
ಪುನೀತ್ ರಾಜ್‌ಕುಮಾರ್ ಹೊಸ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿದ್ದಾರೆ. ಸಾರಥಿ, ನವಗ್ರಹದಂಥಾ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ದಿನಕರ್ ಇದೀಗ ಪುನೀತ್ ರಾಜ್‌ಕುಮಾರ್ ಅವರಿಗೆ ಕತೆ ರೆಡಿ ಮಾಡಿಕೊಂಡಿದ್ದಾರೆ.
ಇವರಿಬ್ಬರ ಫ್ರೆಶ್ ಕಾಂಬಿನೇಶನ್‌ನಲ್ಲಿ ಬರುವ ಚಿತ್ರ ಯಾವ ಜಾನರ್‌ನದು, ಅದರ ಶೀರ್ಷಿಕೆ ಏನು ಎಂಬುದೆಲ್ಲ ಇನ್ನಷ್ಟೇ ರಿವೀಲ್ ಆಗಬೇಕಿದೆ.
ರಿಷಭ್ ಶೆಟ್ಟಿ ನೆನಪಿನ ಹುಡುಗಿಯೇ ಹಾಡು ವೈರಲ್..!
ಸದ್ಯದ ಮಾಹಿತಿ ಪ್ರಕಾರ ಪುನೀತ್ ರಾಜ್‌ಕುಮಾರ್, ದಿನಕರ್ ಕತೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕೊರೋನಾ ಲಾಕ್‌ಡೌನ್ ಟೈಮ್‌ನಲ್ಲಿ ಸ್ಕ್ರಿಪ್ಟ್ ರೆಡಿ ಮಾಡಿಕೊಳ್ಳುತ್ತಿರುವುದಾಗಿ ದಿನಕರ್ ಈ ಹಿಂದೆ ಹೇಳಿದ್ದರು.
ಆದರೆ ಈ ಸ್ಕ್ರಿಪ್ಟ್ ಅನ್ನು ಯಾರಿಗೆ ರೆಡಿ ಮಾಡುತ್ತಿದ್ದೇನೆ ಎಂಬ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಬದಲಿಗೆ ಸ್ಕ್ರಿಪ್ಟ್ ರೆಡಿಯಾಗಿದೆ, ನಟ ನಟಿಯರ ಆಯ್ಕೆ ಮಾಡಿಲ್ಲ, ಅದೆಲ್ಲವನ್ನೂ ಪ್ರಿ ಪ್ರೊಡಕ್ಷನ್ ಸಂದರ್ಭ ರಿವೀಲ್ ಮಾಡೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ಕಥೆಯನ್ನು ಪುನೀತ್‌ಗಾಗಿಯೇ ಸಿದ್ಧ ಮಾಡಿರಬೇಕು ಎಂಬುದು ಗಾಂಧೀನಗರದಲ್ಲಿ ಕೇಳಿಬರುತ್ತಿರುವ ಮಾತು.
ಕನ್ನಡಕ್ಕೆ ಬರ್ತಿದ್ದಾರೆ ಮಾಸ್ಟರ್ ನಟ ವಿಜಯ್..!
ಸದ್ಯ ಪುನೀತ್ ರಾಜ್‌ಕುಮಾರ್ ಯುವರತ್ನ ಚಿತ್ರದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಈ ಚಿತ್ರ ಏಪ್ರಿಲ್ 1ಕ್ಕೆ ತೆರೆ ಕಾಣಲಿದೆ. ಜೊತೆಗೆ ಜೇಮ್ಸ್ ಶೂಟಿಂಗ್‌ನಲ್ಲೂ ಭಾಗಿಯಾಗುತ್ತಿದ್ದಾರೆ. ಜೇಮ್ಸ್ ಬಳಿಕ ಹೊಂಬಾಳೆ ಬ್ಯಾನರ್‌ನಲ್ಲಿ ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಅದಾದ ಬಳಿಕವಷ್ಟೇ ಪುನೀತ್, ಈ ಹೊಸ ಚಿತ್ರಕ್ಕೆ ಜೊತೆಯಾಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.