'ಕಸ್ತೂರಿ ಮಹಲ್‌' ಟೀಸರ್‌ ಬಿಡುಗಡೆ ಮಾಡಿದ ಪುನೀತ್‌ ರಾಜ್‌ಕುಮಾರ್!

By Kannadaprabha News  |  First Published Jan 4, 2021, 9:52 AM IST

ದಿನೇಶ್‌ ಬಾಬು ನಿರ್ದೇಶನದ, ಶಾನ್ವಿ ಶ್ರೀವಾಸ್ತವ್‌ ನಟನೆಯ ‘ಕಸ್ತೂರಿ ಮಹಲ್‌’ ಚಿತ್ರದ ಟೀಸರ್‌ಅನ್ನು ಪುನೀತ್‌ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. 
 


ಎ2 ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟೀಸರ್‌ ಅನಾವರಣಗೊಂಡಿದ್ದು, ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಸ್ವತಃ ಪುನೀತ್‌ರಾಜ್‌ಕುಮಾರ್‌ ಕೂಡ ಟೀಸರ್‌ ನೋಡಿ ಮೆಚ್ಚುಗೆ ಸೂಚಿಸಿರುವುದು ವಿಶೇಷ. ‘ನಮ್ಮ ಕುಟುಂಬಕ್ಕೆ ದಿನೇಶ್‌ ಬಾಬು ಅವರು ತುಂಬಾ ಆತ್ಮೀಯರು.

ಕೇವಲ 20 ದಿನಗಳಲ್ಲಿ 'ಕಸ್ತೂರಿ ಮಹಲ್' ಚಿತ್ರೀಕರಣ ಕಂಪ್ಲೀಟ್ ಮಾಡಿದ ಶಾನ್ವಿ! 

Tap to resize

Latest Videos

ಶಿವಣ್ಣ ಅವರಿಗೆ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಹಾಗೂ ನನ್ನ ನಟನೆಯಲ್ಲಿ ‘ಅಭಿ’ ಚಿತ್ರವನ್ನು ನಿರ್ದೇಶನ ಮಾಡಿದವರು. ‘ಕಸ್ತೂರಿ ಮಹಲ್‌’ ಅವರ ನಿರ್ದೇಶನದ 50ನೇ ಸಿನಿಮಾ ಎಂದು ತಿಳಿದು ಖುಷಿ ಆಯ್ತು. ಕನ್ನಡದಲ್ಲಿ ದಿನೇಶ್‌ ಬಾಬು ಅವರು ಉತ್ತಮ ಚಿತ್ರಗಳನ್ನು ನೀಡುತ್ತಿದ್ದಾರೆ. ‘ಕಸ್ತೂರಿ ಮಹಲ್‌’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿ’ ಎಂದು ಪುನೀತ್‌ರಾಜ್‌ಕುಮಾರ್‌ ಹೇಳಿದರು.

ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆಗಳಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್‌, ರಂಗಾಯಣ ರಘು, ಶ್ರುತಿ ಪ್ರಕಾಶ್‌, ನೀನಾಸಂ ಅಶ್ವತ್‌್ಥ ಮುಂತಾದವರು ನಟಿಸಿದ್ದಾರೆ. ರವೀಶ್‌ ಆರ್‌ ಸಿ ನಿರ್ಮಾಪಕರು. ಪಿ ಕೆ ಎಚ್‌ ದಾಸ್‌ ಛಾಯಾಗ್ರಾಹಣವಿದೆ.

 

click me!