ಫ್ರಾಡ್ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೋಸ್ಟ್ ಹಾಕಿದ ಶರಣ್ಯ ಶೆಟ್ಟಿ. ನಿಜಕ್ಕೂ ಏನ್ ಆಯ್ತು?
ಕನ್ನಡ ಚಿತ್ರರಂಗದ ನಟಿ ಹಾಗೂ ಮಾಡೆಲ್ ಆಗಿರುವ ಶರಣ್ಯ ಶೆಟ್ಟಿ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ನಟಿಯ ಗಮನಕ್ಕೆ ಬಂದಿದ್ದು ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕ್ಲಾರಿಟಿ ಕೊಟ್ಟಿದ್ದಾರೆ. ಹಣದ ವಂಚನೆ ಮಾಡುತ್ತಿರುವವರು ದೂರು ನೀಡಲು ಮುಂದಾಗಿದ್ದಾರೆ.
ಹೌದು! ನಟಿ ಶರಣ್ಯಾ ಶೆಟ್ಟಿ ಹೆಸರನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ವಾಟ್ಸಪ್‌ನಲ್ಲಿ ವಂಚನೆ ಮಾಡುತ್ತಿದ್ದಾರೆ. ಶರಣ್ಯ ಶೆಟ್ಟಿಯಾದ ನಾನು ನಿಮ್ಮೊಟ್ಟಿಗೆ ಕೊಲಾಬೋರೇಷನ್ ( ಪ್ರಮೋಷನ್) ಮಾಡಿ ಕೊಡುತ್ತೀನಿ ಇಂತಿಷ್ಟು ಅಂತ ಹಣ ಕೊಡಬೇಕು ಎಂದು ಮೆಸೇಜ್ ಮಾಡಲಾಗಿತ್ತು. ನಿಜಕ್ಕೂ ಇದು ಶರಣ್ಯ ಶೆಟ್ಟಿನೇ ಅಂದುಕೊಂಡು ಅಮಾಯಕರು ಎಷ್ಟು ಹಣ ಕಳುಹಿಸಬೇಕು ಎಂದು ಕೇಳಿಕೊಂಡು ಆನ್‌ಲೈನ್ ಪೇಮೆಂಟ್ ಮಾಡಿಬಿಟ್ಟಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಶರಣ್ಯ ಗಮನಕ್ಕೆ ಬಂದಿದೆ. ಹೀಗಾಗಿ ಖದೀಮರ ವಂಚನೆ ಫೋಟೋ ಸಮೇತ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಸ್ಥಾನಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ; ಸಂಭಾವನೆ ಎಷ್ಟು?
'ನನ್ನ ಹೆಸರನ್ನು ದುರುಪಯೋಗ ಪಡೆಸಿಕೊಂಡು ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಕೆಲವು ಖದೀಮರು. ಹಣ ಕೆಳುವುದು ಅಥವಾ ಹಣ ಬೇಡಿಕೆ ಇಡುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಮಾಡುತ್ತಿರುವವರ ವಿರುದ್ಧ ಖಾನೂನು ಮೊರೆ ಹೋಗುವ ನಿರ್ಧಾರ ಮಾಡಿದ್ದೀನಿ. ಸೈಬರ್ ಕ್ರೈ ಡಿಪಾರ್ಟ್ಮೆಂಟ್ ಅವರಿಗೆ ನಾನು ದೂರು ನೀಡುತ್ತೀನಿ. ನನ್ನ ಸಮಾಜದಲ್ಲಿ ನಡೆಯುವ ಕೆಟ್ಟ ಕೆಲಸಗಳಿಗೆ ಶಿಕ್ಷೆ ಆಗಲೆ ಬೇಕು. ದಯವಿಟ್ಟು ಸೋಷಿಯಲ್ ಮೀಡಿಯಾದಲ್ಲಿ ನೀವು ಇದನ್ನು ಶೇರ್ ಮಾಡಿ' ಎಂದು ಶರಣ್ಯ ಬರೆದುಕೊಂಡಿದ್ದಾರೆ.
ಏಳೇಳು ಜನ್ಮಕ್ಕೂ ಇದೇ ನಂಗೆ ಗಿಫ್ಟ್; ಅನುಪಮಾ ಗೌಡ ಮುಖದ ಹಚ್ಚೆ ಹಾಕಿಸಿಕೊಂಡ ತಾಯಿ!
2021ರಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶರಣ್ಯ ಶೆಟ್ಟಿ ..ಸ್ಫೂಕಿ ಕಾಲೇಜ್ ಮತ್ತು ಕೃಷ್ಣ ಪ್ರಣಯಂ ಸಖಿ ಚಿತ್ರದಲ್ಲಿ ನಟಿಸಿದ್ದಾರೆ. ಮಿಸ್ ಸೌತ್ ಇಂಡಿಯಾ 2018 ಹಾಗೂ ಮಿಸ್ ಬ್ಯೂಟಿಫುಲ್ ಸ್ಮೈಲ್ 2018 ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ನಡೆದ ಮಿಸ್ ಕ್ವೀನ್ ಸ್ಪರ್ಧಿಯಲ್ಲಿ ಭಾಗವಹಿಸಿದ್ದರು. ಹಾಗೆ 2019ರ ಮಿಸ್ ಸೌತ್ ಇಂಡಿಯಾ ಟೈಟಲ್ ಪಡೆದಿದ್ದಾರೆ. ಗಟ್ಟೆಮೇಳ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದರು. ಅದಾದ ಮೇಲೆ ಇಂಡಸ್ಟ್ರಿಗೆ ಕಾಲಿಟ್ಟು ಸಖತ್ ಹೆಸರು ಮಾಡಿದ್ದಾರೆ.
ಬೇಸಿಗೆ ಹೆಚ್ಚಾಯ್ತು ಅಂತ ಎಳನೀರು ಕುಡಿಯುವವರೇ ಎಚ್ಚರ...ಈ ಸಮಸ್ಯೆ ಬಗ್ಗೆ ಗೊತ್ತಿರಲಿ!