ್ದೇಶಕನಾಗಿ ಅವರನ್ನು ನಾನು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ತೋರಿಸಿದ್ದೇನೆ. ಇಡೀ ಚಿತ್ರದಲ್ಲಿ ಅವರು ಸೈನಿಕನಾಗಿ ಕಾಣಿಸಲ್ಲ. ವಿಶೇಷ ಸಂರ್ಭದಲ್ಲಿ ಈ ಪಾತ್ರದಲ್ಲಿ ಎಂಟ್ರಿ ಕೊಡುತ್ತಾರೆ.
Puneeth Rajkumar ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ರೋಮಾಂಚನಕಾರಿಯಾಗಿತ್ತು: ಚೇತನ್ ಕುಮಾರ್
ಸೋಲ್ಜರ್ ಪಾತ್ರದಲ್ಲಿ ನಟಿಸಬೇಕೆಂಬುದು ಪುನೀತ್ ಕನಸು: ದೇಶವೇ ಆರಾಧಿಸುವ, ಅಭಿಮಾನಿಸುವ ನಾಯಕ ನಟನ ಜತೆ ಎರಡುವರೆ ವರ್ಷ ಪ್ರಯಾಣಿಸಿದ್ದೇನೆ, ‘ಜೇಮ್ಸ್ ’ ಎನ್ನುವ ಸಿನಿಮಾ ಮಾಡಿದ್ದೇನೆ ಎಂಬುದೇ ನನ್ನ ಭಾಗ್ಯ. ಅವರು ಇಲ್ಲ ಎನ್ನುವ ನೋವು ಇದ್ದೇ ಇರುತ್ತದೆ. ಆದರೆ, ಅವರು ತಮ್ಮ ಚಿತ್ರಗಳ ಮೂಲಕ ನಮ್ಮೊಂದಿಗೆ ಇರುತ್ತಾರೆ. ಆ ಧೈರ್ಯವೇ ‘ಜೇಮ್ಸ್’ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಅಪ್ಪು ಫಾರ್ ಎವರ್ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದಾರೆ.