
ಗಾನವಿ ಲಕ್ಷ್ಮಣ್ (Ganavi Laxman) ಹಾಗೂ ಚಕ್ರವರ್ತಿ (Chakravarti) ಜೋಡಿಯ 'ಭಾವಚಿತ್ರ' (Bhavachitra) ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಅವಿನಾಶ್ (Avinash) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಗಿರೀಶ್ ಕುಮಾರ್ (Girish Kumar) ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥೆ ಹೊಂದಿರುವ ಚಿತ್ರ ನಮ್ಮ 'ಭಾವಚಿತ್ರ'.
ಈಗ ಎಲ್ಲರ ಬಳಿ ಮೊಬೈಲ್ ನಲ್ಲಿ ಕ್ಯಾಮೆರಾ ಇರುತ್ತದೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೀನಿ. ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರವೇ ಮುಖ್ಯ. ಎಲ್ಲರಿಗೂ ಹಿಡಿಸುವ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕರ ಮಾತು.
'ಭಾವಚಿತ್ರ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ಗಾನವಿ, 'ನಾನಿಲ್ಲಿ ತುಂಬ ಸ್ಟ್ರಾಂಗ್ ಆಗಿರುವ ಪಾತ್ರ ಮಾಡಿದ್ದೇನೆ. ಆರ್ಕಲಾಜಿಸ್ಟ್ ಪಾತ್ರ ನಿರ್ವಹಣೆ ಮಾಡಿದ್ದೀನಿ. ಆ ಪಾತ್ರ ನ್ಯಾಯದ ಪರವಾಗಿ ಇರುತ್ತದೆ. ಈ ಸಿನಿಮಾದ ಕಥೆ ಇಷ್ಟ ಆಯ್ತು ಅದಕ್ಕಾಗಿ ಒಪ್ಪಿಕೊಂಡೆ. 'ಮಗಳು ಜಾನಕಿ' ಧಾರಾವಾಹಿ ಮಾಡುವಾಗಲೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಈ ಸಿನಿಮಾದ ಕಥೆಯನ್ನು ನಿರ್ದೇಶಕರು ನಿರೂಪಣೆ ಮಾಡಿರುವ ಶೈಲಿ ಅದ್ಭುತವಾಗಿದೆ. ನನ್ನ ಪಾತ್ರ ಹಾಗೂ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದು ಅಂದುಕೊಂಡಿದ್ದೀನಿ' ಎಂದು ಹೇಳುತ್ತಾರೆ.
Thalaivar 169: ಮಾಸ್ ಲುಕ್ನಲ್ಲಿ ಕಾಣಿಸಿಕೊಂಡ ರಜನಿಕಾಂತ್: ತಲೈವರ್ ಲುಕ್‌ಗೆ ಫ್ಯಾನ್ಸ್ ಫಿದಾ!
ವಿಭಿನ್ನ ಕಥೆಯ ಮೂಲಕ ಉತ್ತಮ ಚಿತ್ರವೊಂದನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕರು. ನನ್ನ ಪಾತ್ರ ಕೂಡ ಜನರ ಮನಸ್ಸಿಗೆ ಹತ್ತಿರವಾಗಲಿದೆ' ಎಂದು ಚಿತ್ರದ ನಾಯಕ ಚಕ್ರವರ್ತಿ ಹೇಳಿದ್ದಾರೆ. 'ಭಾವಚಿತ್ರ' ಸಿನಿಮಾವು 'ಮನೆ ಮಂದಿಯೆಲ್ಲರೂ ಕುಳಿತು ನೋಡುವಂತಹ ಕಥೆಯಾಗಿದ್ದು, ಇದರಲ್ಲಿ ಭಾವನಾತ್ಮಕ ಕಥೆ, ಲವ್ ಹೀಗೆ ಎಲ್ಲವೂ ಇದೆ. ಜತೆಯಲ್ಲಿ ಟೆಕ್ನಿಕಲ್ ಅಂಶಗಳನ್ನು ಬಳಸಿಕೊಂಡು ಕಥೆ ಹೇಳುವಂತಹ ಪ್ರಯತ್ನ ಮಾಡಿದ್ದೇವೆ. 70 ರಿಂದ 80 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ' ಎಂದು ನಿರ್ದೇಶಕ ಗಿರೀಶ್ ಕುಮಾರ್ ತಿಳಿಸಿದ್ದಾರೆ.
ಈ ಚಿತ್ರಕ್ಕೆ ವಿನಾಯಕ ನಾಡಕರ್ಣಿ ಬಂಡವಾಳ ಹೂಡಿದ್ದು, ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು ಮಾಡಿದ್ದಾರೆ. ಚಿತ್ರ ನೋಡಿ ನನಗಂತೂ ಖುಷಿಯಾಗಿದೆ. ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್, ನಿರ್ದೇಶಕ ಗಿರೀಶ್ ಕುಮಾರ್, ಕಾರ್ತಿಕ್, ವಿನಾಯಕ್ ನಾಡಕರ್ಣಿ, ಗಿರೀಶ ಬಿಜ್ಜಳ್ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಶೇಷವಾಗಿ ಈ ಚಿತ್ರದ ಕಥೆಯಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಇದ್ದು, ಅದು ಎಲ್ಲರ ಗಮನ ಸೆಳೆಯುತ್ತದೆ ಎಂಬ ಅಭಿಪ್ರಾಯ ಚಿತ್ರತಂಡದಾಗಿದೆ. 'ಭಾವಚಿತ್ರ'ಕ್ಕೆ ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜಯ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.
Vaishnavi Gowda ನಟನೆಯ 'ಬಹುಕೃತ ವೇಷಂ' ಚಿತ್ರದ ರಿಲೀಸ್ ಡೇಟ್ ಫಿಕ್ಸ್!
ಇನ್ನು ಈ ಚಿತ್ರದ ಜೊತೆಗೆ 'ಬೈಟು ಲವ್' (By Two Love) ಚಿತ್ರವು ಇಂದು ತೆರೆಕಾಣುತ್ತಿದ್ದು, ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಒಟ್ಟಾಗಿ ಅಭಿನಯಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. 'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟವರು ಧನ್ವೀರ್. 'ಕಿಸ್' ಚಿತ್ರದ ಮೂಲಕ ಶ್ರೀಲೀಲಾ ಚಿತ್ರರಂಗದದಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ಇದೀಗ ಇಬ್ಬರೂ 'ಬೈಟು ಲವ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್ (Hari Santhosh) ಆಕ್ಷನ್ ಕಟ್ ಹೇಳಿದ್ದು, ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.