
ಚಂದನ್ ಶೆಟ್ಟಿ (Chandan Shetty) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸೂತ್ರಧಾರಿ ಸಿನಿಮಾದ ಪ್ರೆಸ್‌ಮೀಟ್ ಅನೇಕ ಸುದ್ದಿಗಳ ಸಂಗ್ರಹವಾಗಿ ಹೊರಹೊಮ್ಮಿದೆ. ಈ ಪ್ರೆಸ್‌ಮೀಟ್ ಸ್ಟೇಜ್‌ನಲ್ಲಿ ಚಂದನ್ ಶೆಟ್ಟಿ, ಅಪೂರ್ವ ಹಾಗೂ ಸಂಜನಾ ಆನಂದ್ (Sanjana Anand) ಇದ್ದರು. ಸಹಜವಾಗಿಯೇ ಚಂದನ್ ಶೆಟ್ಟಿಯವರಿಗೆ ಅವರ ಮಾಜಿ ಲವರ್ ಹಾಗೂ ಪತ್ನಿ ನಿವೇದಿತಾ ಜೊತೆಗಿನ ಮದುವೆ-ಡಿವೋರ್ಸ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಕಾಮೆಂಟ್‌ಗಳು ಹರಿದಾಡುತ್ತಿವೆ.
ಹಾಗಿದ್ದರೆ ಅವೆಲ್ಲಾ ಏನನ್ನು ಸೂಚಿಸುತ್ತಿವೆ. ಯಾರಾದ್ರೂ ಸಿಂಗ್ ಆಗಿದ್ರೆ ಸಾಕು, ಅವರನ್ನು ಮಿಂಗಲ್ ಮಾಡಲು ಸೋಷಿಯಲ್ ಮೀಡಿಯಾ ಪ್ರಯತ್ನಿಸುತ್ತಿದೆಯಾ? ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇಬ್ಬರಿಗೂ ಮತ್ತೆ ಮದುವೆ ಮಾಡಲು ಹೊರಟಂತಿದೆ ಈ ಸೋಷಿಯಲ್ ಮೀಡಿಯಾ ಎಂಬ ಮಾಯಾವಿ! ಅದಕ್ಕೆ, ಕೇಳಿದ ಪ್ರಶ್ನೆಗೆ ಚಂದನ್ ಶೆಟ್ಟಿ ನೇರಾನೇರ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೆ ಚಂದನ್ ಶೆಟ್ಟಿಉ ಹೇಳಿದ್ದೇನು?
'ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿರುವಂತೆ ನಾನು ಮತ್ತು ಸಂಜನಾ ಮದುವೆ ಆಗುತ್ತಿಲ್ಲ. ಅವರು ನನ್ನ ಸಿನಿಮಾದಲ್ಲಿ ಹಾಗೂ 'ಡ್ಯಾಶ್' ಹಾಡಿನಲ್ಲಿ ನಟಿಸಿರುವ ಸಹನಟಿ ಅಷ್ಟೇ. ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ. ಅದೆಲ್ಲಾ ಕೇವಲ ಊಹಾಪೋಹದ ಕಟ್ಟುಕತೆ ಅಷ್ಟೇ..' ಎಂದಿದ್ದಾರೆ ಚಂದನ್ ಶೆಟ್ಟಿ. ಅಲ್ಲೇ ಪಕ್ಕದಲ್ಲಿದ್ದ ಸಂಜನಾ ಕೂಡ ನಮ್ಮಿಬ್ಬರ ಮಧ್ಯೆ ಸಹನಟರ ಒಳ್ಳೆಯ ಸಂಬಂಧವಿದೆ. ನನಗೆ ಚಂದನ್ ಒಳ್ಳೆಯ ಫ್ರೆಂಡ್, ಜೊತೆಗೆ ಅವರು ನನಗೊಬ್ಬ ಒಳ್ಳೆಯ ಬ್ರದರ್' ಎಂದಿದ್ದಾರೆ.
ಯಾವುದೇ ಹುಡುಗಿ ಬಾಯಿಂದ 'ಬ್ರದರ್' ಎಂಬ ಶಬ್ಧ ಬಂದೊಡನೆ ಸಹಜವಾಗಯೇ ಎಲ್ಲಾ ಹುಡುಗರು ಶಾಕ್ ಆಗುವಂತೆ ಚಂದನ್ ಶೆಟ್ಟಿ ಕೂಡ ಆಗಿದ್ದಾರೆ ಅಷ್ಟೇ. ಆದರೆ, ಅದನ್ನೇ ಮತ್ತೆ ಸುದ್ದಿ ಮಾಡಲು ಹೊರಟಿರುವ ಸೋಷಿಯಲ್ ಮೀಡಿಯಾ 'ಬ್ರದರ್' ಅಂದ ತಕ್ಷಣ ಚಂದನ್ ಶೆಟ್ಟಿ ರಿಯಾಕ್ಷನ್ ವಿಭಿನ್ನವಾಗಿತ್ತು, ಅವರಿಗೆ ಸಂಜನಾ ಬ್ರದರ್ ಅಂದಿದ್ದು ಇಷ್ಟ ಆಗಿಲ್ಲ. ಚಂದನ್ ಮನಸ್ಸಿನಲ್ಲಿ ಸಂಜನಾಗೆ ತಂಗಿಯ ಸ್ಥಾನ ಇಲ್ಲ' ಎಂಬ ಅರ್ಥದಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.
ದರ್ಶನ್ 'ಡೆವಿಲ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಕಲರ್‌ಫುಲ್ ಫೋಟೋಸ್ ನೋಡಿ..
ಅಂದರೆ, ಈ ಸಾಮಾಜಿಕ ಜಾಲತಾಣ ಎಂಬ ಮಾಯಾವಿ ಸಿಂಗಲ್ ಆಗೋರು, ಡಿವೋರ್ಸ್ ಆಗಿರೋರು ಯಾರನ್ನೂ ಕೂಡ ನೆಮ್ಮದಿಯಾಗಿ ಇರಲು ಬಿಡಲ್ಲ. ಅವರಿಗೊಂದು ಜೋಡಿ ಕಟ್ಟಿದ ಹೊರತೂ ಸದಕ್ಕೆ ಸಮಾಧಾನವೇ ಇಲ್ಲ ಎನ್ನಬಹುದು. ಅದರಿಂದ ಚಂದನ್ ಶೆಟ್ಟಿ ಸಹ ಹೊರತಾಗಿಲ್ಲ, ಸಂಜನಾ ಕೂಡ. ಸದ್ಯ ಹೇಗಿದೆ ವಾತಾವರಣ ಎಂದರೆ, 'ಗಾಸಿಪ್ ಹರಡುವುದು ಸೋಷಿಯಲ್ ಮೀಡಿಯಾ ಕೆಲಸ, ಅದಕ್ಕೆ ಕ್ಲಾರಿಟಿ ಕೊಡುವುದು ಮೀಡಿಯಾ ಕೆಲಸ' ಎಂಬಂತಾಗಿದೆ. ಚಂದನ್ ಶೆಟ್ಟಿ ಹಾಗು ಸಂಜನಾ ಆನಂದ್ ಸಹ ಸೋಷಿಯಲ್ ಮೀಡಿಯಾ ಸುದ್ದಿಗೆ ಮೀಡಿಯಾದಲ್ಲೇ ಕ್ಲಾರಿಟಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.