ಗ್ಲೋಬಲ್ 'ಮಾರ್ಟಿನ್'​​ಗೆ ಎದುರಾಗಿದೆ ಲೋಕಲ್​ ಪ್ರಾಬ್ಲಮ್; ಸಂಭಾವನೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ರಾ?

By Vaishnavi Chandrashekar  |  First Published Oct 5, 2024, 10:41 AM IST

ಮಾರ್ಟಿನ್ ರಿಲೀಸ್ ಅಗುತ್ತಾ ಇಲ್ವಾ? ಎಪಿ ಆರ್ಜುನ್ ನಿರ್ಧಾರದಿಂದ ಮತ್ತೆ ಧ್ರುವ ಸರ್ಜಾ ಸಂಕಷ್ಟದಲ್ಲಿ.....


ಮಾರ್ಟಿನ್ ಸದ್ಯದ ಸ್ಯಾಂಡಲ್‌ವುಡ್ ಅಂಗಳದ ಮೋಸ್ಟ್ ಅವೇಟೆಡ್ ಮೂವಿ. ಕನ್ನಡದಲ್ಲಿ ಸಿದ್ದವಾಗಿ ಪ್ಯಾನ್ ಇಂಡಿಯಾ ಸದ್ದು ಮಾಡೋಕೆ ಸಜ್ಜಾಗಿರೋ ಈ ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ತೆರೆಗೆ ಬರ್ತಾ ಇದೆ. ಸದ್ಯ ರಿಲೀಸ್ ಟೈಂನಲ್ಲಿ ಮಾರ್ಟಿನ್ ಟೀಂ ಭರ್ಜರಿ ಪ್ರಮೋಷನ್ ಮಾಡ್ತಾ ಇದೆ. ಆದರೆ ಮಾರ್ಟಿನ್ ಡೈರೆಕ್ಟರ್ ಅರ್ಜುನ್ ಮಾತ್ರ ಪ್ರಮೋಷನ್ ಅಖಾಡದಿಂದ ಮಿಸ್ಸಿಂಗ್. ಈ ಬಗ್ಗೆ ಪ್ರಶ್ನೆ ಮಾಡಿದಾಗ ಬಂದಿದ್ದು ಶಾಕಿಂಗ್ ವಿಷ್ಯ.

ಯೆಸ್! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಇನ್ನೇನು ಅಕ್ಟೋಬರ್ 11ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರಲಿಕ್ಕೆ ಸಜ್ಜಾಗಿದೆ. ದಸರಾ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಈಗಾಗ್ಲೇ ಕನ್ನಡದ ಜೊತೆಗೆ ಅನ್ಯಭಾಷೆಗಳಲ್ಲೂ ಬಹು ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಆದರೆ ಗ್ಲೋಬಲ್ ಲೆವೆಲ್​​ನ ಮಾರ್ಟಿನ್​​​ಗೆ ಲೋಕಲ್​ ಪ್ರಾಬ್ಲೆಂ ಒಂದು ಎದುರಾಗಿದೆ. ಈಗಾಗಲೇ ಸೆನ್ಸಾರ್ ಮುಗಿಸಿ U/A ಸರ್ಟಿಫಿಕೇಟ್ ಪಡೆದುಕೊಂಡಿರೋ ಮಾರ್ಟಿನ್ ಟೀಂ ಭರ್ಜರಿಯಾಗಿ ಪ್ರಮೋಷನ್ಸ್ ಮಾಡ್ತಾ ಇದೆ. ಆದರೆ ಈ ಸಾರಿ ಮಾರ್ಟಿನ್ ಡೈರೆಕ್ಟರ್ ಎ.ಪಿ ಅರ್ಜುನ್ ಮಾತ್ರ ಮಿಸ್ ಆಗಿದ್ದಾರೆ. ಮಾರ್ಟಿನ್ ರಿಲೀಸ್ ಟೈಂ.. ಡೈರೆಕ್ಟರ್‌ಗೆ ಬ್ಯಾಡ್ ಟೈಂ ಎದುರಾಗಿದೆ. ಸಿನಿಮಾಗೆ ಸ್ಟೇ ತರಲು ಎ.ಪಿ ಅರ್ಜುನ್ ಮುಂದಾಗಿದ್ದಾರೆ. ಈ ಬಗ್ಗೆ ಬಂದ ಪ್ರಶ್ನೆಗಳಿಗೆ ನಿರ್ಮಾಪಕ ಉದಯ್ ಕೆ ಮೆಹತಾ ಉತ್ತರಿಸಿದ್ದು ಹೀಗೆ. 

Tap to resize

Latest Videos

undefined

ಕಾಂತಾರ 1ರಲ್ಲಿ ಮೂಲಪುರುಷನೇ ಮೋಹನ್ ಲಾಲ್; ಕಾಡಬೆಟ್ಟು ಶಿವನ ತಾತನ ಪಾತ್ರ ಓಕೆ ಅಯ್ತಾ?

ಅಸಲಿಗೆ ನಿರ್ದೇಶಕ ಎ.ಪಿ ಅರ್ಜುನ್ ಸಂಭಾವನೆ ವಿಚಾರಕ್ಕೆ ಈ ಹಿಂದೆ  ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದರು. ಇದೀಗ ಈ ವಿಚಾರ ಕೋರ್ಟ್ ಅಂಗಳದಲ್ಲಿದೆ. ಸೋ ಕೋರ್ಟ್ ಮೆಟ್ಟಿಲೇರಿರೋ ಅರ್ಜುನ್‌ನ ಸಹಜವಾಗೇ ನಿರ್ಮಾಪಕರು ಪ್ರಮೋಷನ್‌ನಿಂದ ದೂರ ಇಟ್ಟಿದ್ದಾರೆ. ಇದಕ್ಕಿಂತ ಶಾಕಿಂಗ್ ವಿಷ್ಯ ಅಂದ್ರೆ ಮಾರ್ಟಿನ್ ಸಿನಿಮಾದ ರಿಲೀಸ್‌ಗೆ ಸ್ಟೇ ತರೋದಕ್ಕೆ ಎ.ಪಿ ಅರ್ಜುನ್ ಮುಂದಾಗಿದ್ದಾರಂತೆ. ಆದರೆ ಅದಕ್ಕೆ ಕೋರ್ಟ್ ಇದಕ್ಕೆ ಅವಕಾಶ ಕೊಟ್ಟಿಲ್ಲ. ಅಕ್ಟೋಬರ್ 11ಕ್ಕೆ ಸಿನಿಮಾ ನಿರಾತಂಕವಾಗಿ ರಿಲೀಸ್ ಆಗ್ತಾ ಇದೆ. ಈ ವಿವಾದದ ನಡುವೆಯೂ ಮಾರ್ಟಿನ್ ಟೀಂನ ಉತ್ಸಾಹವೇನೂ ಕಮ್ಮಿ ಆಗಿಲ್ಲ. ಈ ಸಿನಿಮಾ ಜಸ್ಟ್ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸದ್ದು ಮಾಡುತ್ತೆ ಅನ್ನೋ ಭರವಸೆಯಲ್ಲಿದ್ದಾರೆ. ಅರ್ಜುನ್ ಸರ್ಜಾರ ಅದ್ಭುತ ಕಥೆ, ಮತ್ತದನ್ನು ತೆರೆ ಮೇಲೆ ತರೋದಕ್ಕೆ ಧ್ರುವ ಸರ್ಜಾ ಹಾಕಿರೋ ಶ್ರಮ. ಅದ್ಭುತ ತಂತ್ರಜ್ಞರ ಬಳಗ ನಿರ್ದೇಶಕ ಎ.ಪಿ ಅರ್ಜುನ್​ರ ಶ್ರಮ ಈ ಸಿನಿಮಾ ಶಕ್ತಿ ಅಂದರೆ ತಪ್ಪಾಗಲ್ಲ.

ಇನ್ನೂ ಮಾರ್ಟಿನ್‌ನ ಮನದನ್ನೇಯಾಗಿ ಕಾಣಿಸಿಕೊಂಡಿರೋ ವೈಭವಿ ಶಾಂಡಿಲ್ಯ , ಚಿತ್ರದ ಬಗ್ಗೆ ಸೃಷ್ಟಿಯಾಗಿರೋ ನಿರೀಕ್ಷೆಯನ್ನ ಕಂಡು ಸಖತ್ ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಜೀವ ನೀನೆ ಸಾಂಗ್‌ಗೆ ಎಲ್ಲಾ ಭಾಷೆಗಳಲ್ಲಿ ಸಿಕ್ಕಿರೋ ರೆಸ್ಪಾನ್ಸ್ ನೋಡಿ , ಫುಲ್ ಖುಷ್ ಆಗಿದ್ದಾರೆ. ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಈ ಸಿನಿಮಾದಲ್ಲಿ ಅದ್ಭುತವಾದ ಕಾಮಿಡಿ ಟ್ರ್ಯಾಕ್ ಕಟ್ಟಿ ಕೊಟ್ಟಿದ್ದಾರೆ. ಮಾರ್ಟಿನ್ ನೋ ಡೌಟ್ ಕನ್ನಡದ ಬಿಗ್ಗೆಸ್ಟ್‌ ಸಿನಿಮಾ ಅನ್ನೋ ಚಿಕ್ಕಣ್ಣ, ಇದು ವಿಶ್ವವೇ ನಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡುತ್ತೆ ಅನ್ನೋ ಭರವಸೆಯಲ್ಲಿದ್ದಾರೆ.

ಸಮಂತಾ ನನಗೆ ಬೇಕೆಂದು ನಾಗಾರ್ಜುನ ಬಳಿನೇ ಕೇಳಿದ್ರಾ KTR; ಅಸಲಿ ಸತ್ಯ ಇಲ್ಲಿದೆ...

ಮಾರ್ಟಿನ್ ಪ್ರಮೋಷನ್ ಕೊಂಚ ಕಡಿಮೆಯಾಯ್ತು ಅಂತ ಎಲ್ಲರೂ ಮಾತನಾಡ್ತಿರೋವಾಗಲೇ, ಮಾರ್ಟಿನ್ ಟೀಮ್ ಮೆಗಾ ಪ್ಲಾನ್ ಮಾಡಿಕೊಂಡಿದೆ. ಅಕ್ಟೋಬರ್ 4ಕ್ಕೆ ಹೀರೋ ಇಂಟ್ರೋಡಕ್ಷನ್ ಸಾಂಗ್ ರಿಲೀಸ್ ಆಗ್ತಾ ಇದೆ. ಅತ್ಯಂತ ಅದ್ದೂರಿಯಾಗಿ ಮೂಡಿಬಂದಿರೋ ಈ ಸಾಂಗ್ ವೊಂದೇ ಸಾಕು ಬೇರೆ ಪ್ರಮೋಷನ್ನೇ ಬೇಕಿಲ್ಲ ಅಂತಿದೆ ಮಾರ್ಟಿನ್ ಟೀಂ. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ಧ್ರುವ ಸರ್ಜಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋ ಅಕ್ಟೋಬರ್ 5ಕ್ಕೆ ಹುಬ್ಬಳ್ಳಿಯಲ್ಲಿ ಫ್ಯಾನ್ಸ್ ಮೀಟ್ ನಡೆಯಲಿದೆ. ಆ ಬಳಿಕ  ಮುಂಬೈನಲ್ಲಿ ಅಕ್ಟೋಬರ್ 6 ರಂದು ಭರ್ಜರಿ ಪ್ರೀ ರಿಲೀಸ್ ಇವೆಂಟ್ ಕೂಡ  ನಡೆಯಲಿದೆ. ಸೋ ಪ್ರಮೋಷನ್ಸ್ ಗೆ ಇಷ್ಟೆಲ್ಲಾ ಪ್ಲ್ಯಾನ್ ಮಾಡಿರೋ ಮಾರ್ಟಿನ್ ಟೀಂ , ಅಕ್ಟೋಬರ್ 11ರಿಂದ ವರ್ಲ್ಡ್ ವೈಡ್ ವಿಜಯಯಾತ್ರೆ ಮಾಡಲಿಕ್ಕೆ ಸಜ್ಜಾಗಿದೆ.

click me!