ವಿಷ್ಣು ಸ್ವಂತ ಮನೆ ಬಿಟ್ಟು ಚೆನ್ನೈಗೆ ಹೋದ:.. 'ವೀಕೆಂಡ್' ಭಾರ್ಗವ ಹೇಳಿಕೆಗೆ ಭಾರತಿ ಹೇಳಿದ್ದೇನು?

ಎಲ್ಲಾ ಕಾಲದಲ್ಲಿ ಎಲ್ಲಾನೂ ಕಾಲ ಅಂದ್ರೆ ಟೈಂ ಮರೆಸುತ್ತೆ.. ಟೈಂ ಮುಂದೆ ಎಲ್ಲಾನೂ ಹೋಗುತ್ತೆ, ಟೈಂ ಈಸ್‌ ದ ಹೀರೋ & ಟೈಂ ಈಸ್‌ ದ ಎಲಿಮೆಂಟ್..' ಎಂದಿದ್ದಾರೆ ಹಿರಿಯ ನಿರ್ದೇಶಕ ಭಾರ್ಗವ..

Director Bhargava talk about Vishnuvardhan in Weekend with Ramesh show

ಕನ್ನಡದ ಹಿರಿಯ ನಿರ್ದೇಶಕ ಭಾರ್ಗವ (Bharagava)ಅವರು 'ವೀಕೆಂಡ್ ವಿತ್ ರಮೇಶ್' ಶೋದಲ್ಲಿ ಮೂಡಿಬಂದ ನಟಿ ಭಾರತಿಯವರ (Bharathi Vishnuvardhan) ಸಂಚಿಕೆಯಲ್ಲಿ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಭಾರೀ ವೈರಲ್ ಆಗುತ್ತಿವೆ. ನಟ ವಿಷ್ಣುವರ್ಧನ್ ಬಗ್ಗೆ ಹಿರಿಯ ನಿರ್ದೇಶಕ ಭಾರ್ಗವ ಅವರು ಮಾತನ್ನಾಡಿದ್ದಾರೆ. ಅದಕ್ಕೆ ವಿಷ್ಣುವರ್ಧನ್ (Vishnuvardhan) ಪತ್ನಿ ಹಾಗೂ ನಟಿ ಭಾರತಿಯವರು ರಿಯಾಕ್ಟ್ ಮಾಡಿದ್ದಾರೆ. ಹಾಗಿದ್ದರೆ ಭಾರ್ಗವ ಹಾಗೂ ಭಾರತಿಯವರು ವೀಕೆಂಟ್ ಎಪಿಸೋಡ್‌ನಲ್ಲಿ ಅದೇನು ಹೇಳಿದ್ದಾರೆ, ನೋಡಿ.. 

ನಿರ್ದೇಶಕರಾದ ಭಾರ್ಗವ ಅವರು 'ಒಂದಿನ ಏನಾಯ್ತು ಅಂದ್ರೆ, ಬೆಂಗಳೂರಿನ ಕಪಾಲಿ ಥಿಯೇಟರ್‌ ಹತ್ರ ವಿಷ್ಣು ಹೋಗ್ತಾ ಇದಾನೆ. ಅವ್ನ ಹತ್ರ ಹೆರಾಲ್ಡ್ ಕಾರಿತ್ತು. ಆ ಹೆರಾಲ್ಡ್ ಕಾರಲ್ಲಿ ಆತ ಹೋಗ್ತಾ ಇದ್ದಾಗ ಅಲ್ಲಿ ನಿಲ್ಲಿಸಿಬಿಟ್ಟಿದಾನೆ. ಅಲ್ಲಿ ಅವ್ನ ಕಾರಿಂದ ಇಳಿಸಿ, ಅವ್ನ ಕೆನ್ನೆ ಮೇಲೆ ಹೊಡೆದು ಹೋದ್ರು.. ಮಾರನೇ ದಿನ ನನ್ ಹತ್ರ ಹೇಳಿದ, ಹಿಂಗ್ ಅಯ್ತು ಕಣೋ ಅಂತ.. ನಾನು 'ನೀನ್ ಯಾಕೋ ಕಾರು ನಿಲ್ಲಿಸ್ದಿ, ಇಲ್ಲ ನೀನ್ಯಾಕೋ ಆ ಕಡೆ ಹೋದಿ..' ಅಂತ ಅಂದೆ.. ಇಷ್ಟೆಲ್ಲಾ ನೋವು ಅನುಭವಿಸಿದ.. 

Latest Videos

ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್‌-ನಾಗೇಂದ್ರ; ನಟ ವಿಷ್ಣುವರ್ಧನ್!

ಆಮೇಲೆ ಕಾಲಕ್ರಮೇಣ, ಎಲ್ಲಾ ಕಾಲದಲ್ಲಿ ಎಲ್ಲಾನೂ ಕಾಲ ಅಂದ್ರೆ ಟೈಂ ಮರೆಸುತ್ತೆ.. ಟೈಂ ಮುಂದೆ ಎಲ್ಲಾನೂ ಹೋಗುತ್ತೆ, ಟೈಂ ಈಸ್‌ ದ ಹೀರೋ & ಟೈಂ ಈಸ್‌ ದ ಎಲಿಮೆಂಟ್..' ಎಂದಿದ್ದಾರೆ ಹಿರಿಯ ನಿರ್ದೇಶಕ ಭಾರ್ಗವ. ಅವರ ಮಾತಿನ ಬಳಿಕ ನಟಿ ಹಾಗು ವಿಷ್ಣುವರ್ಧನ್ ಪತ್ನಿ ಭಾರತಿ ಅವರು 'ನಾನು ಹೇಳಿದ್ನಲ್ಲಾ, ಏನೇ ಆದ್ರೂ ಈ ಜೀವನದಲ್ಲಿ ಒಳ್ಳೇದೇ ಆಗುತ್ತೆ.. ಅನ್ಸಲ್ವಾ? ಇವ್ರು ಇಷ್ಟು ಬೆಳೆಯೋದಕ್ಕೆ ಕಾರಣನೇ ಅದು ಇರ್ಬಹುದು.. ಯಾವುದನ್ನೂ ಯಾರೂ ಬೇಕಂತ ಮಾಡಲ್ಲ.. ತಿಳಿದೋ ತಿಳಿದೇನೋ ಕೆಲವೊಮ್ಮೆ ಟೈಂ ಎಲ್ಲಾನೂ ಮಾಡ್ಸುತ್ತೆ.. ಯಾಕೆ ನಡೀತು, ಯಾಕ್ ಹೀಗಾಯ್ತು..? ದೇವರಿಗಷ್ಟೇ ಗೊತ್ತು..' ಎಂದಿದ್ದಾರೆ ಭಾರತಿ. 

ವಿಷ್ಣು ಅದೆಷ್ಟು ನೋವು ಅನುಭವಿಸಿದಾನೆ ಅನ್ನೋದು ನನಗೆ ಗೊತ್ತು.. ಈ ಕಷ್ಟ, ನೋವನ್ನು ಅವ್ನು ಅನುಭವಿಸಿ ಆತ ತನ್ನ ಸ್ವಂತ ಮನೆಯನ್ನ ಬಿಟ್ಟು ಚೆನ್ನೈಗೆ ಹೋದ.. ಚೆನ್ನೈನಿಂದ ಮತ್ತೆ ಕನ್ನಡದಲ್ಲಿ ಶೂಟಿಂಗ್ ಬಂತು ಅಂದ್ರೆ ಅಶೋಕ ಹೊಟೆಲ್‌ಗೆ ಬರೋನು.. ಆವಾಗ್ಲೂ ಅಷ್ಟೇನೇ, ಅವ್ನು ಯಾವಾಗ್ಲೂ ಏನೂ ಮಾತಾಡ್ತಾನೇ ಇರ್ಲಿಲ್ಲ.. ರಾಜ್‌ಕುಮಾರ್ ಅಭಿಮಾನಿಗಳಿಗೂ ಅದ್ರ ಬಗ್ಗೆ ಏನೂ ಗಮನ ಇಲ್ಲ. ಈ ಕಡೆ ವಿಷ್ಣು ಅಭಿಮಾನಿಗಳಲ್ಲಿ ಕೂಡ ಏನೂ ಇಲ್ಲ. 

ಚಂದನ್ ಶಟ್ಟಿ-ಸಂಜನಾ ಆನಂದ್‌ ಗಾಸಿಪ್: ಕ್ಲಾರಿಟಿ ಬಳಿಕವೂ ಬರುತ್ತಿದೆ ಕಾಮೆಂಟ್.. ಯಾಕೆ ಹೀಗೆ..!?

ಕೊನೆಗೊಮ್ಮೆ ಎಲ್ರೂ ಒಂದಾದ್ರು.. ಅವ್ರೆಲ್ರೂ ಎಷ್ಟು ಒಂದಾಗಿದಾರೆ ಅಂದ್ರೆ, ರಾಜ್‌ಕುಮಾರ್ ಅವ್ರು ವಿಷ್ಣುವರ್ಧನ್ ಚಿತ್ರಕ್ಕೆ ಬಂದು ಹಾಡಿದ್ದಾರೆ. ವಿಷ್ಣುವರ್ಧನ್ ನಟನೆಯ 'ಜನನಿ ಜನ್ಮಭೂಮಿ' ಚಿತ್ರಕ್ಕೆ ರಾಜ್‌ಕುಮಾರ್ ಬಂದು ವಿಷ್ಣುವರ್ಧನ್ ಚಿತ್ರಕ್ಕೆ ಹಾಡಿದಾರೆ. ಇಲ್ಲಿ ಮಧ್ಯೆ ಇದ್ದವ್ರು ಪೆಟ್ರೋಲ್ ಹಾಕಿದ್ರು, ಕಡ್ಡಿ ಗೀರಿದ್ರು, ಬಾಂಬ್ ಹಾಕಿದ್ರು.. ಇದ್ರಿಂದ ತೊಂದ್ರೆ ಅನುಭವಿಸಿದವ್ನು ವಿಷ್ಣುನೇ.. ' ಎಂದಿದ್ದಾರೆ ವಿಷ್ಣುವರ್ಧನ್ ಹಾಗೂ ಡಾ ರಾಜ್‌ಕುಮಾರ್ ಇಬ್ಬರಿಗೂ ಆಪ್ತರಾಗಿದ್ದ ಭಾರ್ಗವ ಅವರು. 

vuukle one pixel image
click me!